AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ukrain Crisis: ಬೆಲಾರಸ್​​ನಲ್ಲಿ ಮಾತುಕತೆಗೆ ಆಹ್ವಾನ ನೀಡಿದ ರಷ್ಯಾ; ಅಲ್ಲಿ ಸಾಧ್ಯವಿಲ್ಲ ಎಂದ ಉಕ್ರೇನ್- ಕಾರಣವೇನು?

Russia Ukrain Crisis: ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆಯ ಪ್ರಯತ್ನಗಳು ನಡೆಯುತ್ತಿವೆ. ಅದರೆ ಪ್ರದೇಶದ ಆಯ್ಕೆಯಲ್ಲಿ ಒಮ್ಮತ ಮೂಡುತ್ತಿಲ್ಲ. ಇದಕ್ಕೆ ಕಾರಣವೇನು? ಉಕ್ರೇನ್ ಅಧ್ಯಕ್ಷರು ಈ ಕುರಿತು ಮಾಹಿತಿ ನೀಡಿದ್ದಾರೆ.

Ukrain Crisis: ಬೆಲಾರಸ್​​ನಲ್ಲಿ ಮಾತುಕತೆಗೆ ಆಹ್ವಾನ ನೀಡಿದ ರಷ್ಯಾ; ಅಲ್ಲಿ ಸಾಧ್ಯವಿಲ್ಲ ಎಂದ ಉಕ್ರೇನ್- ಕಾರಣವೇನು?
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (ಪ್ರಾತಿನಿಧಿಕ ಚಿತ್ರ, Credits: AP)
TV9 Web
| Updated By: shivaprasad.hs|

Updated on:Feb 27, 2022 | 2:19 PM

Share

ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ (Russia Ukraine War) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಭಾನುವಾರ) ರಷ್ಯಾವು ಉಕ್ರೇನ್​ನೊಂದಿಗೆ ಮಾತುಕತೆಗೆ ಸಿದ್ಧವಾಗಿದೆ ಎಂದಿದೆ. ಇತ್ತ ಉಕ್ರೇನ್ ಕೂಡ ತಾನು ಮಾತುಕತೆಗೆ ಸಿದ್ಧ ಎಂದು ಹೇಳಿಕೊಂಡಿದೆ. ಆದರೆ ಎರಡೂ ಪಕ್ಷಗಳಲ್ಲಿ ಯಾವ ಪ್ರದೇಶದಲ್ಲಿ ಮಾತುಕತೆ ನಡೆಸಬೇಕು ಎಂಬ ಗೊಂದಲಗಳಿವೆ. ರಷ್ಯಾವು ಉಕ್ರೇನ್​ಅನ್ನು ಬೆಲಾರಸ್​ಗೆ ಆಹ್ವಾನಿಸಿದೆ. ರಷ್ಯಾದ ನಿಯೋಗ ಕೂಡ ಬೆಲಾರಸ್​ನಲ್ಲಿದೆ. ಆದರೆ ಉಕ್ರೇನ್ ಈ ಆಹ್ವಾನವನ್ನು ಒಪ್ಪುತ್ತಿಲ್ಲ. ಇದಕ್ಕೆ ತನ್ನದೇ ಆದ ಕಾರಣಗಳನ್ನು ಉಕ್ರೇನ್ ನೀಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ವಿಡಿಯೋ ಸಂದೇಶದಲ್ಲಿ ಮಾತನಾಡಿ, ‘‘ಉಕ್ರೇನ್​ಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿದೆ. ಆದರೆ ಬೆಲಾರಸ್​​ನಲ್ಲ. ಕಾರಣ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲುಬೆಲಾರಸ್​ಅನ್ನು ಲಾಂಚ್ ಪ್ಯಾಡ್​ನಂತೆ ಬಳಸುತ್ತಿದೆ. ಆದ್ದರಿಂದ ಅಲ್ಲಿ ಮಾತುಕತೆ ನಡೆಸುವುದಿಲ್ಲ’’ ಎಂದಿದೆ. ಅಷ್ಟೇ ಅಲ್ಲ, ಈ ಮಾತುಕತೆಗೆ ‘ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಕು’ ಮೊದಲಾದ ಪ್ರದೇಶಗಳನ್ನು ಹೆಸರಿಸಿದ್ದೆವು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಈ ಕುರಿತು ಎಎಫ್​ಪಿ ಹಂಚಿಕೊಂಡ ಟ್ವೀಟ್:

ವಿಡಿಯೋದಲ್ಲಿ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಮಾತನಾಡಿದ ಝೆಲೆನ್ಸ್ಕಿ, ‘‘ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಅನ್ನು ಪ್ರವೇಶಿಸಿದಾಗ ಉಕ್ರೇನ್ ಮತ್ತು ರಷ್ಯಾದ ಸೈನಿಕರ ನಡುವೆ ಕಾದಾಟ ನಡೆದಿದೆ. ಜನರನ್ನು ನೋಯಿಸಲು ರಷ್ಯಾದ ಪಡೆಗಳು ಉದ್ದೇಶಪೂರ್ವಕವಾಗಿ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿವೆ’’ ಎಂದು ಆರೋಪಿಸಿದ್ದಾರೆ.

ಉಕ್ರೇನ್‌ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು. ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿದೆ. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಪ್ರಸ್ತಾಪಿಸಿ, ಬೇರೆಡೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.

ಇದನ್ನೂ ಓದಿ:

Fact Check ರಷ್ಯಾ ದಾಳಿ ನಂತರ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇನಾ ಸಮವಸ್ತ್ರ ಧರಿಸಿ ಹೋರಾಡುತ್ತಿರುವ ವೈರಲ್ ಚಿತ್ರ ಈಗಿನದ್ದು ಅಲ್ಲ

Russia Ukraine War Live: ಮಾತುಕತೆಗೆ ಸಿದ್ಧ; ಆದರೆ ಬೆಲಾರಸ್​ನಲ್ಲಿ ಸಾಧ್ಯವಿಲ್ಲ ಎಂದ ಉಕ್ರೇನ್

Published On - 2:01 pm, Sun, 27 February 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ