ಉಕ್ರೇನ್ ಮೇಲಿನ ಯುದ್ಧ ಖಂಡಿಸಿ ನೇರ ಪ್ರಸಾರದಲ್ಲಿ ರಾಜೀನಾಮೆ ನೀಡಿದ ರಷ್ಯಾದ ಟಿವಿ ಚಾನೆಲ್ ಸಿಬ್ಬಂದಿ ವರ್ಗ: ಪ್ರಸಾರ ಸ್ಥಗಿತ
ರಷ್ಯಾದ ಟಿವಿ ಚಾನೆಲ್ವೊಂದರ ಸಿಬ್ಬಂದಿ ವರ್ಗ ನೇರಪ್ರಸಾರದಲ್ಲಿ ಉಕ್ರೇನ್ ಮೇಲೆ ಯುದ್ಧವನ್ನು ನಿಲ್ಲಿಸಿ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು (Ukraine- Russia War) ಮುಂದುವರೆಸಿದೆ. ಸತತ 10ನೇ ದಿನಕ್ಕೆ ಯುದ್ಧ ಕಾಲಿರಿಸಿದೆ. ಈ ನಡುವೆ ರಷ್ಯಾದ ಟಿವಿ ಚಾನೆಲ್ವೊಂದರ ಸಿಬ್ಬಂದಿ ವರ್ಗ ನೇರಪ್ರಸಾರದಲ್ಲಿ ಉಕ್ರೇನ್ ಮೇಲೆ ಯುದ್ಧ ಬೇಡ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ. ರಷ್ಯಾದ ಟಿವಿ ರೇನ್ (TV Rain) ಎನ್ನುವ ಚಾನೆಲ್ ನ ಸಿಬ್ಬಂದಿ ನೇರಪ್ರಸಾರದಲ್ಲಿ ರಾಜೀನಾಮೆ ನೀಡಿದ ನಂತರ ಮಾಧ್ಯಮ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿ ಸ್ಟುಡಿಯೋದಿಂದ ಹೊರ ಹೊರಟ ನಂತರ ಸ್ವಾನ್ ಲೇಕ್ (Swan Lake) ಬಾಲೆಟ್ ಎನ್ನುವ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ. ಈ ವಿಡಿಯೋವನ್ನು 1991 ರಲ್ಲಿ ಸೋವಿಯತ್ ಯೂನಿಯನ್ ಪತನವಾದಾಗ ರಷ್ಯಾದಲ್ಲಿ ಸರ್ಕಾರಿ ಟಿವಿ ಚಾನೆಲ್‌ಗಳಲ್ಲಿ ತೋರಿಸಲಾಗಿತ್ತು. ಇದೀಗ ಉಕ್ರೇನ್ ವಿರುದ್ಧದ ಯುದ್ಧವನ್ನು ಖಂಡಿಸಿ, ವಿಡಿಯೋ ಪ್ರಸಾರ ಮಾಡಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಜಗತ್ತಿನಾದ್ಯಂತ ವಿಡಿಯೋ ನೋಡಿದವರು ಅಚ್ಚರಿಗೊಂಡಿದ್ದಾರೆ.
#เสรีภาพสื่อ #รัสเซีย วิกฤต! . TV Rain/Dozhd ทีวีเสรีแห่งสุดท้ายถูกทางการสั่งแบน หลังเกาะติดข่าวรัสเซียบุก #ยูเครน . ฉากสุดท้ายของการอำลาผู้ชม มีการกล่าวทิ้งท้ายว่า “ไม่เอาสงคราม” . จากนั้นภาพตัดไปยังการแสดง Black Swan ที่เคยฉายบนทีวีเมื่อครั้งสหภาพโซเวียตล่มสลาย .#ยามเฝ้าจอ pic.twitter.com/1U2ka6z2eW
— ยามเฝ้าจอ (@YarmFaoJor) March 4, 2022
ಈ ಬಗ್ಗೆ ಮಾತನಾಡಿದ ಚಾನೆಲ್ನ ಸಿಇಒ ಈ ರೀತಿಯ ಯುದ್ಧವನ್ನು ನೋಡಿದ ಬಳಿಕ ಕೆಲಸ ಮಾಡಲು ಶಕ್ತಿ ಬೇಕು ಅದನ್ನು ಮತ್ತೆ ಪಡೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಕೆಲಸಕ್ಕೆ ವಾಪಸ್ಸಾಗುವ ಭರವಸೆಯಿದೆ ಎಂದಿದ್ದಾರೆ. ಅದಕ್ಕೂ ಮೊದಲು, ಉಕ್ರೇನ್‌ನಲ್ಲಿನ ಯುದ್ಧದ ಕವರೇಜ್‌ನ ಮಾಡುವಂತೆ ಸರ್ಕಾರದ ಒತ್ತಡ ಹೇರಿದ ಕಾರಣ ರಷ್ಯಾದ ಮತ್ತೊಂದು ಮಾಧ್ಯಮ ಔಟ್‌ಲೆಟ್, ಎಖೋ ಮಾಸ್ಕ್ವಿ ರೇಡಿಯೊ ಸ್ಟೇಷನ್ ಅನ್ನು ಮಂಗಳವಾರ ಪ್ರಸಾರ ಮಾಡಲಾಗಿತ್ತು.
ಇದನ್ನೂ ಓದಿ:
Published On - 9:44 am, Sat, 5 March 22