Viral Video: ಕವ್ವಾಲಿ ಹಾಡುವಾಗ ಮುರಿದುಬಿದ್ದ ವೇದಿಕೆ: ತಂಡದ ಸದಸ್ಯರು ಮಾಡಿದ್ದೇನು ಗೊತ್ತಾ?

ತಂಡವೊಂದು ಸ್ಟೇಜ್​ ಮೇಲೆ ಕುಳಿತು ಕವ್ವಾಲಿ ಹಾಡುತ್ತಿರುವ ವೇಳೆ ಸ್ಟೇಜ್​ ಮುರಿದು ಬಿದ್ದಿದೆ. ಆದರೂ ಹಾಡು ನಿಲ್ಲಿಸದೇ ಮುಂದುವರೆಸಿದ ಹಾಡಿನ ತಂಡದ ಪ್ರಮುಖ ಹಾಡುಗಾರನನ್ನು ನೋಡಿ ನೆಟ್ಟಿಗರು ಬಿದ್ದು ಬಿದ್ದೂ ನಕ್ಕಿದ್ದಾರೆ.

Viral Video: ಕವ್ವಾಲಿ ಹಾಡುವಾಗ ಮುರಿದುಬಿದ್ದ ವೇದಿಕೆ: ತಂಡದ ಸದಸ್ಯರು ಮಾಡಿದ್ದೇನು ಗೊತ್ತಾ?
ವಿಡಿಯೋದಿಂ?ದ ಸೆರೆಹಿಡಿದ ದೃಶ್ಯ
Follow us
TV9 Web
| Updated By: Digi Tech Desk

Updated on:Mar 02, 2022 | 11:31 AM

ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ನೆಟ್ಟಿಗರನ್ನು ನಕ್ಕು ನಗಿಸುತ್ತವೆ. ಕೆಲವು ಸಂದರ್ಭಗಳ ವಿಡಿಯೋಗಳು ನಗು ತರಿಸಿದರೆ ಇನ್ನೂ ಕೆಲವು ಅಚಾನಕ್​ ದೃಶ್ಯಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುವಂತೆ ಮಾಡುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್​(Viral) ಆಗಿದೆ. ತಂಡವೊಂದು ಸ್ಟೇಜ್​ ಮೇಲೆ ಕುಳಿತು ಕವ್ವಾಲಿ (Qawwali ) ಹಾಡುತ್ತಿರುವ ವೇಳೆ ಸ್ಟೇಜ್​ ಮುರಿದು ಬಿದ್ದಿದೆ. ಆದರೂ ಹಾಡು ನಿಲ್ಲಿಸದೇ ಮುಂದುವರೆಸಿದ ಹಾಡಿನ ತಂಡದ ಪ್ರಮುಖ ಹಾಡುಗಾರನನ್ನು ನೋಡಿ ನೆಟ್ಟಿಗರು ಬಿದ್ದು ಬಿದ್ದೂ ನಕ್ಕಿದ್ದಾರೆ.

;

ವಿಡಿಯೋದಲ್ಲಿ ವೇದಿಕೆಯ ಮೇಲೆ 15-20 ಜನ ಕವ್ವಾಲಿ ಹಾಡುತ್ತಾ ಕುಳಿತಿರುತ್ತಾರೆ. ಒಂದೇ ಸಲಕ್ಕೆ ವೇದಿಕೆ ಮುರಿದು ಕೆಳಕ್ಕೆ ಕುಸಿಯುವುದನ್ನು ಕಾಣಬಹುದು. ಈ ವೇಳೆ ಪ್ರಮುಖ ಹಾಡುಗಾರ ತಂಡದ ಸದಸ್ಯರನ್ನು ಬೈದು ಕುಳಿತುಕೊಳ್ಳುವಂತೆ ಹೇಳಿ, ದೃತಿಗೆಡದೆ ಕವ್ವಾಲಿಯನ್ನು ಮುಂದುವರೆಸಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಸಾಮನ್ಯವಾಗಿ ಇಂತಹ ಸಂದರ್ಭಗಳಲ್ಲಿ ಭಯಗೊಂಡು ಹಾಡನ್ನು ನಿಲ್ಲಿಸುತ್ತಾರೆ. ಆದರೆ ಇಲ್ಲಿ ಹಾಗೆ ಆಗಲಿಲ್ಲ.

ಈ ವಿಡಿಯೋವನ್ನು ಅವಿನಾಶ್​ ಶರಣ್​ ಎನ್ನುವ ಐಎಎಸ್​ ಅಧಿಕಾರಿ ಹಂಚಿಕೊಂಡಿದ್ದಾರೆ. ಎಂತಹದ್ದೇ ಸಂದರ್ಭದಲ್ಲಿ ಕಲಾವಿದ ಭಯಗೊಳ್ಳುದೇ ಇರಬೇಕು ಎಂದು ಕ್ಯಾಪ್ಷನ್​ ನೀಡಲಾಗಿದೆ. ವೈರಲ್​ ಆದ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಕಲಾವಿದನ ಧೈರ್ಯ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಬುಕಾರೆಸ್ಟ್​ ಶಿಬಿರದಲ್ಲಿ ಭಾರತೀಯ ವಿದ್ಯಾರ್ಥಿನಿಯ ಹುಟ್ಟುಹಬ್ಬ ಆಚರಣೆ: ವಿಡಿಯೋ ವೈರಲ್​

Published On - 2:54 pm, Tue, 1 March 22