Viral Video: ಯುಎಸ್ನ ಬೀದಿಯಲ್ಲಿ ಪಂಜಾಬಿ ಹಾಡಿನ ಸದ್ದು: ವಯಲಿನ್ನಲ್ಲಿ ಬಿಜಲೀ ಹಾಡು ನುಡಿಸಿದ 13 ವರ್ಷದ ಬಾಲಕಿ
ಯುಎಸ್ನ ಬೀದಿಯೊಂದರ ಮಧ್ಯೆ 13 ವರ್ಷದ ಬಾಲಕಿಯೊಬ್ಬಳು ಪಂಜಾಬಿಯ ಬಿಜಲಿ ಹಾಡನ್ನು ವೈಲಿನ್ನಲ್ಲಿ ನುಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಪಾಪಟ್ಟೆ ವೈರಲ್ ಆಗಿದೆ.
ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಗಡಿಯ ನಿರ್ಬಂಧವಿಲ್ಲ. ಈ ವಿಡಿಯೋ ಅದನ್ನು ಸಾಬೀತುಪಡಿಸಿದೆ. ಯುಎಸ್ನ ಬೀದಿಯೊಂದರ ಮಧ್ಯೆ 13 ವರ್ಷದ ಬಾಲಕಿಯೊಬ್ಬಳು ಪಂಜಾಬಿಯ ಬಿಜಲಿ ಹಾಡನ್ನು ವೈಲಿನ್ (violin)ನಲ್ಲಿ ನುಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಪಾಪಟ್ಟೆ ವೈರಲ್ ಆಗಿದೆ. ಪಂಜಾಬಿ ಗಾಯಕ ಹಾರ್ಡಿ ಸಂಧು(Harddy Sandhu) ಹಾಡಿದ ಬಿಜಲಿ ಬಿಜಲಿ ಹಾಡನ್ನು ಬಾಲಕಿ ವೈಯಲಿನ್ನಲ್ಲಿ ನುಡಿಸಿದ್ದಾಳೆ. ಇನ್ಸ್ಟಾಗ್ರಾಮ್ ಮತ್ತು ಯುಟ್ಯೂಬ್ನಲ್ಲಿ ಹಂಚಿಕೊಳ್ಳ;ಲಾದ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಕರೋಲಿನಾ ಪ್ರೊಟ್ಸೆಂಕೊ(Karolina Protsenko )ಎನ್ನುವ ಬಾಲಕಿ ಈ ಹಾಡನ್ನು ನುಡಿಸಿದ್ದಾಳೆ.
View this post on Instagram
ವಿಡಿಯೋದಲ್ಲಿ ಆಕೆ ಎಂಜಾಯ್ ಮಾಡಿಕೊಂಡು ವಯಲಿನ್ಅನ್ನು ನುಡಿಸುವುದನ್ನು ಕಾಣಬಹುದು. ಸುತ್ತಲು ನಿಂತ ಜನ ಆಕೆ ಶ್ರದ್ಧೆಯಿಂದ ನುಡಿಸುತ್ತಿರುವುದನ್ನು ನೋಡಿ ದಂಗಾಗಿದ್ದಾರೆ. ಆಕೆಯ ಕೈಚಳಕ ಎಲ್ಲರನ್ನು ಮೋಡಿ ಮಾಡಿದಂತಿದೆ. ಸದ್ಯ ವೈರಲ್ ಆಗಿರುವ ವಿಡಿಯೋ 5 ಲಕ್ಷದಷ್ಟು ಲೈಕ್ಸ್ಗಳಿಸಿದೆ. ಭಾರತದ ಈ ಪಂಜಾಬಿ ಗೀತೆ ಪಿಟೀಲಿನಲ್ಲಿ ಸುಮಧುರವಾಗಿ ಧ್ವನಿಸುತ್ತದೆ! ಧನ್ಯವಾದಗಳು ಕರೋಲಿನಾ, ನಿಮ್ಮ ಪ್ರತಿಭೆಯನ್ನು ಮುಂದುವರಿಸಿ ಮತ್ತು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಯೂಟ್ಯೂಬ್‌ನಲ್ಲಿ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
13 ವರ್ಷದ ಕರೋಲಿನಾ ತನ್ನ ಪಿಟೀಲಿನಲ್ಲಿ ಅನೇಕ ಜನಪ್ರಿಯ ಹಾಡುಗಳ ನುಡಿಸಿದ್ದಾಳೆ. ಯುಎಸ್ನ ಬೀದಿಗಳಲ್ಲಿ ಪ್ರದರ್ಶಿಸುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಾಳೆ. ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾಳೆ.
ಇದನ್ನೂ ಓದಿ:
‘ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್
Published On - 1:59 pm, Sun, 27 February 22