AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಯುದ್ಧದ ಮಧ್ಯೆ ವೈರಲ್​ ಆಯ್ತು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿಯವರ ಡ್ಯಾನ್ಸ್​ ವಿಡಿಯೋ

ಅಂದಹಾಗೇ, ಇದು 2006ನೇ ಇಸ್ವಿಯ ಕಾಲದ್ದು. ಆಗಿನ್ನೂ ವೊಲೊಡಿಮಿರ್​ ಝೆಲೆನ್ಸ್ಕಿ ಉಕ್ರೇನ್​ ಅಧ್ಯಕ್ಷರಾಗಿರಲಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಕಮೆಂಟ್​​ಗಳನ್ನು ಮಾಡಿದ್ದಾರೆ.

Video: ಯುದ್ಧದ ಮಧ್ಯೆ ವೈರಲ್​ ಆಯ್ತು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿಯವರ ಡ್ಯಾನ್ಸ್​ ವಿಡಿಯೋ
ಉಕ್ರೇನ್​ ಅಧ್ಯಕ್ಷರ ಫೋಟೋಗಳು
TV9 Web
| Edited By: |

Updated on:Feb 27, 2022 | 1:10 PM

Share

ಇಷ್ಟು ದಿನ ಅಷ್ಟೆಲ್ಲ ಪ್ರಚಲಿತದಲ್ಲಿ ಇಲ್ಲದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelenskyy) ಹೆಸರು ಇದೀಗ ಸಿಕ್ಕಾಪಟೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ರಷ್ಯಾ ಮತ್ತು ಉಕ್ರೇನ್​ ಯುದ್ಧ. ರಷ್ಯಾ ಮತ್ತು ಉಕ್ರೇನ್​ ನಡುವೆ ಬಿಕ್ಕಟ್ಟು ಶುರುವಾಗಿ ಹಲವು ದಿನಗಳೇ ಕಳೆದು, ಇದೀಗ ಯುದ್ಧವೆಂಬ ಅಂತಿಮ ಘಟ್ಟದಲ್ಲಿದೆ. ಕಳೆದ ನಾಲ್ಕು ದಿನಗಳಿಂದ ರಷ್ಯಾ ಸೇನೆ ಉಕ್ರೇನ್​ ಮೇಲೆ ದಾಳಿ ನಡೆಸುತ್ತಲೇ ಇದೆ. ತಮ್ಮ ರಾಷ್ಟ್ರಕ್ಕೆ ಒದಗಿದ ಕಷ್ಟದ ಕಾಲದಲ್ಲಿ ಉಕ್ರೇನ್​ ಅಧ್ಯಕ್ಷ ಎದೆಗುಂದದೆ ನಿಂತಿದ್ದಾರೆ. ಟ್ವೀಟ್​, ವಿಡಿಯೋ ಸಂದೇಶದ ಮೂಲಕ ಉಕ್ರೇನ್​ ಜನರಿಗೆ ಧೈರ್ಯ ತುಂಬುವ ಜತೆ, ತಾವೇ ಸ್ವತಃ ಮಿಲಿಟರಿ ವಸ್ತ್ರ ಧರಿಸಿ, ಬಂದೂಕು ಹಿಡಿದು ಸೈನಿಕರ ಜತೆ ಸೇರಿದ್ದಾರೆ. ಅಷ್ಟೆ ಅಲ್ಲ, ಜಗತ್ತಿನ ಅನೇಕ ರಾಷ್ಟ್ರಗಳ ನಾಯಕರು, ಜನರಿಂದ ಮೆಚ್ಚಿಗೆಗಳ ಸುರಿಮಳೆಯೇ ಅವರಿಗೆ ಹರಿದುಬರುತ್ತಿದೆ. ಈ ಮಧ್ಯೆ ಅವರ ಕೆಲವು ಹಳೇ ವಿಡಿಯೋಗಳು ವೈರಲ್​ ಆಗುತ್ತಿದ್ದು, ನೆಟ್ಟಿಗರಂತೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ನಿಜಕ್ಕೂ ಒಬ್ಬ ಲೆಜೆಂಡ್​ ಎಂದು ಹೊಗಳಿದ್ದಾರೆ. ಇನ್ನೂ ಕೆಲವರು, ಇಂಥ ವಿಡಿಯೋಗಳನ್ನೆಲ್ಲ ವೈರಲ್ ಮಾಡಿದಾಕ್ಷಣ ಯುದ್ಧ ನಿಲ್ಲುವುದಿಲ್ಲ ಎಂದೂ ವ್ಯಂಗ್ಯವಾಡಿದ್ದಾರೆ.

ಅಂದಹಾಗೇ, ಈ ವಿಡಿಯೋಗಳು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಅವರ ಡ್ಯಾನ್ಸ್​​ ವಿಡಿಯೋಗಳು. ಇದು 2006ನೇ ಇಸ್ವಿಯ ಕಾಲದ್ದು. ಆಗಿನ್ನೂ ವೊಲೊಡಿಮಿರ್​ ಝೆಲೆನ್ಸ್ಕಿ ಉಕ್ರೇನ್​ ಅಧ್ಯಕ್ಷರಾಗಿರಲಿಲ್ಲ. ಉಕ್ರೇನ್​​ನ ಆಗಿನ ಸ್ಟಾರ್​ ನೃತ್ಯ ಕಲಾವಿದೆಯರ ಜತೆ ಅವರು ನೃತ್ಯ ಮಾಡುತ್ತಿದ್ದ ವಿಡಿಯೋಗಳು. ಅಂದರೆ ಆಗೊಂದು ಡ್ಯಾನ್ಸಿಂಗ್​ ಶೋನಲ್ಲಿ ಭಾಗವಹಿಸಿ, ಅದರಲ್ಲಿ ಗೆದ್ದಿದ್ದರು. ಇದೀಗ ಅದೇ ಶೋದ ಹಲವು ಡ್ಯಾನ್ಸ್​ನ ವಿಡಿಯೋ ತುಣುಕುಗಳು ವೈರಲ್​ ಆಗಿವೆ. ಅದರಲ್ಲಿ ವೊಲೊಡಿಮಿರ್​ ಅವರ ಕಲೆ, ಹಾಕುತ್ತಿದ್ದ ಸ್ಟೆಪ್​​ಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ..

ಇದನ್ನೂ ಓದಿ: Video: ಉಕ್ರೇನ್​​ನಿಂದ ಬಂದ ವಿದ್ಯಾರ್ಥಿಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಮಾತುಕತೆ; ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ

Published On - 1:09 pm, Sun, 27 February 22

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ