AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾಕ್ಕೆ ಶರಣಾಗುವುದಿಲ್ಲವೆಂದ ಉಕ್ರೇನ್​ ಅಧ್ಯಕ್ಷ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ ಮಾಡಿದ ಉಕ್ರೇನ್​ ರಾಯಭಾರಿ

ನಮ್ಮ ಈ ಸಂಕಷ್ಟದ ಸಮಯದಲ್ಲಿ ಭಾರತ ಸಹಾಯಕ್ಕೆ ಬರಲಿ ಎಂದು ಬಯಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಈ ಜಗತ್ತಿನ ಅತ್ಯಂತ ಬಲಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರು. ಅವರು ತಮ್ಮ ಪಾತ್ರ ನಿರ್ವಹಿಸಲಿ ಎಂದು ಉಕ್ರೇನ್​ ರಾಯಭಾರಿ ಹೇಳಿದ್ದಾರೆ.

ರಷ್ಯಾಕ್ಕೆ ಶರಣಾಗುವುದಿಲ್ಲವೆಂದ ಉಕ್ರೇನ್​ ಅಧ್ಯಕ್ಷ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ ಮಾಡಿದ ಉಕ್ರೇನ್​ ರಾಯಭಾರಿ
ಉಕ್ರೇನ್ ಅಧ್ಯಕ್ಷ
TV9 Web
| Edited By: |

Updated on:Feb 24, 2022 | 3:56 PM

Share

ರಷ್ಯಾ-ಉಕ್ರೇನ್ (Russia-Ukraine)​ ನಡುವಿನ ಬಿಕ್ಕಟ್ಟಿಗೆ ಕೊನೆಗೂ ಸಿಕ್ಕಿದ್ದು ಯುದ್ಧ ಎಂಬ ಅಂತ್ಯ. ಈಗಾಗಲೇ ರಷ್ಯಾದ ಸೇನಾ ಪಡೆಗಳು ಉಕ್ರೇನ್​ ಮೇಲೆ ದಂಡೆತ್ತಿ ಹೋಗಿ ದಾಳಿ ನಡೆಸುತ್ತಿದ್ದಾರೆ. ಇದುವರೆಗೂ ಉಕ್ರೇನ್​ನ 40 ಯೋಧರು ರಷ್ಯಾ ದಾಳಿಗೆ ಹತ್ಯೆಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ತುರ್ತು ಸುದ್ದಿಗೋಷ್ಠಿ ನಡೆಸಿ, ಉಕ್ರೇನ್​ ಯಾವ ಕಾರಣಕ್ಕೂ ರಷ್ಯಾಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಹಾಗೇ ಉಕ್ರೇನ್​ ಸೇನೆ ಕೂಡ ತಾವು ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ, ರಷ್ಯಾದ ಇನ್ನೊಂದು ಅಂದರೆ 6ನೇ ವಿಮಾನವನ್ನು ಕ್ರಾಮಾಟೋರ್ಸ್ಕ್ ಪ್ರದೇಶದಲ್ಲಿ ನಾಶ ಮಾಡಿದ್ದು, ಒಟ್ಟು 50 ಯೋಧರನ್ನು ಕೊಂದಿದ್ದೇವೆ ಎಂದು ಹೇಳಿಕೊಂಡಿದೆ.

ಇಂದು ರಷ್ಯಾ ಅಧ್ಯಕ್ಷ ಪುತಿನ್​ ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆಗೆ ಸೂಚನೆ ನೀಡಿದ ಬೆನ್ನಲ್ಲೇ ಮಾತನಾಡಿದ್ದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ನಮ್ಮ ಸೇನಾ ವ್ಯವಸ್ಥೆಯ ಮೇಲೆ ದಾಳಿ ನಡೆಸಲಿದೆ. ಆದರೆ ಉಕ್ರೇನ್​ ನಾಗರಿಕರು ಇದರಿಂದ ಗಾಬರಿಯಾಗಬಾರದು. ರಷ್ಯಾದಲ್ಲಿರುವ ಉಕ್ರೇನಿಯನ್ನರೂ ಕೂಡ ಭಯಭೀತರಾಗಬೇಡಿ. ನಾವೂ ನಮ್ಮ ಕೆಲಸ ಮಾಡುತ್ತಿದ್ದೇವೆ. ಹೋರಾಟಕ್ಕೆ ಸೇನೆ ಸನ್ನದ್ಧವಾಗಿದೆ. ನಾವೂ ಬಲಿಷ್ಠರಾಗಿದ್ದೇವೆ ಮತ್ತು ಎಲ್ಲದಕ್ಕೂ ಸಿದ್ಧವಾಗಿಯೇ ನಿಂತಿದ್ದೇವೆ. ಯಾರನ್ನು ಬೇಕಾದರೂ ಸೋಲಿಸುವಷ್ಟು ತಾಕತ್ತು ನಮಗೂ ಇದೆ ಎಂದು ಹೇಳಿದ್ದರು.  ಅಷ್ಟೇ ಅಲ್ಲ, ರಷ್ಯಾದೊಂದಿಗೆ ಇರುವ ಎಲ್ಲ ರಾಜತಾಂತ್ರಿಕ ಒಪ್ಪಂದ ಮತ್ತು ಸಂಬಂಧಗಳನ್ನೂ ಉಕ್ರೇನ್​ ಕಡಿದುಕೊಳ್ಳಲಿದೆ ಎಂದು ತಿಳಿಸಿದ್ದರು. ಅದನ್ನು ಟ್ವೀಟ್​ ಮೂಲಕ ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗೇ, ಈ ದೇಶದ ರಕ್ಷಣೆಗೆ ಯೋಧರ ಹೊರತಾಗಿ ಇನ್ಯಾರಿಗೇ ಆಸಕ್ತಿಯಿದ್ದರೂ, ಅವರ ಕೈಗೆ ಶಸ್ತ್ರಾಸ್ತ್ರ ಕೊಡುತ್ತೇವೆ, ಸಿದ್ಧರಾಗಿ ಎಂಬ ಕರೆಯನ್ನೂ ನೀಡಿದ್ದಾರೆ.

ಇದಕ್ಕೂ ಮುನ್ನ ಬುಧವಾರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಉಕ್ರೇನ್ ಅಧ್ಯಕ್ಷ, ರಷ್ಯಾಕ್ಕೆ ಯಾವ ಕಾರಣಕ್ಕೂ ಅಪಾಯವೊಡ್ಡುವ ರಾಷ್ಟ್ರ ನಮ್ಮದಲ್ಲ. ಆದರೆ ಉಕ್ರೇನ್​​ನಿಂದ ಅಪಾಯವಿದೆ ಎಂಬುದನ್ನು ರಷ್ಯಾ ಪದೇಪದೆ ಹೇಳುತ್ತಿದೆ.  ನಮ್ಮ ಉಕ್ರೇನಿಯನ್​ ಸರ್ಕಾರ ಮತ್ತು ಇಲ್ಲಿನ ಜನರಿಗೆ ಬೇಕಾಗಿರುವುದು ಶಾಂತಿ. ಅಷ್ಟಾಗ್ಯೂ ಆ ದೇಶ ದಾಳಿಗೆ ಬಂದರೆ ನಾವೂ ಪ್ರತಿಯಾಗಿ ದಾಳಿ ನಡೆಸುತ್ತೇವೆ. ನಾನು ರಷ್ಯಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಕರೆ ಮಾಡಿದೆ. ಆದರೆ ಅದು ವಿಫಲವಾಯಿತು ಎಂದು ಹೇಳಿದ್ದರು. ಅವರು ತುಂಬ ಭಾವನಾತ್ಮಕವಾಗಿ ಮಾತುಗಳನ್ನಾಡಿದ್ದರು. ಆದರೆ ಗುರುವಾರ ರಷ್ಯಾ ಅಧ್ಯಕ್ಷ ಯುದ್ಧ ಘೋಷಿಸಿದ್ದಾರೆ. ಸದ್ಯ ಉಕ್ರೇನ್​​ನಾದ್ಯಂತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ

ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ಸಮರ ಸಾರುತ್ತಿದ್ದಂತೆ ಭಾರತದಲ್ಲಿರುವ ಉಕ್ರೇನ್​ ರಾಯಭಾರಿ ಡಾ. ಇಗೋರ್​ ಪೊಲಿಖಾ, ತಮಗೆ ಭಾರತ ಸಹಾಯ ಮಾಡಲಿ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲಿ ಎಂದು ಮನವಿ ಮಾಡಿದ್ದಾರೆ.  ನಮ್ಮ ಈ ಸಂಕಷ್ಟದ ಸಮಯದಲ್ಲಿ ಭಾರತ ಸಹಾಯಕ್ಕೆ ಬರಲಿ ಎಂದು ಬಯಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಈ ಜಗತ್ತಿನ ಅತ್ಯಂತ ಬಲಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರು. ಅವರು ತಮ್ಮ ಪಾತ್ರ ನಿರ್ವಹಿಸಲಿ ಎಂದಿದ್ದಾರೆ.

ಸದ್ಯ ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​​ನಲ್ಲಿ ಜನರು ತುಂಬ ಗಾಬರಿಗೊಂಡಿದ್ದಾರೆ. ಪೂರ್ವ ಉಕ್ರೇನ್​ನ  ಡೊನೆಟ್ಸ್ಕ್ ನಗರದ ಎರಡನೇ ಅತ್ಯಂತ ದೊಡ್ಡ ಪ್ರದೇಶವಾದ ಮಾರಿಯುಪೋಲ್ ಸೇರಿ ಹಲವೆಡೆ ಸ್ಫೋಟದ ಶಬ್ದಗಳು ಕಿವಿಗೆ ಅಪ್ಪಳಿಸುತ್ತಿವೆ. ಈ ಮಧ್ಯೆ ಜನರು ಆತಂಕಕ್ಕೀಡಾಗಿದ್ದು,  ಕಿರಾಣಿ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ. ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ: Russia-Ukraine War: ಉಕ್ರೇನ್​​ ಮೇಲೆ ರಷ್ಯಾ ಸೇನಾ ಪಡೆಯ ದಾಳಿ; ಇದುವರೆಗೆ 7 ಮಂದಿ ಸಾವು, 9ಕ್ಕೂ ಹೆಚ್ಚು ಜನರಿಗೆ ಗಾಯ

Published On - 3:48 pm, Thu, 24 February 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?