10 ವರ್ಷಗಳ ಹಿಂದೆ ಕಳೆದು ಹೋಗಿದ್ದ ಐ-ಫೋನ್​ ಶೌಚಾಲಯದಲ್ಲಿ ಪತ್ತೆ: ಇದ್ಹೇಗೆ ಸಾಧ್ಯ ಎಂದ ನೆಟ್ಟಿಗರು

ದಂಪತಿಯೊಂದು ಮನೆಯಲ್ಲಿ ಇದಕ್ಕಿದ್ದಂತೆ ಬಾತ್​ರೂಮ್​ನಲ್ಲಿ ಶಬ್ದಕೇಳಿಸಿ ಹೋಗಿ ನೋಡಿದಾಗ ಟಾಯ್ಲೆಟ್​ನಲ್ಲಿ ಐಫೋನ್​ ಒಂದು ಸಿಕ್ಕಿದೆ. ಅದು ಮಹಿಳೆಯ 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪೋನ್ ಎಂದು ಪೇಸ್ಬುಕ್​ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

10 ವರ್ಷಗಳ ಹಿಂದೆ ಕಳೆದು ಹೋಗಿದ್ದ ಐ-ಫೋನ್​ ಶೌಚಾಲಯದಲ್ಲಿ ಪತ್ತೆ: ಇದ್ಹೇಗೆ ಸಾಧ್ಯ ಎಂದ ನೆಟ್ಟಿಗರು
ಪತ್ತೆಯಾದ ಐಫೋನ್​
Follow us
TV9 Web
| Updated By: Pavitra Bhat Jigalemane

Updated on:Feb 27, 2022 | 5:34 PM

ಕೆಲವೊಮ್ಮೆ ಕಳೆದುಹೋದ ವಸ್ತುಗಳನ್ನು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಆದರೆ ಅದೇ ವಸ್ತು ಇನ್ಯಾವತ್ತೋ ಒಂದು ದಿನ ಆಕಸ್ಮಾತ್​ ಆಗಿ ಸಿಕ್ಕರೆ ಎಲ್ಲಿಲ್ಲದ ಸಂತಸವಾಗುವುದಂತೂ ಸುಳ್ಳಲ್ಲ. ಆದರೆ ಮೊಬೈಲ್​ ಕಳೆದುಹೋಗಿ ದಶಕಗಳ ನಂತರ ಸಿಕ್ಕರೆ ಅಚ್ಚರಿಯಾಗದೇ ಇರಲಾರದು. ಅಂತಹದ್ದೇ ಒಂದು ಇಲ್ಲೊಂದು ವಿಚಿತ್ರ ಘಟನೆ ಯುಎಸ್​ನಲ್ಲಿ ನಡೆದ ಕುರಿತು ವರದಿಯಾಗಿದೆ. ದಂಪತಿಯೊಂದು ಮನೆಯಲ್ಲಿ ಇದಕ್ಕಿದ್ದಂತೆ ಬಾತ್​ರೂಮ್​ನಲ್ಲಿ ಶಬ್ದಕೇಳಿಸಿ ಹೋಗಿ ನೋಡಿದಾಗ ಟಾಯ್ಲೆಟ್​ನಲ್ಲಿ ಐಫೋನ್​ ಒಂದು ಸಿಕ್ಕಿದೆ. ಅದು ಮಹಿಳೆಯ ಫೋನ್​​ ಆಗಿದ್ದು 10 ವರ್ಷಗಳ ಹಿಂದೆ ನಾಪತ್ತೆಯಾಗಿತ್ತು ಎಂದು ಪೇಸ್ಬುಕ್​ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನೆಲೆಸಿರುವ ಬೆಕಿ ಬೆಕ್‌ಮನ್ ಎನ್ನುವ ಮಹಿಳೆ ದಶಕದ ಹಿಂದೆ ತನ್ನ ಆಪಲ್​ ಐಫೋನ್​ಅನ್ನುಕಳೆದುಕೊಂಡಿದ್ದರು. 2012 ರಲ್ಲಿ ಹ್ಯಾಲೋವೀನ್ ರಾತ್ರಿ ಬೆಕಿಮನ್​ ಮೊಬೈಲ್​ ಅನ್ನು ಮನೆಯಲ್ಲಿಯೇ ಕಳೆದುಕೊಂಡಿದ್ದರು. ಅದಾದ ಬಳಿಕ ಫೋನ್​ಬಗ್ಗೆ ದಂಪತಿ ಕೂಡ ಮರೆತಿದ್ದರು ಆದರೆ ಒಂದು ಟಾಯ್ಲೆಟ್​ನಲ್ಲಿ ನಿರು ಬಿಟ್ಟಾಗ ವಿಚಿತ್ರ ಶಬ್ಧ ಕೇಳಿಸುತ್ತಿತ್ತು ಎಂದಿದ್ದರೆ. ಪೈಪ್​ನಲ್ಲಿ ಸಮಸ್ಯೆ ಇರಬಹದು ಎಂದು ಭಾವಿಸಿದ್ದರೆ ಆದರೆ ಪರಿಶೀಲಿಸಿದಾಗ ಐಫೋನ್​ ಕೈಗೆ ಸಿಲುಕಿದೆ. ಇದನ್ನು ಕಂಡು ದಂಪತಿ ಅಚ್ಚರಿಗೊಂಡಿದ್ದಾರೆ.  ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಪೇಸ್ಬುಕ್​ನಲ್ಲಿ ಸ್ಟೋರಿಯನ್ನು ಓದಿದ ನೆಟ್ಟಿಗರು, ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಯಾವುದೇ ಅಡಚಣೆ ಇಲ್ಲದೆ ಶೌಚಾಲಯವನ್ನು ಬಳಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಕಾಲೆಳೆದು ತಮಾಷೆಯಾಗಿ ಪ್ರತಿಕ್ರಯಿಸಿದ್ದಾರೆ. ಸದ್ಯ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ:

ಬಾಂಬ್ ದಾಳಿಯಿಂದ ಒಡೆದ ಗಾಜನ್ನು ಸ್ವಚ್ಛಗೊಳಿಸುವಾಗ ಕಣ್ಣೀರಿಡುತ್ತಾ ಉಕ್ರೇನ್​ ರಾಷ್ಟ್ರಗೀತೆ ಹಾಡಿದ ಮಹಿಳೆ : ವಿಡಿಯೋ ವೈರಲ್​

Published On - 5:34 pm, Sun, 27 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ