AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ನೀನು ಭಾರತದ ನಾಯಿ”: ಆಸ್ಟ್ರೇಲಿಯಾದಲ್ಲಿ ಜನಾಂಗೀಯವಾಗಿ ನಿಂದಿಸಿ, ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ

ಆಸ್ಟ್ರೇಲಿಯಾದ ಜೀಲಾಂಗ್‌ನಲ್ಲಿ ಭಾರತೀಯ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಮೇಲೆ ಭೀಕರ ಜನಾಂಗೀಯ ದಾಳಿ ನಡೆದಿದೆ. ಜಿಮ್‌ನಿಂದ ಹೊರಬರುವಾಗ ಮೂವರು ವ್ಯಕ್ತಿಗಳಿಂದ ಹಲ್ಲೆಗೊಳಗಾದ ಹರ್ಮನ್, ಗಂಭೀರ ಗಾಯಗಳಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. "ಇಂಡಿಯನ್ ಡಾಗ್" ಎಂದು ನಿಂದಿಸಿದ ದಾಳಿಕೋರರಿಂದಾಗಿ ಆಸ್ಟ್ರೇಲಿಯಾದಲ್ಲಿ ಭಾರತೀಯರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿದೆ. ಪೊಲೀಸರು ಜನಾಂಗೀಯ ದ್ವೇಷದ ಅಪರಾಧವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ನೀನು ಭಾರತದ ನಾಯಿ: ಆಸ್ಟ್ರೇಲಿಯಾದಲ್ಲಿ ಜನಾಂಗೀಯವಾಗಿ ನಿಂದಿಸಿ, ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ
ನರ್ಸ್ ಹರ್ಮನ್ ಪ್ರೀತ್ ಸಿಂಗ್
ಅಕ್ಷಯ್​ ಪಲ್ಲಮಜಲು​​
|

Updated on: Feb 18, 2026 | 5:28 PM

Share

ಜೀಲಾಂಗ್, ಫೆ.18: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಜೀಲಾಂಗ್ ಎಂಬ ನಗರದ ಸಮೀಪವಿರುವ ಕೊರಿಯೊ (Corio) ಎಂಬಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಅವರ ಮೇಲೆ ಭೀಕರ ಜನಾಂಗೀಯ ದಾಳಿ ನಡೆದಿದೆ. ಫೆಬ್ರವರಿ 17 ತಡರಾತ್ರಿ ಹರ್ಮನ್ ಪ್ರೀತ್ ಸಿಂಗ್ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಹೊರಬರುವಾಗ ಈ ಘಟನೆ ಸಂಭವಿಸಿದೆ. ಮೂವರು ವ್ಯಕ್ತಿಗಳ ಗುಂಪು ಹರ್ಮನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹರ್ಮನ್ ಅವರನ್ನು “ಇಂಡಿಯನ್ ಡಾಗ್” (ಭಾರತೀಯ ನಾಯಿ) ಎಂದು ಜನಾಂಗೀಯವಾಗಿ ನಿಂದಿಸುತ್ತಿರುವುದು ಕೂಡ ಕಾಣಬಹುದು.

ಹರ್ಮನ್ ಅವರ ಮುಖಕ್ಕೆ ತಲೆಯಿಂದ ಜೋರಾಗಿ ಗುದ್ದಿದ ಪರಿಣಾಮ ಅವರ ಮೂಗಿನಿಂದ ರಕ್ತ ಬಂದು ದೊಡ್ಡ ಗಾಯಗಳಾಗಿವೆ. ಹರ್ಮನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆಯಿಂದ ಹರ್ಮನ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. “ನನಗೆ ಈಗ ಸುರಕ್ಷತೆಯ ಭಯವಾಗುತ್ತಿದೆ, ಮತ್ತೆ ಜಿಮ್‌ಗೆ ಹೋಗಲು ಸಾಧ್ಯವೇ ಎಂಬುದು ತಿಳಿಯುತ್ತಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅವರ ಕುಟುಂಬ ಕೂಡ ಇದರಿಂದ ಭಯಗೊಂಡಿದೆ.

ಕಳೆದ ವರ್ಷ ಅಂದರೆ ಡಿಸೆಂಬರ್​​ನಲ್ಲಿ ಇಂತಹದೇ ಒಂದು ಘಟನೆ ಸಿಡ್ನಿಯ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಆಚರಣೆಯ ವೇಳೆ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ 15 ಜನ ಸಾವನ್ನಪ್ಪಿದ್ದರು. ಈ ದಾಳಿಯ ಹಿಂದೆ ತಂದೆ-ಮಗ (ಸಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್) ಇರುವುದು ದೃಢಪಟ್ಟಿತ್ತು. ಸಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವರು ಮತ್ತು ಅವರು ಇಂದಿಗೂ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರು. ಸುಮಾರು 30 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರೂ, ಅವರು ಇಸ್ಲಾಮಿಕ್ ಸ್ಟೇಟ್ (IS) ಸಿದ್ಧಾಂತದಿಂದ ಪ್ರೇರಿತರಾಗಿ ಈ ಕೃತ್ಯ ಎಸಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಸ್ಕೂಬಿ ಡೂ ಪಾತ್ರಧಾರಿಗಳ ವೇಷ ತೊಟ್ಟು ಕಳ್ಳತನ ಮಾಡುತ್ತಿದ್ದವರ ಸ್ಕ್ವಿಡ್ ಗೇಮ್ ಪಾತ್ರಧಾರಿಯಂತೆ ಬಂದು ಹಿಡಿದ ಪೊಲೀಸ್

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಮೇಲೆ ನಡೆಯುತ್ತಿರುವ ಇಂತಹ ಹಲ್ಲೆಗಳು ಅಲ್ಲಿನ ಅನಿವಾಸಿ ಭಾರತೀಯರಲ್ಲಿ ಆತಂಕ ಮೂಡಿಸಿವೆ. ಜೀಲಾಂಗ್ ಪೊಲೀಸರು ಹರ್ಮನ್ ಪ್ರೀತ್ ಸಿಂಗ್ ಮೇಲಿನ ಹಲ್ಲೆಯನ್ನು ಜನಾಂಗೀಯ ದ್ವೇಷದ ಅಪರಾಧವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?