ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ

ಬಾಬಾ ವಂಗಾ ಭವಿಷ್ಯದ  ಪ್ರಕಾರ ರಷ್ಯಾ ಅಧ್ಯಕ್ಷ ಉಕ್ರೇನ್​ ಯುದ್ಧದ ಬಳಿಕ ಇನ್ನಷ್ಟು ಬಲಶಾಲಿಯಾಗಲಿದ್ದಾರೆ. ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ. ಭವಿಷ್ಯದಲ್ಲಿ ರಷ್ಯಾ ಜಗತ್ತಿನ ರಾಜನಾಗಲಿದೆ. ಆದರೆ ಯುರೋಪ್​ ಪಾಳುಭೂಮಿಯಾಗಲಿದೆ.

ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ
ಬಾಬಾ ವಂಗಾ
Follow us
TV9 Web
| Updated By: Pavitra Bhat Jigalemane

Updated on:Mar 02, 2022 | 12:47 PM

ಉಕ್ರೇನ್ (Ukraine)​ ದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಯಿಂದ ಕೇವಲ ಉಕ್ರೇನ್​ ಮಾತ್ರವಲ್ಲ ಇಡೀ ಜಗತ್ತಿನ ಜನ ಕಂಗೆಟ್ಟಿದ್ದಾರೆ. ಉಕ್ರೇನ್​ ನಾಗರಿಕರು ರಷ್ಯಾ ದಾಳಿಗೆ ಜೀವಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಬಾಬಾವಂಗಾ (Baba Vanga) ಭವಿಷ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಹಿಂದೆ ಹಲವು ಅಂತರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಇದೀಗ ಯುದ್ಧದಲ್ಲಿ ಯಾರು ಹೆಚ್ಚು ಬಲ, ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದ್ದು, ಈ ವಿಚಾರ ಜಗತ್ತಿನೆಲ್ಲೆಡೆ ವೈರಲ್​ ಆಗಿದೆ.

ಬಾಬಾ ವಂಗಾ ಭವಿಷ್ಯದ  ಪ್ರಕಾರ ರಷ್ಯಾ ಅಧ್ಯಕ್ಷ ಉಕ್ರೇನ್​ ಯುದ್ಧದ ಬಳಿಕ ಇನ್ನಷ್ಟು ಬಲಶಾಲಿಯಾಗಲಿದ್ದಾರೆ. ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ. ಭವಿಷ್ಯದಲ್ಲಿ ರಷ್ಯಾ ಜಗತ್ತಿನ ರಾಜನಾಗಲಿದೆ. ಆದರೆ ಯುರೋಪ್​ ಪಾಳುಭೂಮಿಯಾಗಲಿದೆ. ಎಲ್ಲವೂ ಹಿಮದಂತೆ ಕರಗುತ್ತದೆ, ಒಂದೇ ಒಂದು ವಿಷಯವನ್ನು ವ್ಲಾಡಿಮಿರ್ ಪುಟಿನ್ ಅವರ ವೈಭವ, ರಷ್ಯಾದ ವೈಭವವನ್ನು ಯಾರೂ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ . ರಷ್ಯಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಷ್ಯಾ ತನ್ನ ಹಾದಿಯಿಂದ ಎಲ್ಲರನ್ನು ತೆಗೆದುಹಾಕುತ್ತದೆ ಮತ್ತು ಜಗತ್ತನ್ನು ಆಳುತ್ತದೆ ಎಂದಿದ್ದಾರೆ.

ಯಾರು ಈ ಬಾಬಾ ವಂಗಾ? ಬಾಬಾ ವಂಗಾ ಅವರ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಎಂದಾಗಿದೆ. 1911ರಲ್ಲಿ ಬಲ್ಗೇರಿಯಾ ಜನಿಸಿದ ಇವರು, ತಮ್ಮ 12 ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ಕಣ್ಣನ್ನು ಕಳೆದುಕೊಂಡಿದ್ದರು. ಆದರೆ ಅವರಿಗೆ ಜಗತ್ತಿನ ಕುರಿತಾದ ಭವಿಷ್ಯವನ್ನು ಹೇಳುವ ಶಕ್ತಿ ಇದೆ ನಂಬಲಾಗಿದೆ. ಅದರಂತೆಯೇ ಬಾಬಾ ವಂಗಾ ಹೇಳಿದ್ದ ಘಟನೆಗಳು ಕೂಡ ನಡೆದಿದೆ. ಬಾಬಾ ವಂಗಾ 1996ರಲ್ಲಿ ಸಾವನ್ನಪ್ಪಿದರು ಆಗ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅಷ್ಟರಲ್ಲಿಯೇ ಅವರು ಹಲವು  ವರ್ಷಗಳವರೆಗೆ ಜಗತ್ತಿನಲ್ಲಿ ಏನು ನಡೆಯಲಿದೆ ಎನ್ನುವುದನ್ನು ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಸುಮಾರು 5079 ಘಟನೆಗಳ ಬಗ್ಗೆ ಹೇಳಿದ್ದರು ಎನ್ನಲಾಗಿದ್ದು ಅದರಲ್ಲಿ ಸಾಕಷ್ಟು ಘಟನೆಗಳು ಸತ್ಯವಾಗಿವೆ. ಅದರಲ್ಲಿ ಕೆಲವು ಎಂದರೆ ಚರ್ನೋಬಿಲ್​ ದುರಂತ, ಪ್ರಿನ್ಸಸ್​ ಡಯಾನಾ ಅವರ ಸಾವು ಸೇರಿದಂತೆ ಒಟ್ಟು ಸುಮಾರು 85 ಪ್ರತಿಶತದಷ್ಟು  ಭವಿಷ್ಯ ನಿಜವಾಗಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:

ಹಿಮಾಲಯನ್​ ಕಪ್ಪು ಕರಡಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅಧಿಕಾರಿಗಳು: ವಿಡಿಯೋ ವೈರಲ್

Published On - 10:02 am, Wed, 2 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್