AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s World Cup 2022: ಕೊನೆಯ ಓವರ್‌ನಲ್ಲಿ ಸೋತ ಇಂಗ್ಲೆಂಡ್! ಶುಭಾರಂಭ ಮಾಡಿದ ಆಸ್ಟ್ರೇಲಿಯಾ

Women's World Cup 2022: ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಗೆಲ್ಲಲು 16 ರನ್ ಗಳಿಸಬೇಕಿತ್ತು. ಆದರೆ, ಕೊನೆಯ 6 ಎಸೆತಗಳಲ್ಲಿ ಅವರು ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ಇಂಗ್ಲೆಂಡ್ ಕೂಡ ಕೊನೆಯ ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡಿತು.

Women's World Cup 2022: ಕೊನೆಯ ಓವರ್‌ನಲ್ಲಿ ಸೋತ ಇಂಗ್ಲೆಂಡ್! ಶುಭಾರಂಭ ಮಾಡಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ವನಿತಾ ತಂಡ
TV9 Web
| Updated By: ಪೃಥ್ವಿಶಂಕರ|

Updated on: Mar 05, 2022 | 2:51 PM

Share

ಐಸಿಸಿ ಮಹಿಳಾ ವಿಶ್ವಕಪ್‌ (ICC Women’s World Cup)ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ರೋಚಕ ಪಂದ್ಯ ನಡೆಯಿತು. ಆದರೆ ಈ ಪಂದ್ಯವನ್ನು ಆಸ್ಟ್ರೇಲಿಯಾ 12 ರನ್‌ಗಳಿಂದ ಗೆದ್ದುಕೊಂಡಿತು. ಪಂದ್ಯವು ಎಷ್ಟು ಆಸಕ್ತಿದಾಯಕವಾಗಿತ್ತು ಎಂದರೆ ಅದರ ಫಲಿತಾಂಶವನ್ನು ತಲುಪಲು ಕೊನೆಯ ಓವರ್‌ ತನಕ ಕಾಯಬೇಕಾಯ್ತು. ಕೊನೆಯಲ್ಲಿ ಆಸ್ಟ್ರೇಲಿಯಾ ತಮ್ಮ ಗೆಲುವಿನ ಸ್ಕ್ರಿಪ್ಟ್ ಅನ್ನು ಬರೆಯಿತು. ಇದರೊಂದಿಗೆ ಇಂಗ್ಲೆಂಡ್ ವನಿತೆಯರ ತಂಡ ಟೂರ್ನಿಯಲ್ಲಿ ಗೆಲುವಿನ ಆರಂಭವನ್ನು ಕಳೆದುಕೊಂಡಿತು. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಗೆಲ್ಲಲು 16 ರನ್ ಗಳಿಸಬೇಕಿತ್ತು. ಆದರೆ, ಕೊನೆಯ 6 ಎಸೆತಗಳಲ್ಲಿ ಅವರು ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ಇಂಗ್ಲೆಂಡ್ ಕೂಡ ಕೊನೆಯ ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡಿತು.

ಐಸಿಸಿ ಮಹಿಳಾ ವಿಶ್ವಕಪ್‌ನ 12ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 310 ರನ್ ಗಳಿಸಿತ್ತು. ಉತ್ತರವಾಗಿ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು.

ಹ್ಯಾನ್ಸ್ ಮತ್ತು ಲ್ಯಾನಿಂಗ್ ಅವರಿಂದ ಅದ್ಭುತ ಇನ್ನಿಂಗ್ಸ್ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿ ರಾಚೆಲ್ ಹೈನ್ಸ್ ಭರ್ಜರಿ ಶತಕ ಸಿಡಿಸಿ 131 ಎಸೆತಗಳಲ್ಲಿ 130 ರನ್ ಗಳಿಸಿದರು. ಈ ವೇಳೆ ಅವರು 14 ಬೌಂಡರಿ ಹಾಗೂ 1 ಸಿಕ್ಸರ್‌ ಬಾರಿಸಿದರು. ಹ್ಯಾನ್ಸ್ ಲ್ಯಾನಿಂಗ್ ಜೊತೆ ಎರಡನೇ ವಿಕೆಟ್​ಗೆ ಶತಕದ ಜೊತೆಯಾಟ ನಡೆಸಿದರು. ಈ ಜೊತೆಯಾಟದಲ್ಲಿ ಮೆಗ್ ಲ್ಯಾನಿಂಗ್ 110 ಎಸೆತಗಳಲ್ಲಿ 86 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು.

ಇವರಿಬ್ಬರನ್ನು ಹೊರತುಪಡಿಸಿ ಬೆತ್ ಮೂನಿ 19 ಎಸೆತಗಳಲ್ಲಿ 27 ರನ್ ಗಳಿಸಿದರು. ಅಲಿಸ್ಸಾ ಪೆರ್ರಿ 5 ಎಸೆತಗಳಲ್ಲಿ 14 ರನ್ ಗಳಿಸಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೊನೆಯವರೆಗೂ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ನೇಟ್ ಸೀವರ್ ಆಸ್ಟ್ರೇಲಿಯಾದ 3 ವಿಕೆಟ್‌ಗಳಲ್ಲಿ 2 ವಿಕೆಟ್ ಪಡೆದರು.

12 ರನ್‌ಗಳ ಅಂತರದಲ್ಲಿ ಸೋತ ಇಂಗ್ಲೆಂಡ್ ಈಗ ಇಂಗ್ಲೆಂಡ್‌ಗೆ 311 ರನ್‌ಗಳ ದೊಡ್ಡ ಗುರಿ ಇತ್ತು. ಈ ಗುರಿಯ ಮುಂದೆ ಖಾತೆ ತೆರೆಯದೆಯೇ ಮೊದಲ ಹೊಡೆತ ಬಿದ್ದಿತು. ಆದರೆ ನಂತರ ಎರಡನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ನಡೆಯಿತು. ಈ ಜೊತೆಯಾಟದಲ್ಲಿ ಇಂಗ್ಲೆಂಡ್ ನಾಯಕಿಯ ಕೊಡುಗೆ 40 ರನ್.

ಚೆಂಡಿನೊಂದಿಗೆ ಎರಡು ವಿಕೆಟ್ ಪಡೆದ ನೇಟ್ ಸಿವಾರ್ 109 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು ಕೇವಲ 85 ಎಸೆತಗಳಲ್ಲಿ ಈ ರನ್ ಗಳಿಸಿದರು. ಅವರನ್ನು ಹೊರತುಪಡಿಸಿ, ಬ್ಯೂಮಾಂಟ್ 82 ಎಸೆತಗಳಲ್ಲಿ ಅದ್ಭುತ 74 ರನ್ ಗಳಿಸಿದರು. ಈ ಇನ್ನಿಂಗ್ಸ್‌ಗಳು ಗೆಲುವಿನ ಭರವಸೆ ಮೂಡಿಸಿದವು, ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ವಿಶೇಷ ಕೊಡುಗೆ ನೀಡದ ಕಾರಣ ಇಂಗ್ಲೆಂಡ್ ಸೋಲನ್ನು ಎದುರಿಸಬೇಕಾಯಿತು. ಅಲನಾ ಕಿಂಗ್ 3 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದನ್ನೂ ಓದಿ:IND vs SL: 4 ವರ್ಷಗಳ ನಂತರ ಟೆಸ್ಟ್‌ನಲ್ಲಿ ಶತಕ ಬಾರಿಸಿದ ರವೀಂದ್ರ ಜಡೇಜಾ! ಬೃಹತ್​ ಮೊತ್ತದತ್ತ ಭಾರತ