AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !

ಯುಎಸ್​ನ ಮದ್ಯಪ್ರಿಯರು ಉಕ್ರೇನ್​ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಉಪಕ್ರಮವನ್ನು ಶುರುಮಾಡಿದ್ದು ಲಾಸ್​ ವೇಗಾಸ್​​ನಲ್ಲಿರುವ ಒಂದು ಬಾರ್​.

Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !
ರಷ್ಯಾದ ವೋಡ್ಕಾ
TV9 Web
| Edited By: |

Updated on: Feb 28, 2022 | 5:14 PM

Share

ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುನೈಟೆಡ್​ ಸ್ಟೇಟ್ಸ್​​ನ (United States) ಲಾಸ್​ ವೇಗಾಸ್​​ನಲ್ಲಿ ರಷ್ಯಾ ತಯಾರಿತ ವೋಡ್ಕಾ ಖರೀದಿಸುವವರ ಸಂಖ್ಯೆ ಮಿತಿಮೀರಿದೆ. ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರುವುದನ್ನು ಯುಎಸ್​ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದೆ. ಹೀಗಿದ್ದ ಮೇಲೆ ಅಲ್ಲಿನ ಜನರು ಯಾಕೆ ರಷ್ಯಾ ವೋಡ್ಕಾವನ್ನು ಈ ಪರಿ ಖರೀದಿಸುತ್ತಿದ್ದಾರೆ? ಖುಷಿಗಾಗಿ ವೋಡ್ಕಾ ಖರೀದಿ ಮಾಡ್ತಿದ್ದಾರಾ? ಎಂಬಿತ್ಯಾದಿ ಪ್ರಶ್ನೆ ಮೂಡ್ತಿರಬಹುದು. ಆದರೆ ವಾಸ್ತವ ಎಂದರೆ, ಜನರು ತಾವು ಖರೀದಿಸಿದ ವೋಡ್ಕಾವನ್ನು ಚರಂಡಿಗೆ ಸುರಿಯುತ್ತಿದ್ದಾರೆ. ಈ ಮೂಲಕ ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣವನ್ನು ವಿರೋಧಿಸುತ್ತಿದ್ದಾರೆ.

ಯುಎಸ್​ನ ಮದ್ಯಪ್ರಿಯರು ಉಕ್ರೇನ್​ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಉಪಕ್ರಮವನ್ನು ಶುರುಮಾಡಿದ್ದು ಲಾಸ್​ ವೇಗಾಸ್​​ನಲ್ಲಿರುವ ಒಂದು ಬಾರ್​. ಮತ್ತೇನೂ ಅಲ್ಲ, ಇವರೆಲ್ಲ ಪುಕ್ಕಟೆಯಾಗಿ ರಷ್ಯಾ ವೋಡ್ಕಾವನ್ನು ಹಾಳುಗೆಡವುತ್ತಿಲ್ಲ. ಹಣಕೊಟ್ಟು ಖರೀದಿ ಮಾಡಿ, ನಂತರ ಅದನ್ನು ತೆಗೆದುಕೊಂಡು ಹೋಗಿ ಚರಂಡಿಗೆ ಸುರಿಯುತ್ತಿದ್ದಾರೆ. ನಂತರ ಇವರೆಲ್ಲ ಪಾವತಿಸಿದ ಹಣವನ್ನು ಉಕ್ರೇನ್​​ಗೆ ಮಾನವೀಯ ನೆರವಿನ ರೂಪದಲ್ಲಿ ಕಳಿಸಲು ಬಾರ್ ನಿರ್ಧಾರ ಮಾಡಿದೆ. ಪುಟಿನ್​ ಉಕ್ರೇನ್​​ನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅವರು ಅಲ್ಲಿಂದ ಹೋಗುವವರೆಗೂ ಹೀಗೆ ರಷ್ಯಾದ ವೋಡ್ಕಾ ಖರೀದಿಸಿ, ಚೆಲ್ಲುವ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಲಾಸ್​ ವೇಗಾಸ್ ಬಾರ್ ಮಾಲೀಕರು ಹೇಳಿದ್ದಾಗಿ ಫಾಕ್ಸ್​ ನ್ಯೂಸ್ ವರದಿ ಮಾಡಿದೆ. ಅಷ್ಟೇ ಅಲ್ಲ, ಯುಎಸ್​ನಲ್ಲಿ ರಷ್ಯಾ ವೋಡ್ಕಾ ನಿರ್ಬಂಧಿಸಿ ಎಂಬ ಅಭಿಯಾನ ಟ್ವಿಟರ್​​ನಲ್ಲೂ ಶುರುವಾಗಿದೆ.

ಇದನ್ನೂ ಓದಿ: ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್​​ನಿಂದ ತಪ್ಪಿಸಿಕೊಂಡು ಉಕ್ರೇನ್​ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್