ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ

ಇವರ ಮೂಲ ಹೆಸರು ಅಲಿಜಾ ಎಂದಾಗಿದ್ದು, ಉಕ್ರೇನ್​ನವರು. ಟ್ರಾಲ್​​ ಯುವಕನನ್ನು ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಂಡಿದ್ದು, ಇಲ್ಲಿಯೇ ಇದ್ದಾರೆ. ಹೆಸರನ್ನು ಆಸಿಯಾ ಎಂದು ಬದಲಿಸಿಕೊಂಡಿರುವ ಇವರೀಗ ಇಬ್ಬರು ಮಕ್ಕಳ ತಾಯಿ.

ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ
ಯುದ್ಧ ನಿಲ್ಲಿಸಿ ಎಂದು ಮನವಿ ಮಾಡುತ್ತಿರುವ ಮಹಿಳೆ (ಮಗುವನ್ನು ಎತ್ತಿಕೊಂಡಿರುವವರು)
Follow us
TV9 Web
| Updated By: Lakshmi Hegde

Updated on: Mar 05, 2022 | 8:53 AM

ಉಕ್ರೇನ್​​ನಲ್ಲಿ ರಷ್ಯಾ (Russia-Ukraine War) ಪ್ರಾರಂಭಿಸಿರುವ ಯುದ್ಧ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಯುದ್ಧ ನಿಲ್ಲಿಸುವಂತೆ ಯಾರೆಷ್ಟೇ ರಷ್ಯಾಕ್ಕೆ ಆಗ್ರಹ, ಮನವಿ ಮಾಡಿದರೂ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಕಿವಿಗೊಡುತ್ತಿಲ್ಲ. ಇನ್ನೊಂದೆಡೆ, ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಕೂಡ ತಾವು ರಷ್ಯಾಕ್ಕೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದುಬಿಟ್ಟಿದ್ದಾರೆ. ಈ ಮಧ್ಯೆ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿರುವ ಟ್ರಾಲ್​​ನಲ್ಲಿ ಇರುವ ಉಕ್ರೇನಿಯನ್​ ಮಹಿಳೆಯೊಬ್ಬರು, ಹೇಗಾದರೂ ಸರಿ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಇವರ ಮೂಲ ಹೆಸರು ಅಲಿಜಾ ಎಂದಾಗಿದ್ದು, ಉಕ್ರೇನ್​ನವರು. ಟ್ರಾಲ್​​ ಯುವಕನನ್ನು ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಂಡಿದ್ದು, ಇಲ್ಲಿಯೇ ಇದ್ದಾರೆ. ಹೆಸರನ್ನು ಆಸಿಯಾ ಎಂದು ಬದಲಿಸಿಕೊಂಡಿರುವ ಇವರೀಗ ಇಬ್ಬರು ಮಕ್ಕಳ ತಾಯಿ. ಉಕ್ರೇನ್​ನಲ್ಲಿ ನನ್ನ ಹೆತ್ತವರು ಇದ್ದಾರೆ. ಈ ಭೀಕರ ಯುದ್ಧದ ಮಧ್ಯೆ ಅವರ ಯೋಗಕ್ಷೇಮದ ಬಗ್ಗೆ ನನಗೆ ಆತಂಕವಾಗುತ್ತಿದೆ. ಹೇಗಾದರೂ ನೀವು ಮುಂದಾಗಿ ಯುದ್ಧ ನಿಲ್ಲುವಂತೆ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ವಿನಂತಿಸಿದ್ದಾರೆ.

ಆಸಿಯಾ ಕಾಶ್ಮೀರದ ಉದ್ಯಮಿ ಬಿಲಾಲ್​ ಅಹ್ಮದ್​​ರನ್ನು ವಿವಾಹವಾಗಿ ಐದು ವರ್ಷವಾಗಿದೆ. ಅಂದಿನಿಂದಲೂ ಟ್ರಾಲ್​ನಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾ ಮತ್ತು ಉಕ್ರೇನ್​​ ಮಧ್ಯೆ ಹೇಗಾದರೂ ರಾಜಿ ಮಾಡಿಸಲು ಮುಂದಾಗಬೇಕು.  ಈ ಯುದ್ಧ ನಿಲ್ಲಲಿ ಎಂದು ಹೇಳಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ:  ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ