ಉಕ್ರೇನ್ ಅಧ್ಯಕ್ಷರಾಗುವ ಮೊದಲು ಪ್ಯಾಡಿಂಗ್ಟನ್ ಕರಡಿ ಪಾತ್ರಕ್ಕೆ ಧ್ವನಿ ನೀಡಿದ್ದ ಝೆಲೆನ್ಸ್ಕಿ : ವಿಡಿಯೋ ವೈರಲ್​

ಉಕ್ರೇನ್ ಅಧ್ಯಕ್ಷರಾಗುವ ಮೊದಲು ಪ್ಯಾಡಿಂಗ್ಟನ್ ಕರಡಿ ಪಾತ್ರಕ್ಕೆ ಧ್ವನಿ ನೀಡಿದ್ದ ಝೆಲೆನ್ಸ್ಕಿ : ವಿಡಿಯೋ ವೈರಲ್​
ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ

ರಷ್ಯಾ ಕೆಂಗಣ್ಣಿಗೆ ಗುರಿಯಾದ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೊದಲು ಹಾಸ್ಯನಟ ಮತ್ತು ಹಿನ್ನೆಲೆ ಧ್ವನಿ ನೀಡುವ ಕಲಾವಿದರಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.

TV9kannada Web Team

| Edited By: Pavitra Bhat Jigalemane

Mar 01, 2022 | 3:46 PM

ರಷ್ಯಾ (Russia) ಕೆಂಗಣ್ಣಿಗೆ ಗುರಿಯಾದ ಉಕ್ರೇನ್​ ಅಧ್ಯಕ್ಷ (Ukraine President)  ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಮೊದಲು ಹಾಸ್ಯನಟ ಮತ್ತು ಹಿನ್ನೆಲೆ ಧ್ವನಿ ನೀಡುವ ಕಲಾವಿದರಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.  2019ರಲ್ಲಿ ಉಕ್ರೇನ್​ ಅಧ್ಯಕ್ಷರಾಗಿ ವೊಲೊಡಿಮಿರ್ ಝೆಲೆನ್ಸ್ಕಿ ಅಧಿಕಾರ ಸ್ವೀಕರಿಸಿದ್ದರು.ಆದರೆ 2006ರಲ್ಲಿ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಝೆಲೆನ್ಸ್ಕಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಅದಕ್ಕೂ ಜನಪ್ರಿಯ ಮಿಗಿಲಾಗಿ ಕಾರ್ಟೂನ್​ ಸಿನಿಮಾ ಪ್ಯಾಡಿಂಗ್ಟನ್ ಬಿಯರ್ (Paddington Bear)​ ಗೆ ಹಿನ್ನಲೆ ಧ್ವನಿಯನ್ನು  ನೀಡುತ್ತಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಪ್ಯಾಡಿಂಗ್ಟನ್ ಬಿಯರ್​ ನಿರ್ಮಾಪಕ ಮಾತನಾಡಿ 2004ರಲ್ಲಿ ಬಿಡುಗಡೆಯಾದ ಪ್ಯಾಡಿಂಗ್ಟ್​ನ್​ ಹಾಗೂ 2017ರಲ್ಲಿ ಬಿಡುಗಡೆಯಾದ ಪ್ಯಾಡಿಂಗ್ಟನ್​ 2 ಗೂ ಕೂಡ ಹಿನ್ನಲೆ ಧ್ವನಿಯನ್ನು ಝೆಲೆನ್ಸ್ಕಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟಿಷ್​ ನಟ ಹಗ್ ಬೊನೆವಿಲ್ಲೆ ಈ ಕಾರ್ಟೂನ್​ ಚಿತ್ರದಲ್ಲಿ ಕರಡಿಯ ಸಾಕು ತಂದೆಯ ಪಾತ್ರಕ್ಕೆ ಧ್ವನಿ ನೀಡಿದ್ದರು. ಈ ಕುರಿತು ಫ್ರಾಂಕ್ಲಿನ್​ ಲಿಯೊನಾರ್ಡೋ ಎನ್ನುವವರು ಪ್ಯಂಡಿಗ್ಟನ್​ನಲ್ಲಿರುವ ಧ್ವನಿ ವೊಲೊಡಿಮಿರ್ ಝೆಲೆನ್ಸ್ಕಿ  ಅದರದ್ದೇ ಆಗಿದೆ ಎಂದು ದೃಢಪಡಿಸಿದ್ದಾರೆ. ಸದ್ಯ ಈ ವಿಚಾರ ಎಲ್ಲಡೆ ವೈರಲ್​ ಆಗಿದೆ.

ಪ್ಯಾಡಿಂಗ್ಟನ್​ ಪ್ರಮೋಶನ್​ ವಿಡಿಯೋವನ್ನು ಬ್ರಿಟಿಷ್​ ನಟ ಹಗ್ ಬೊನೆವಿಲ್ಲೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ವೊಲೊಡಿಮಿರ್​ ಅವರು ತಮ್ಮ ಪರಿಚಯವನ್ನು ಹೇಳಿಕೊಂಡು ಚಿತ್ರದ ಪ್ರಮೋಶನ್​ ಬಗ್ಗೆ ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಹಿಂದೆ ಉಕ್ರೇನ್ ಅಧ್ಯಕ್ಷರು ಏನಾಗಿದ್ದರು ಎನ್ನುವ ಪ್ರಶ್ನೆಗೆ  ಒಂದು ಹಂತದ ಉತ್ತರ ದೊರಕಿದಂತಾಗಿದೆ.

ಇದನ್ನೂ ಓದಿ:

Viral Video: ಕವ್ವಾಲಿ ಹಾಡುವಾಗ ಮುರಿದುಬಿದ್ದ ವೇದಿಕೆ: ತಂಡದ ಸದಸ್ಯರು ಮಾಡಿದ್ದೇನು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada