ಸಮುದ್ರ ತೀರದಲ್ಲಿ 1800ರ ಸಮಯದ ಹಡಗಿನ ಅವಶೇಷ ಪತ್ತೆ: ಸಂಶೋಧನೆಗೆ ಮುಂದಾದ ವಿಜ್ಞಾನಿಗಳ ತಂಡ

ಸಮುದ್ರ ತೀರದಲ್ಲಿ 1800ರ ಸಮಯದ ಹಡಗಿನ ಅವಶೇಷ ಪತ್ತೆ: ಸಂಶೋಧನೆಗೆ ಮುಂದಾದ ವಿಜ್ಞಾನಿಗಳ ತಂಡ

ಉತ್ತರ ಕೆರೊಲಿನ್​ ದೇಶದ ಸಮುದ್ರ ತೀರದಲ್ಲಿ ವರ್ಷಗಳ ಹಿಂದೆ ಮುಳುಗಿದ್ದ 1800 ಹಡಗುಗಳ ಅವಶೇಷಗಳು ಪತ್ತೆಯಾಗಿವೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಜಗತ್ತಿನೆಲ್ಲಡೆ ವೈರಲ್​ ಆಗಿದೆ. 

TV9kannada Web Team

| Edited By: Pavitra Bhat Jigalemane

Mar 01, 2022 | 11:55 AM

ಸಮುದ್ರ ಸದಾ ವಿಸ್ಮಯಗಳನ್ನು ಹುಟ್ಟುಹಾಕುವ ಜಾಗ. ತನ್ನದಲ್ಲದ ವಸ್ತುಗಳನ್ನು ದಡಕ್ಕೆ ತಂದೆಸೆಯುತ್ತದೆ ಎಂದು ಹೇಳಲಾಗುತ್ತದೆ.  ಇದೀಗ ಉತ್ತರ ಕೆರೊಲಿನ್​ ದೇಶದ ಸಮುದ್ರ ತೀರದಲ್ಲಿ ವರ್ಷಗಳ ಹಿಂದೆ ಮುಳುಗಿದ್ದ 1800ರ ಸಮಯದ ಹಡಗುಗಳ ಅವಶೇಷಗಳು ಪತ್ತೆಯಾಗಿವೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಜಗತ್ತಿನೆಲ್ಲಡೆ ವೈರಲ್​ ಆಗಿದೆ.  ಬಾಲ್ಡ್​ ಹೆಡ್​ ಐಲ್ಯಾಂಡ್​ನಲ್ಲಿರುವ ಶೋಲ್ಸ್ ಕ್ಲಬ್ ರೆಸಾರ್ಟ್ ಬೀಚ್‌ಫ್ರಂಟ್​ನಲ್ಲಿ ಅವಶೇಷಗಳು ಕಾಣಿಸಿಕೊಂಡಿವೆ. ರೆಸಾರ್ಟ್​​ನ ಫೇಸ್ಬುಕ್​ ಪುಟದಲ್ಲಿ ಪೋಟೊಗಳನ್ನು ಹಂಚಿಕೊಂಡಿದೆ.

ಸಮುದ್ರದ ದಡದಲ್ಲಿ ಕಂಡುಬಂದ ಹಡಗಿನ ಅವಶೇಷಗಳ ಬಗ್ಗೆ ಅಧ್ಯಯನ ನಡೆಸಲು ಪುರಾತತ್ವ ಇಲಾಖೆಯ ಸಂಶೋಧಕರು ಮುಂದಾಗಿದ್ದು, ಯಾವಾಗ ನಡೆದ ಅಪಘಾತದಿಂದ 1800 ವರ್ಷಗಳ ಕಾಲ ಹಡಗು ಮುಳುಗಿದೆ ಎಂದು ಪತ್ತೆ ಮಾಡಲು ಉತ್ಸುಕರಾಗಿದ್ದಾರೆ. ಅಲ್ಲದೆ ಈ ಕುರಿತು ವಿಜ್ಞಾನಿಗಳು ಅಧ್ಯಯನ ನಡೆಸಲು ಹೆಚ್ಚಿನ ಸಮಯದ ಅಗತ್ಯವಿದೆ. ಇನ್ನೂ ಕೆಲವು ಅವಶೇಷಗಳನ್ನು ಹುಡುಕಿ ಸಂಶೋಧನೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ರೆಸಾರ್ಟ್​​ ಬಳಿ ಇರುವ ಸಮುದ್ರದ ದಡದಲ್ಲಿ ಕಂಡುಬಂದ ಅವೇಶೇಷಗಳನ್ನು ಕಂಡು ಪ್ರವಾಸಿಗರೂ ಕೂಡ ಅಚ್ಚರಿಗೊಂಡಿದ್ದಾರೆ.  ಸದ್ಯ ಸಂಶೂಧಕರು ಚೀನಾ ಅಕ್ಷರದಲ್ಲಿ ಚಿನ್​ ಶೂ ಯುವಾನ 2 ಎಂದು ಬರೆದಿರುವುದನ್ನು ಗುರುತಿಸಿದ್ದು, ಪ್ರಾಥಮಿಕ ಸಂಶೋಧನೆಯಲ್ಲಿ ಹಡಗು 19ನೇ ಶತಮಾನದ್ದು ಎಂದು ಹೇಳಲಾಗಿದ್ದು, ಯಾವುದೇ ಸರಕುಗಳನ್ನು ಸಾಗಿಸುತ್ತಿದ್ದುದರ ಕುರಿತು ಪುರಾವೆಗಳು ದೊರೆತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

10 ವರ್ಷಗಳ ಹಿಂದೆ ಕಳೆದು ಹೋಗಿದ್ದ ಐ-ಫೋನ್​ ಶೌಚಾಲಯದಲ್ಲಿ ಪತ್ತೆ: ಇದ್ಹೇಗೆ ಸಾಧ್ಯ ಎಂದ ನೆಟ್ಟಿಗರು

Follow us on

Most Read Stories

Click on your DTH Provider to Add TV9 Kannada