AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ukraine Crisis: 9,000 ರಷ್ಯನ್ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್; ಬೆಳವಣಿಗೆಯ 10 ಮುಖ್ಯಾಂಶಗಳು ಇಲ್ಲಿವೆ

Russia Ukraine War: ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರದಂದು ರಷ್ಯಾವು ಉಕ್ರೇನ್​ನಲ್ಲಿರುವ ಯುರೋಪ್​ನಲ್ಲೇ ಅತ್ಯಂತ ದೊಡ್ಡ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಿ, ಅದನ್ನು ವಶಕ್ಕೆ ಪಡೆದಿದೆ. ಇದನ್ನು ಜಾಗತಿಕ ರಾಷ್ಟ್ರಗಳು ಖಂಡಿಸಿವೆ. ಶುಕ್ರವಾರದ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.

Ukraine Crisis: 9,000 ರಷ್ಯನ್ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್; ಬೆಳವಣಿಗೆಯ 10 ಮುಖ್ಯಾಂಶಗಳು ಇಲ್ಲಿವೆ
ಕೀವ್​ನ ಬೀದಿಯೊಂದರಲ್ಲಿ ಧ್ವಂಸಗೊಂಡಿರುವ ಟ್ರಕ್ ಮುಂಭಾಗದಲ್ಲಿ ನಡೆದು ಹೋಗುತ್ತಿರುವ ಉಕ್ರೇನ್ ಸೈನಿಕ
TV9 Web
| Updated By: shivaprasad.hs|

Updated on: Mar 05, 2022 | 9:16 AM

Share

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ (Russia Ukraine War) ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಜಪೋರಿಝಿಯಾದ ಮೇಲೆ ರಷ್ಯಾವು ಶುಕ್ರವಾರ ದಾಳಿ ನಡೆಸಿತ್ತು. ಶುಕ್ರವಾರದಂದು ರಷ್ಯಾವು ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಳ್ಳುವ ಮುನ್ನ ಶೆಲ್ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ವೇಳೆ ಸ್ಥಾವರ ಸ್ಫೋಟಗೊಂಡರೆ ಇಡೀ ಯುರೋಪ್​ಗೆ ಹಾನಿಯಾಗಲಿದೆ ಎಂದು ಉಕ್ರೇನ್ ಎಚ್ಚರಿಸಿತ್ತು. ಅಲ್ಲದೇ ಪರಮಾಣ ಸ್ಥಾವರಗಳನ್ನು ಕೇಂದ್ರೀಕರಿಸಿ ದಾಳಿ ನಡೆಸುತ್ತಿರುವ ರಷ್ಯಾದ ನಿಲುವಿನ ವಿರುದ್ಧ ಅಮೇರಿಕಾ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳು ತೀವ್ರ ಆತಂಕ ಹೊರಹಾಕಿದವು. ಇದನ್ನು ‘ಪರಮಾಣು ಭಯೋತ್ಪಾದನೆ’ (Nuclear Terrorism) ಎಂದು ಕರೆಯಲಾಯಿತು. ಅಂತಿಮವಾಗಿ ಯುರೋಪ್​ನ ಅತ್ಯಂತ ದೊಡ್ಡ ಪರಮಾಣು ಸ್ಥಾವರ ಜಪೋರಿಝಿಯಾ ರಷ್ಯಾದ ವಶವಾಗಿದೆ. ಪ್ರಸ್ತುತ ರಷ್ಯಾವು ಉಕ್ರೇನ್​ನ ಎರಡನೇ ದೊಡ್ಡ ಪರಮಾಣು ಸ್ಥಾವರವಾದ ಯುಜ್ನೌಕ್ರೇನ್ಸ್ಕ್​ನಿಂದ ಕೇವಲ 20 ಮೈಲುಗಳಷ್ಟು ದೂರದಲ್ಲಿವೆ ಎಂದು ಅಮೇರಿಕಾ ರಾಯಭಾರಿಯೊಬ್ಬರು ಹೇಳಿದ್ದಾರೆ. ಶುಕ್ರವಾರದ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.

  1. ದೂರದರ್ಶನ ಭಾಷಣದಲ್ಲಿ ಮಾತನಾಡುತ್ತಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರಷ್ಯಾವನ್ನು ವಿರೋಧಿಸುವುದರಿಂದ ದೂರ ಉಳಿಯಬೇಡಿ ಎಂದು ಕರೆ ನೀಡಿರುವ ಅವರು, ಉಕ್ರೇನ್ ಉಳಿಯದಿದ್ದರೆ ಯುರೋಪ್ ಕೂಡ ಉಳಿಯುವುದಿಲ್ಲ ಎಂದಿದ್ದಾರೆ.
  2. ನ್ಯಾಟೋ ಪಡೆಗಳ ನಿರ್ಧಾರವನ್ನು ಝೆಲೆನ್​ಸ್ಕಿ ಟೀಕಿಸಿದ್ದಾರೆ. ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ಹೇರಲು ನ್ಯಾಟೋ ಪಡೆಗಳು ವಿಫಲವಾಗಿವೆ ಎಂದಿರುವ ಝೆಲೆನ್​ಸ್ಕಿ, ನ್ಯಾಟೋ ಮೈತ್ರಿಯನ್ನು ದುರ್ಬಲ ಎಂದು ಕರೆದಿದ್ದಾರೆ. ಮೈತ್ರಿಯು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದಿರುವ ಅವರು, ನಿಷೇಧ ಹೇರಿದ್ದರೆ ರಷ್ಯಾದ ವಾಯು ಪಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತಿತ್ತು ಎಂದಿದ್ದಾರೆ. ಅಲ್ಲದೇ ಇದರ ಪರಿಣಾಮದ ಕುರಿತು ಮಾತನಾಡಿರುವ ಝೆಲೆನ್​ಸ್ಕಿ, ‘‘ಈ ದಿನದ ನಂತರ ಯುದ್ಧದಿಂದ ನಿಧನಹೊಂದುವ ನಾಗರಿಕರ ಸಾವಿಗೆ ಇದೇ ನಿರ್ಧಾರ ಕಾರಣ’’ ಎಂದು ಹೇಳಿದ್ದಾರೆ. ಈ ನಡುವೆ ಝೆಲೆನ್​ಸ್ಕಿ ಶನಿವಾರ ಬೆಳಿಗ್ಗೆ ಅಮೇರಿಕಾ ಸೆನೆಟರ್‌ಗಳೊಂದಿಗೆ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಲಿದ್ದಾರೆ.
  3. ಕಳೆದ ಗುರುವಾರ ದಾಳಿ ಪ್ರಾರಂಭವಾದಾಗಿನಿಂದ 9,000 ಕ್ಕೂ ಹೆಚ್ಚು ರಷ್ಯನ್ ಪಡೆಗಳು ಸಾವನ್ನಪ್ಪಿವೆ ಎಂದು ಕೀವ್ ಹೇಳಿಕೊಂಡಿದೆ. ವಿಶ್ವಸಂಸ್ಥೆ ತಿಳಿಸಿರುವಂತೆ ಉಕ್ರೇನ್​ನ 1,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
  4. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರದಂದು ಹೊಸ ಕಾನೂನು ತಂದಿದ್ದಾರೆ. ಇದರ ಅನ್ವಯ, ‘ದೇಶ ಹಾಗೂ ಸೇನೆಯ ವಿರುದ್ಧ ನಕಲಿ ಸುದ್ದಿ ಹಂಚಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾಗಿದೆ’. ಈ ಕಾನೂನನ್ನು ಜಾರಿಗೊಳಿಸಿದ ಕೂಡಲೇ, ಬಿಬಿಸಿ, ಸಿಎನ್ಎನ್, ಬ್ಲೂಮ್‌ಬರ್ಗ್ ಮತ್ತು ಇತರ ಸುದ್ದಿ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸುವುದಾಗಿ ತಿಳಿಸಿವೆ.
  5. ಉಕ್ರೇನ್ ಯುದ್ಧದ ವಿರುದ್ಧ ರಷ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂಬಂಧ ‘ರಷ್ಯಾ ಮೀಡಿಯಾ ವಾಚ್‌ಡಾಗ್’ ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಉಕ್ರೇನ್ ಸಂಘರ್ಷಕ್ಕೆ ‘ಯುದ್ಧ’ ಎಂಬ ಪದವನ್ನು ಬಳಸದೆ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎಂದು ಮಾಸ್ಕೋ ಪದೇ ಪದೇ ಹೇಳುತ್ತಾ ಬಂದಿದೆ.
  6. ಬ್ರಿಟನ್​ನ ಗುಪ್ತಚರ ವರದಿಯೊಂದರ ಪ್ರಕಾರ, ‘ಉಕ್ರೇನ್​ನ ವಾಯು ಪಡೆಗಳನ್ನು ಕುಗ್ಗಿಸಲು ರಷ್ಯಾ ಬಹಳ ಪ್ರಯತ್ನಪಡುತ್ತಿದೆ. ಇದರ ಪರಿಣಾಮವಾಗಿ ಉಕ್ರೇನ್ ಮೇಲಿನ ರಷ್ಯಾದ ದಾಳಿ ನಿಧಾನಗೊಂಡಿದೆ. ಜತೆಗೆ ಅವರ ಪಡೆಗಳಿಗೆ ವಾಯುಪಡೆಗಳಿಂದ ಸೂಕ್ತ ಬೆಂಬಲ ದೊರೆಯುತ್ತಿಲ್ಲ’ ಎಂದು ಹೇಳಲಾಗಿದೆ.
  7. ರಷ್ಯಾ ಪ್ರಸ್ತುತ ಬಂದರು ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಖೇರ್ಸನ್ ನಂತರ ಇದೀಗ ಮರಿಯುಪೋಲ್ ನಗರವನ್ನು ರಷ್ಯಾ ಸುತ್ತುವರೆದಿದೆ. ಪ್ರಸ್ತುತ ಈ ನಗರ ರಷ್ಯಾ ವಶವಾಗಿದೆ.
  8. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವೆಡೆ ನಡೆಯುತ್ತಿರುವ ಬಾಂಬ್ ದಾಳಿಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರಾಕರಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ದೂರವಾಣಿ ಮಾತುಕತೆಯಲ್ಲಿ ಪುಟಿನ್ ಮಾತನಾಡುತ್ತಾ, ಇವೆಲ್ಲ ದಾಳಿಯ ಹೇಳಿಕೆಗಳನ್ನು ನಿರಾಕರಿಸಿ, ಅವುಗಳನ್ನು ಪ್ರಚಾರಕ್ಕಾಗಿ ಮಾಡುತ್ತಿರುವ ನಕಲಿ ಸುದ್ದಿಗಳು ಎಂದಿದ್ದಾರೆ.
  9. ರಷ್ಯಾವು ಮಾತುಕತೆಯ ಕುರಿತೂ ಪ್ರಸ್ತಾಪಿಸಿದ್ದು, ಉಕ್ರೇನ್​ನಲ್ಲಿ ಹಾಗೂ ಉಕ್ರೇನ್​ನಲ್ಲಿ ಶಾಂತಿ ಬಯಸುವ ಜನರೊಂದಿಗೆ ರಷ್ಯಾ ಮಾತುಕತೆಗೆ ಮುಕ್ತವಾಗಿದೆ ಎಂದಿದೆ. ಆದರೆ ರಷ್ಯಾದ ಎಲ್ಲಾ ಬೇಡಿಕೆಗಳನ್ನು ಪೂರೈಸಬೇಕೆನ್ನುವ ಷರತ್ತನ್ನೂ ಹಾಕಲಾಗಿದೆ.
  10. ಈಗಾಗಲೇ ರಷ್ಯಾ ಹಾಗೂ ಉಕ್ರೇನ್ ನಡುವೆ ಎರಡು ಸುತ್ತಿನ ಕದನ ವಿರಾಮದ ಮಾತುಕತೆಗಳು ನಡೆದಿವೆ. ಮೂರನೇ ಸುತ್ತಿನ ಮಾತುಕತೆ ಮುಂದಿನ ವಾರ ನಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ:

ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ

Russia Ukraine War Live: ಅಮೆರಿಕ ಕಂಪನಿಗಳನ್ನು ನಿರ್ಬಂಧಿಸಿದ ರಷ್ಯಾ, ಉಕ್ರೇನ್​ನಿಂದ ಭಾರತೀಯರನ್ನು ಕರೆತರಲು ಸತತ ಪ್ರಯತ್ನ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ