Peshawar Blast: ಪೇಶಾವರ ಬಾಂಬ್ ಸ್ಫೋಟ ಪ್ರಕರಣ; 57ಕ್ಕೇರಿದ ಸಾವಿನ ಸಂಖ್ಯೆ, ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ಸ್

Pakistan: ಪೇಶಾವರದಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಲೆ ನಡೆದಿದ್ದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೇರಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ಸ್ ಹೊತ್ತುಕೊಂಡಿದೆ.

Peshawar Blast: ಪೇಶಾವರ ಬಾಂಬ್ ಸ್ಫೋಟ ಪ್ರಕರಣ; 57ಕ್ಕೇರಿದ ಸಾವಿನ ಸಂಖ್ಯೆ, ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ಸ್
ಬಾಂಬ್ ಸ್ಫೋಟದ ನಂತರ ಪ್ರಾರ್ಥನಾ ಸ್ಥಳದಲ್ಲಿ ಓಡಾಟ ನಡೆಸುತ್ತಿರುವ ಸಾರ್ವಜನಿಕರು
Follow us
| Updated By: shivaprasad.hs

Updated on:Mar 05, 2022 | 10:11 AM

ಪಾಕಿಸ್ತಾನ: ಪೇಶಾವರದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನಾ ಸಮಯದಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ (Peshawar Mosque Blast) ಮೃತಪಟ್ಟವರ ಸಂಖ್ಯೆ 57ಕ್ಕೇರಿದೆ. ಈ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಹೊತ್ತುಕೊಂಡಿದೆ ಎಂದು ಶನಿವಾರ ವರದಿಗಳು ತಿಳಿಸಿವೆ. ಶುಕ್ರವಾರ ಇಬ್ಬರು ಭಯೋತ್ಪಾದಕರು ಪೇಶಾವರದ ಮಸೀದಿ ಬಳಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದರು. ನಂತರ ಅವರಲ್ಲಿ ಒಬ್ಬರು ಕಟ್ಟಡಕ್ಕೆ ಪ್ರವೇಶಿಸಿ ಸ್ಫೋಟ ನಡೆಸಿದ್ದರು. ದಾಳಿಯಲ್ಲಿ 57 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಆತ್ಮಹತ್ಯಾ ಸ್ಫೋಟವನ್ನು ಖಂಡಿಸಿದ್ದು, ‘ಪ್ರಾರ್ಥನಾ ಸ್ಥಳಗಳು ಸ್ವರ್ಗವಾಗಬೇಕೇ ಹೊರತು, ದಾಳಿಗೆ ಗುರಿಯಲ್ಲ’ ಎಂದಿದ್ದಾರೆ. ‘ಶುಕ್ರವಾರದ ಪ್ರಾರ್ಥನೆಯ ವೇಳೆ ಪಾಕಿಸ್ತಾನದ ಪೇಶಾವರದ ಮಸೀದಿಯ ಮೇಲೆ ನಡೆದ ಭೀಕರ ದಾಳಿಯನ್ನು ನಾನು ಖಂಡಿಸುತ್ತೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು (HRCP) ಷಿಯಾ ಆರಾಧಕರನ್ನು ಗುರಿಯಾಗಿಸುವ ಉದ್ದೇಶದಿಂದ ನಡೆದ ಆತ್ಮಹತ್ಯಾ ಸ್ಫೋಟವನ್ನು ತೀವ್ರವಾಗಿ ಖಂಡಿಸಿದೆ. ‘‘ಈ ದಾಳಿಯು ಸ್ಪಷ್ಟವಾಗಿ ಶಿಯಾ ಆರಾಧಕರನ್ನು ಗುರಿಯಾಗಿಸುವ ಉದ್ದೇಶ ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿರುವ ಪಂಥೀಯ ದಾಳಿಯ ಲಕ್ಷಣವನ್ನು ಇದು ಹೊಂದಿದೆ’’ ಎಂದು ಹೆಚ್​ಆರ್​ಸಿಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಸೀದಿ ಮೇಲಿನ ದಾಳಿಯನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತೀವ್ರವಾಗಿ ಖಂಡಿಸಿ, ತುರ್ತು ವೈದ್ಯಕೀಯ ಸೇವೆ ನೀಡಲು ಆದೇಶಿಸಿದ್ದರು.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪಾಕಿಸ್ತಾನ ಪ್ರವಾಸದ ಭವಿಷ್ಯವೇನು?

24 ವರ್ಷಗಳ ನಂತರ ಆಸ್ಟ್ರೇಲಿಯಾವು ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ಬಂದಿಳಿದಿತ್ತು. ಆದರೆ ರಾವಲ್ಪಿಂಡಿಯಿಂದ ಕೇವಲ 190 ಕಿಮೀ ದೂರದಲ್ಲಿರುವ ಪೇಶಾವರದಲ್ಲಿ ಟೆಸ್ಟ್ ಪಂದ್ಯದ ಮೊದಲ ದಿನ ಬಾಂಬ್ ಸ್ಫೋಟ ನಡೆದಿದೆ. ಇದು ಆಸ್ಟ್ರೇಲಿಯಾ ಪ್ರವಾಸದ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ. ಈ ಹಿಂದೆ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ತೆರಳಿದ್ದ ನ್ಯೂಜಿಲೆಂಡ್ ಭದ್ರತಾ ಕಾರಣ ನೀಡಿ ದಿಡೀರ್ ವಾಪಸ್ಸಾಗಿತ್ತು. 2009ರಲ್ಲಿ ಶ್ರೀಲಂಕಾ ತಂಡದ ಆಟಗಾರರ ಮೇಲೆ ಲಾಹೋರ್​ನಲ್ಲಿ ದಾಳಿ ನಡೆದಿತ್ತು. ನಂತರದಲ್ಲಿ ದೀರ್ಘಕಾಲ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಿರಲಿಲ್ಲ. ಇದೀಗ ಆಸ್ಟ್ರೇಲಿಯಾದ ಮುಂದಿನ ನಿಲುವಿನ ಬಗ್ಗೆಯೂ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ:

ಉಕ್ರೇನ್​ ಮೇಲಿನ ಯುದ್ಧ ಖಂಡಿಸಿ ನೇರ ಪ್ರಸಾರದಲ್ಲಿ ರಾಜೀನಾಮೆ ನೀಡಿದ ರಷ್ಯಾದ ಟಿವಿ ಚಾನೆಲ್​ ಸಿಬ್ಬಂದಿ ವರ್ಗ: ಪ್ರಸಾರ ಸ್ಥಗಿತ

Ukraine Crisis: ಕೊರೆಯುವ ಚಳಿಯ ನಡುವೆಯೇ ರಷ್ಯನ್ ಪಡೆಗಳನ್ನು ಎದುರಿಸುತ್ತಿರುವ ಉಕ್ರೇನ್ ಸೈನಿಕರು; ಫೋಟೋಗಳು ಇಲ್ಲಿವೆ

Published On - 9:59 am, Sat, 5 March 22