Video: ತಳ್ಳು ನೂಕು ಐಸಾ; ರೈಲನ್ನೇ ತಳ್ಳಿ ಬೆಂಕಿ ಹೊತ್ತಿದ್ದ ಕಂಪಾರ್ಟ್​ಮೆಂಟ್ ಬೇರ್ಪಡಿಸಿದ ಪ್ರಯಾಣಿಕರು

ಎಂಜಿನ್​ ಬೇರ್ಪಟ್ಟ ಕಾರಣ ರೈಲು ಮುಂದೆ ಚಲಿಸಲು ಸಾಧ್ಯವಿಲ್ಲ. ಬೆಂಕಿ ತಗುಲಿದ ಕೋಚ್​ಗಳನ್ನು ಕೂಡಲೇ ಬೇರ್ಪಡಿಸದೆ ಇದ್ದರೆ, ಅದು ಇನ್ನಷ್ಟು ಬೋಗಿಗಳಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ.

Video: ತಳ್ಳು ನೂಕು ಐಸಾ; ರೈಲನ್ನೇ ತಳ್ಳಿ ಬೆಂಕಿ ಹೊತ್ತಿದ್ದ ಕಂಪಾರ್ಟ್​ಮೆಂಟ್ ಬೇರ್ಪಡಿಸಿದ ಪ್ರಯಾಣಿಕರು
ಪ್ರಯಾಣಿಕರು ರೈಲನ್ನು ತಳ್ಳುತ್ತಿರುವ ದೃಶ್ಯ
Follow us
TV9 Web
| Updated By: Lakshmi Hegde

Updated on: Mar 05, 2022 | 1:47 PM

ಬಸ್​, ಲಾರಿ ಸೇರಿ ಇನ್ನಿತರ ವಾಹನಗಳು ಸ್ಟಾರ್ಟ್​ ಆಗದೆ ಇದ್ದಾಗ ಅದನ್ನು ಒಂದಷ್ಟು ಮಂದಿ ಸೇರಿ ತಳ್ಳುವುದು ಸರ್ವೇ ಸಾಮಾನ್ಯ. ಈ ದೃಶ್ಯವನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಉತ್ತರಪ್ರದೇಶದ ಮೀರತ್​ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್​​ನಲ್ಲಿ ಪ್ರಯಾಣಿಕರು ರೈಲನ್ನು ತಳ್ಳಬೇಕಾಗಿ ಬಂತು. ಅನೇಕರು ಸೇರಿ ಟ್ರೇನ್​​ ತಳ್ಳುವ ದೃಶ್ಯ ಈಗ ಸಿಕ್ಕಾಪಟೆ ವೈರಲ್​ ಆಗಿದೆ. ದೌರಾಲಾ ರೈಲ್ವೆ ಸ್ಟೇಶನ್​​ನಲ್ಲಿ ನಿಂತಿದ್ದ ಸಹರಾನ್​ಪುರ-ದೆಹಲಿ ಪ್ರಯಾಣಿಕರ ರೈಲಿನ ಎಂಜಿನ್​ ಮತ್ತು ಎರಡು ಕೋಚ್​ಗಳಿಗೆ ಬೆಂಕಿ ತಗುಲಿತ್ತು. ರೈಲು ನಿಂತಿದ್ದ ಕಾರಣ ಪ್ರಯಾಣಿಕರು ಕೋಚ್​ಗಳಿಂದ ಇಳಿದು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಯಿತು.

ಹೀಗೆ ಬೆಂಕಿ ತಗುಲಿದ ಎಂಜಿನ್​ ಮತ್ತು ಎರಡು ಕಂಪಾರ್ಟ್​​ಮೆಂಟ್​ಗಳನ್ನು ರೈಲಿನ ಉಳಿದ ಕಂಪಾರ್ಟ್​​ಮೆಂಟ್​​ನಿಂದ ಬೇರ್ಪಡಿಸಿ ದೂರ ಸರಿಸಲು ಹೀಗೆ ಪ್ರಯಾಣಿಕರಲ್ಲ ಸೇರಿ ತಳ್ಳಿದ್ದಾರೆ. ಎಂಜಿನ್​ ಬೇರ್ಪಟ್ಟ ಕಾರಣ ರೈಲು ಮುಂದೆ ಚಲಿಸಲು ಸಾಧ್ಯವಿಲ್ಲ. ಬೆಂಕಿ ತಗುಲಿದ ಕೋಚ್​ಗಳನ್ನು ಕೂಡಲೇ ಬೇರ್ಪಡಿಸದೆ ಇದ್ದರೆ, ಅದು ಇನ್ನಷ್ಟು ಬೋಗಿಗಳಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಟೇಶನ್​​ನಲ್ಲಿದ್ದ ಪ್ರಯಾಣಿಕರೆಲ್ಲ ಸೇರಿ, ಉದ್ದನೆಯ ರೈಲನ್ನು ತಳ್ಳಿದ್ದಾರೆ. ಯಾರಿಗೂ ಪ್ರಾಣ ಹಾನಿಯಾಗಲಿಲ್ಲ. ಹಾಗಂತ ಬೆಂಕಿ ತಗುಲಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ.

ಬಿಹಾರದ ಮಧುಬನಿ ರೈಲ್ವೆ ಸ್ಟೇಶನ್​ನಲ್ಲಿ ನಿಂತಿದ್ದ ಖಾಲಿ ರೈಲಿನಲ್ಲಿ ಫೆ.19ರಂದು ಬೆಂಕಿ ಕಾಣಿಸಿಕೊಂಡು (Fire In Train) ಆತಂಕ ಸೃಷ್ಟಿಸಿತ್ತು. ಬೆಳಗ್ಗೆ 9.13ರ ಹೊತ್ತಿಗೆ ಸ್ವತಂತ್ರ ಸೇನಾನಿ ಸೂಪರ್​ಫಾಸ್ಟ್​ ಎಕ್ಸ್​ಪ್ರೆಸ್​ ರೈಲಿಗೆ ಬೆಂಕಿ ತಗುಲಿ ಹೊತ್ತಿ ಉರಿದಿತ್ತು. ರೈಲಿನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಬೆಂಕಿ ಉರಿದು, ದಟ್ಟವಾದ ಹೊಗೆ ಆವರಿಸಿದ್ದ ರೈಲಿನ ವಿಡಿಯೋ ವೈರಲ್ ಆಗಿತ್ತು. ಅಲ್ಲಿನ ಸಿಬ್ಬಂದಿ ಬಕೆಟ್​ಗಳ ಮೂಲಕ ನೀರು ಹಾಕಿ ನಂದಿಸಿದ್ದರು.

ಇದನ್ನೂ ಓದಿ: Shane Warne: ಅಗಲಿದ ಕ್ರಿಕೆಟ್ ದಂತಕಥೆಯ ಹೆಸರನ್ನು ಜೀವಂತವಾಗಿರಿಸಲು ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ