AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚ್ಚಾ ಬಾದಾಮ್​ ಖ್ಯಾತಿಯ ಬುಬನ್​ ಬಡ್ಯಾಕರ್​ಗೆ ಅಪಘಾತ: ಆಸ್ಪತ್ರೆಗೆ ದಾಖಲು

ರಾತ್ರಿ ಬೆಳಗಾಗುವಷ್ಟರಲ್ಲಿ ಕಚ್ಚಾ ಬಾದಾಮ್​ ಹಾಡಿನ ಮೂಲಕ ಹೊಸ ಸೆನ್ಸೇಷನ್​ ಹುಟ್ಟುಹಾಕಿದ ಗಾಯಕ ಬುಬನ್​ ಬಡ್ಯಾಕರ್​ ಕಾರು ಅಪಘತಾದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಚ್ಚಾ ಬಾದಾಮ್​ ಖ್ಯಾತಿಯ ಬುಬನ್​ ಬಡ್ಯಾಕರ್​ಗೆ ಅಪಘಾತ: ಆಸ್ಪತ್ರೆಗೆ ದಾಖಲು
ಕಚ್ಚಾ ಬಾದಾಮ್​ ಗಾಯಕ
Follow us
TV9 Web
| Updated By: Pavitra Bhat Jigalemane

Updated on:Mar 01, 2022 | 1:21 PM

ರಾತ್ರಿ ಬೆಳಗಾಗುವಷ್ಟರಲ್ಲಿ ಕಚ್ಚಾ ಬಾದಾಮ್(Kacha Badam) ಹಾಡಿನ ಮೂಲಕ ಹೊಸ ಸೆನ್ಸೇಷನ್​ ಹುಟ್ಟುಹಾಕಿದ ಗಾಯಕ ಬುಬನ್​ ಬಡ್ಯಾಕರ್(Buban Badykar)​ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಬನ್ ಇತ್ತೀಚೆಗೆ ಸೆಕೆಂಡ್​ ಹ್ಯಾಂಡ್​ ಕಾರ್​ ಖರೀದಿಸಿದ್ದು, ಅದನ್ನು ಕಲಿಯುತ್ತಿರುವಾಗ ಅಪಘಾತಕ್ಕೀಡಾಗಿದ್ದಾರೆ. ಬುಬನ್​ ಅವರು ಎದೆಯ ಭಾಗದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಬುಬನ್​ ಅವರನ್ನು ಸದ್ಯ ಸುರಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಬನ್​ ಬಡ್ಯಾಕರ್​ ಪಶ್ಚಿಮ ಬಂಗಾಳ ಮೂಲದ ಬಿರ್ಭೂಮ್ ಗ್ರಾಮದ ಕಡಲೆಕಾಯಿ ವ್ಯಾಪಾರಿ. ಕಡಲೆಕಾಯಿ ಮಾರಾಟ ಮಾಡುವ ವೇಳೆ ಕಚ್ಚಾ ಬಾದಾಮ್​ ಹಾಡನ್ನುಹಾಡಿ ತಾವು ತಂದಿರುವ ಕಡಲೆಕಾಯಿಯನ್ನು ಕೊಳ್ಳುವಂತೆ ಹೇಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರು ಹಾಡು ಕಚ್ಚಾ ಬಾದಾಮ್​ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬುಬನ್​ ಅವರ ಹಾಡಿನ ಸಾಲಿಗೆ ರಿಮಿಕ್ಸ್​ ಹಾಕಿದ ನಂತರವಂತೂ ಇನ್ಸ್ಟಾಗ್ರಾಮ್​ನಲ್ಲಿ ಕಚ್ಚಾ ಬಾದಾಮ್​ ಹಾಡಿನ ರೀಲ್ಸ್​​ಗಳದ್ದೇ ಕಾರುಬಾರಾಗಿತ್ತು.  ರಿಮಿಕ್ಸ್​​ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಹಂಚಿಕೊಂಡ ಮೇಲೆ 50 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದು ನೆಟ್ಟಿಗರ  ಮನ ಗೆದ್ದಿತ್ತು.

ಬುಬನ್​ ತನ್ನ ಪತ್ನಿ ಮತ್ತು ಮಗನನ್ನು ಕಡಲೆಕಾಯಿ ಮಾರಾಟ ಮಾಡಿ ಸಾಕುತ್ತಿದ್ದರು. ಇವರ ಹಾಡು ವೈರಲ್​ ಆಗುತ್ತಿದ್ದಂತೆ ಸ್ಟಾರ್ ನಟ ನಟಿಯರೂ ಕೂಡ ಇವರ ಹಾಡಿಗೆ ರೀಲ್ಸ್​ ಮಾಡಿದ್ದು, ಈಗ ಬುಬನ್​ ಅವರ ಲುಕ್​ ಬದಲಾಗಿದೆ. ಪ್ರತಿದಿನ 3 ರಿಂದ 4 ಕೆಜಿ ಕಡಲೆಕಾಯಿಯನ್ನು ಮಾರಾಟ ಮಾಡಿ 200 ರಿಂದ 250 ರೂ ದುಡಿಯುತ್ತಿದ್ದ ಬುಬನ್​ ಅವರೂ ಕೂಡ ದೊಡ್ಡ ಸ್ಟಾರ್​ ಆಗಿದ್ದಾರೆ.  ಸದ್ಯ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:

Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !

Published On - 9:37 am, Tue, 1 March 22

ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್