‘ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್
ಪುಟ್ಟ ಬಾಲಕಿಯೊಬ್ಬಳು ಜನರು ಸುರಕ್ಷಿತವಾಗಿರಲಿ, ಶಾಂತಿ ನೆಲೆಸಲಿ ಎಂದು ಬೇಡಿಕೊಂಡು ಯುದ್ಧ ನಿಲ್ಲಿಸುವಂತೆ ಕೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಕ್ರೇನ್ (Ukraine)ಮೇಲೆ ರಷ್ಯಾ(Russia) ದಾಳಿಯಿಂದ ಪರಿಸ್ಥಿತಿ ಹದಗೆಟ್ಟಿದೆ. ಜನ ಜೀವ ಉಳಿಸಿಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಹೊರಗಿನಿಂದ ಮಧ್ಯಪ್ರವೇಶಿಸುವ ಪ್ರಯತ್ನ ಮಾಡಿದರೆ, ನೀವು ಇತಿಹಾಸದಲ್ಲಿ ಎದುರಿಸಿದ ಪರಿಣಾಮಗಳಿಗಿಂತ ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನೀವು ನನ್ನನ್ನು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ವ್ಲಾಡಿಮಿರ್ ಪುಟಿನ್(Vladimir Putin) ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟು ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಡುವೆ ಪುಟ್ಟ ಬಾಲಕಿಯೊಬ್ಬಳು ಜನರು ಸುರಕ್ಷಿತವಾಗಿರಲಿ, ಶಾಂತಿ ನೆಲೆಸಲಿ ಎಂದು ಬೇಡಿಕೊಂಡು ಯುದ್ಧ ನಿಲ್ಲಿಸುವಂತೆ ಕೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ವಿಡಿಯೋದಲ್ಲಿ ಲಿಲಿ ಎಂಬ ಪುಟ್ಟ ಬಾಲಕಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದಾಳೆ. ಎಲ್ಲರೂ ಸುರಕ್ಷಿತವಾಗಿರಲಿ, ಶಾಂತಿ ನೆಲೆಸಲಿ ನನಗೆ ಭೂಮಿಯ ಮೇಲೆ ಶಾಂತಿ ಬೇಕು ಭೂಮಿಯ ತುಂಡುಗಳಲ್ಲ. ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ ಎಂದು ಹೇಳಿದ್ದಾಳೆ. ಬ್ರಿಟ್ಟಿ ಕಿಟ್ಟಿ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೊ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, ಬಾಲಕಿಯ ಕಾಳಜಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಹಂಚಿಕೊಂಡಾಗಿನಿಂದ ಈ ವರೆಗೆ ಒಂದು ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದ್ದು,ವಿಡಿಯೋಕ್ಕೆ ನಾವು ಉಕ್ರೇನ್ ಮತ್ತು ಬಾಧಿತರಾದ ಎಲ್ಲಾ ಮುಗ್ಧ ಜೀವಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಸದ್ಯ ಉಕ್ರೇನ್ನನಲ್ಲಿ ಯುದ್ಧದ ವಾತಾವರಣ ಮುಂದುವರೆದಿದೆ. ಜನ ದೇಶ ತೊರೆದು ಹೋಗುತ್ತಿದ್ದಾರೆ, ಈಗಾಗಲೇ ಆತಂಕದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು, ದೇಶದ ಪರಿಸ್ಥಿತಿ ಮಾತ್ರ ಇನ್ನೂ ಹದಗೆಡುತ್ತಲೇ ಇದೆ.
ಇದನ್ನೂ ಓದಿ:
ಉಕ್ರೇನ್ ಗಡಿಯಾಚೆಯಿದ್ದ ಅಮ್ಮನ ಬಳಿ ಆಕೆಯ ಇಬ್ಬರು ಮಕ್ಕಳನ್ನು ತಲುಪಿಸಿದ್ದು ಕೂಡ ಎರಡು ಮಕ್ಕಳ ಇನ್ನೊಬ್ಬ ತಾಯಿ!!