Shane Warne: ಅಗಲಿದ ಕ್ರಿಕೆಟ್ ದಂತಕಥೆಯ ಹೆಸರನ್ನು ಜೀವಂತವಾಗಿರಿಸಲು ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ

Shane Warne: ಶೇನ್ ವಾರ್ನ್‌ಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಸಂಬಂಧಿಸಿದಂತೆ ಹಲವು ನೆನಪುಗಳಿವೆ. ಈ ಮೈದಾನದಲ್ಲಿ, ಅವರು ಟೆಸ್ಟ್ ಮತ್ತು ODI ಸೇರಿದಂತೆ ಒಟ್ಟು 39 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Shane Warne: ಅಗಲಿದ ಕ್ರಿಕೆಟ್ ದಂತಕಥೆಯ ಹೆಸರನ್ನು ಜೀವಂತವಾಗಿರಿಸಲು ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ
ಶೇನ್ ವಾರ್ನ್ ಹೆಸರಿನಲ್ಲಿ ಎಂಸಿಜಿ ಸ್ಟ್ಯಾಂಡ್
Follow us
TV9 Web
| Updated By: ಪೃಥ್ವಿಶಂಕರ

Updated on: Mar 05, 2022 | 1:25 PM

ಶೇನ್ ವಾರ್ನ್ (Shane Warne) ಅವರ ಹಠಾತ್ ನಿಧನಕ್ಕೆ ವಿಶ್ವ ಕ್ರಿಕೆಟ್​ನಲ್ಲಿ ಶೋಕ ಅಲೆ ಎದ್ದಿದೆ. ಕ್ರಿಕೆಟ್ ದಿಗ್ಗಜರು, ವಾರ್ನ್​ ಅಭಿಮಾನಿಗಳು ಸೇರಿದಂತೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಹೀಗಿರುವಾಗ ಸ್ಪಿನ್ ರಾಜನಿಗೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಗೌರವ ಸಲ್ಲಿಸುತ್ತಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ತನ್ನ ಕಡೆಯಿಂದ ಈ ನಿಟ್ಟಿನಲ್ಲಿ ವಿಶೇಷ ನಿರ್ಧಾರವನ್ನು ಕೈಗೊಂಡಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿರುವ ಸ್ಟ್ಯಾಂಡ್‌ಗೆ ವಾರ್ನ್​ ಹೆಸರನ್ನು ಮರುನಾಮಕರಣ ಮಾಡಲು ನಿರ್ಧರಿಸಿದೆ. ಶೇನ್ ವಾರ್ನ್ ಸಾವಿನ ಕೆಲವು ಗಂಟೆಗಳ ಮೊದಲು ರಾಡ್ನಿ ಮಾರ್ಷ್ ಜಗತ್ತಿಗೆ ವಿದಾಯ ಹೇಳಿದರು. ವಾರ್ನ್ ಅವರ ಸಾವಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದರು. ಆದರೆ, ಮಾರ್ಷ್ ನಿಧನಕ್ಕೆ ಸಂತಾಪ ಸೂಚಿಸಿದ ಕೆಲವೇ ಗಂಟೆಗಳಲ್ಲಿ ವಾರ್ನ್ ಸಾವಿನ ಸುದ್ದಿ ಇಡೀ ವಿಶ್ವ ಕ್ರಿಕೆಟ್ ಅನ್ನು ಬೆಚ್ಚಿಬೀಳಿಸಿದೆ.

ಶೇನ್ ವಾರ್ನ್ ಹೆಸರಿನಲ್ಲಿ ಎಂಸಿಜಿ ಸ್ಟ್ಯಾಂಡ್ ಈಗ ವಾರ್ನ್​ ಗೌರವಾರ್ಥವಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿನ ಸ್ಟ್ಯಾಂಡ್ ಅನ್ನು ಮರುನಾಮಕರಣ ಮಾಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಕಾರ, MCG ಯ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು SK ವಾರ್ನ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೊಂಡಿದೆ. ಈ ಮೂಲಕ ಅಗಲಿದ ಸ್ಪಿನ್ ಮಾಂತ್ರಿಕನಿಗೆ ಗೌರವ ಪೂರ್ಣ ವಿದಾಯ ಹೇಳುತ್ತಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶೇನ್ ವಾರ್ನ್ ಅಂಕಿಅಂಶಗಳು ಶೇನ್ ವಾರ್ನ್‌ಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಸಂಬಂಧಿಸಿದಂತೆ ಹಲವು ನೆನಪುಗಳಿವೆ. ಈ ಮೈದಾನದಲ್ಲಿ, ಅವರು ಟೆಸ್ಟ್ ಮತ್ತು ODI ಸೇರಿದಂತೆ ಒಟ್ಟು 39 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 22.78 ರ ಸರಾಸರಿಯಲ್ಲಿ 102 ವಿಕೆಟ್ಗಳನ್ನು ಪಡೆದಿದ್ದಾರೆ, ಇದರಲ್ಲಿ 52 ರನ್ಗಳಿಗೆ 7 ವಿಕೆಟ್ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಶೇನ್ ವಾರ್ನ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಿದ 11 ಟೆಸ್ಟ್‌ಗಳಲ್ಲಿ 56 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 28 ಏಕದಿನ ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ.

ವಾರ್ನ್ ಸಾವಿನ ಬಗ್ಗೆ ರಿಕಿ ಪಾಂಟಿಂಗ್ ಸಂತಾಪ ಶೇನ್ ವಾರ್ನ್ ಸಾವಿನಿಂದ ಅವರ ಸಹ ಆಟಗಾರ ರಿಕಿ ಪಾಂಟಿಂಗ್ ಕೂಡ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅವರಿಗೆ ಸಂಬಂಧಿಸಿದ ನೆನಪುಗಳನ್ನು ಹಂಚಿಕೊಂಡು ಅವರ ನಿಧನಕ್ಕೆ ಪಾಂಟಿಂಗ್ ಸಂತಾಪ ಸೂಚಿಸಿದರು.

ಇದನ್ನೂ ಓದಿ:IND vs SL: 4 ವರ್ಷಗಳ ನಂತರ ಟೆಸ್ಟ್‌ನಲ್ಲಿ ಶತಕ ಬಾರಿಸಿದ ರವೀಂದ್ರ ಜಡೇಜಾ! ಬೃಹತ್​ ಮೊತ್ತದತ್ತ ಭಾರತ