Geo Politics: ಉಕ್ರೇನ್ ಮೇಲೆ ಕಲ್ಲೆಸೆದಿರುವ ರಷ್ಯಾಕ್ಕೆ ಪಾಕಿಸ್ತಾನವನ್ನು ಸಂತೈಸುವಷ್ಟು ವ್ಯವಧಾನವಿದೆಯೇ?

ಇಮ್ರಾನ್ ಮತ್ತು ಪುಟಿನ್ ಭೇಟಿ ವೇಳೆ ಇಂಧನ ಸಹಕಾರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಸ್ವತಃ ಆರ್ಥಿಕ ದಿಗ್ಬಂಧನಗಳನ್ನು ಅನುಭವಿಸುತ್ತಿರುವ ರಷ್ಯಾದಿಂದ ಪಾಕಿಸ್ತಾನಕ್ಕೆ ನಿರೀಕ್ಷಿತ ನೆರವಿನ ಭರವಸೆ ಸಿಗುವುದು ಸಂದೇಹಾಸ್ಪದ.

Geo Politics: ಉಕ್ರೇನ್ ಮೇಲೆ ಕಲ್ಲೆಸೆದಿರುವ ರಷ್ಯಾಕ್ಕೆ ಪಾಕಿಸ್ತಾನವನ್ನು ಸಂತೈಸುವಷ್ಟು ವ್ಯವಧಾನವಿದೆಯೇ?
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 27, 2022 | 5:04 PM

ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿರುವ ಪಾಕಿಸ್ತಾನಕ್ಕೆ (Pakistan) ಅದೇ ದೊಡ್ಡ ವರದಾನವಾಗಿದೆ. ಪ್ರತಿ ಜಾಗತಿಕ ವಿದ್ಯಮಾನ, ದುರಂತಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸದಾ ಯತ್ನಿಸುವುದು ಪಾಕ್ ಸರ್ಕಾರಗಳ ವೈಖರಿ. ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ರಷ್ಯಾ (Russia) ಭೇಟಿ ಸಹ ಇಂಥದ್ದೇ ನಿರೀಕ್ಷೆಗಳೊಂದಿಗೆ ಆರಂಭವಾಗಿತ್ತು. ಉಕ್ರೇನ್ (Ukraine) ದೇಶದ ಮೇಲೆ ದಂಡೆತ್ತಿ ಹೋಗಿರುವ ರಷ್ಯಾಕ್ಕೆ ಈ ಯುದ್ಧಕಾಲದಲ್ಲಿ ಇಮ್ರಾನ್ ಭೇಟಿ ಮತ್ತು ಅದರ ಹಿಂದಿರುವ ಕಾರಣಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಜಿಯೊ ಪಾಲಿಟಿಕ್ಸ್ ವಿಶ್ಲೇಷಕ​ ಕಿಶೋರ್ ನಾರಾಯಣ್.

ಅಮೆರಿಕ ಮತ್ತು ಸೋವಿಯತ್ ರಷ್ಯಾ ಒಕ್ಕೂಟಗಳ ನಡುವೆ ಸುದೀರ್ಘ ಸಮಯದವರೆಗೆ ಶೀತಲ ಸಮರ ನಡೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಪಾಕಿಸ್ತಾನ ಮತ್ತು ಸೋವಿಯತ್ ಒಕ್ಕೂಟಗಳು ವಿಭಿನ್ನ ಧ್ರುವಗಳಲ್ಲಿದ್ದವು. ಎರಡೂ ದೇಶಗಳ ನಡುವೆ ಹೆಚ್ಚಿನ ಸಂವಾದವೇ ನಡೆಯುತ್ತಿರಲಿಲ್ಲ. ಸೋವಿಯತ್ ಒಕ್ಕೂಟ ಛಿದ್ರವಾದ ಮೇಲೆ ಅಫ್ಘಾನಿಸ್ತಾನದ ಸ್ಥಿರತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿದವು. ಸೋವಿಯತ್​ ಒಕ್ಕೂಟವು ಛಿದ್ರವಾದ ಮೇಲೆ ರಷ್ಯಾ ದೇಶವು ಅಫ್ಘಾನಿಸ್ತಾನದ ಜೊತೆಗೆ ನೇರವಾಗಿ ಗಡಿ ಹಂಚಿಕೊಂಡಿಲ್ಲ. ಆದರೆ ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತಜಕಿಸ್ತಾನ ಸೇರಿದಂತೆ ಹಲವು ದೇಶಗಳು ಅಫ್ಘಾನಿಸ್ತಾನದೊಂದಿಗೆ ಗಡಿಹಂಚಿಕೊಂಡಿವೆ. ಈ ದೇಶಗಳ ಆಂತರಿಕ ಭದ್ರತೆ ಮತ್ತು ಸ್ಥಿರತೆ ಮೇಲೆ ಅಫ್ಘಾನಿಸ್ತಾನದ ವಿದ್ಯಮಾನಗಳು ಪ್ರಭಾವ ಬೀರುತ್ತಿದ್ದವು. ಹೀಗಾಗಿ ರಷ್ಯಾ ಸಹಜ ಅಫ್ಘನ್ ವಿಚಾರದ ಮಾತುಕತೆಗೆ ಪಾಕಿಸ್ತಾನವನ್ನು ನೆಚ್ಚಿಕೊಂಡಿತು. ಹೀಗೆ ಕ್ರಮೇಣ ರಷ್ಯಾ ಮತ್ತು ಪಾಕಿಸ್ತಾನಗಳು ಹತ್ತಿರವಾದವು.

2008ರಲ್ಲಿ ಭಾರತ-ಅಮೆರಿಕ ದೇಶಗಳು ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡವು. ಈ ನೆಪದಲ್ಲಿ ಭಾರತ ಮತ್ತು ಅಮೆರಿಕ ದೇಶಗಳು ಪರಸ್ಪರ ಹೆಚ್ಚು ಹತ್ತಿರವಾದವು. ಪರಮಾಣ ಒಪ್ಪಂದ ಮಾಡಿಕೊಳ್ಳಬೇಕೆಂದು ಪಾಕಿಸ್ತಾನವು ಅಮೆರಿಕವನ್ನು ಎಡತಾಕಿದಾದರೂ ಅಮೆರಿಕ ಇದಕ್ಕೆ ಒಪ್ಪಲಿಲ್ಲ. ಸುಮಾರು 10 ವರ್ಷಗಳಿಂದ ಅಮೆರಿಕ ಸರ್ಕಾರವು ಪಾಕಿಸ್ತಾನದ ಬಗ್ಗೆ ಅಂಥ ಒಲವು ಇರಿಸಿಕೊಂಡಿಲ್ಲ. ಬದಲಾಗಿ ಪಾಕಿಸ್ತಾನದ ಬಗ್ಗೆ ಸಿಟ್ಟು ಮತ್ತು ಅನುಮಾನಗಳನ್ನು ಇಟ್ಟುಕೊಂಡಿದೆ. ಮುಂಬೈ ದಾಳಿಯ ಸಂಚು ರೂಪಿಸಿದವರಲ್ಲಿ ಒಬ್ಬನಾದ ಡೇವಿಡ್ ಹೇಡ್ಲಿ ಮತ್ತು ಪಾಕಿಸ್ತಾನದಲ್ಲಿ ಕೊಲೆಯಾದ ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್​ನ ಸಾವು ಪಾಕ್ ಬಗೆಗಿನ ಅಮೆರಿಕದ ಧೋರಣೆ ಮೇಲೆ ಪ್ರಭಾವ ಬೀರಿತು. ಒಸಮಾ ಬಿಲ್ ಲಾಡೆನ್​ನನ್ನು ಪಾಕಿಸ್ತಾನದ ಅಬೊಟಾಬಾದ್​ನಲ್ಲಿ ಕೊಂದ ಅಮೆರಿಕ ತನ್ನ ಕಾರ್ಯಾಚರಣೆಯ ಬಗ್ಗೆ ಪಾಕ್ ಸೇನೆಗೆ ಮಾಹಿತಿ ನೀಡಿರಲಿಲ್ಲ ಎನ್ನುವುದು ಎರಡೂ ದೇಶಗಳ ನಡುವಣ ಅಪನಂಬಿಕೆ ಯಾವ ಮಟ್ಟಕ್ಕೆ ಹೋಗಿತ್ತು ಎನ್ನುವುದಕ್ಕೆ ಸಾಕ್ಷಿ. ತಾಲಿಬಾನ್ ವಿಚಾರದಲ್ಲಿ ಪಾಕಿಸ್ತಾನ ನಡೆದುಕೊಂಡ ರೀತಿ, ಹಖ್ಖಾನಿ ನೆಟ್​ವರ್ಕ್ ನಿಯಂತ್ರಣಕ್ಕೆ ಪಾಕ್ ಬಿಗಿ ಕ್ರಮ ತೆಗೆದುಕೊಂಡಿಲ್ಲ ಎಂಬ ಅಸಮಾಧಾನವೂ ಅಮೆರಿಕಕ್ಕೆ ಇದೆ.

ಸತತ 20 ವರ್ಷ ಅಫ್ಘಾನ್ ನೆಲವನ್ನು ಹಿಡಿತದಲ್ಲಿ ಇರಿಸಿಕೊಂಡಿದ್ದ ಅಮೆರಿಕ ನಂತರ ಹಲವು ಕಾರಣಗಳಿಂದಾಗಿ ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಮೇಲೆ ಪಾಕಿಸ್ತಾನದೊಂದಿಗೆ ಮೊದಲಿನ ರೀತಿಯಲ್ಲಿ ಹೊಂದಿಕೊಂಡು ಹೋಗುವುದು ಅನಿವಾರ್ಯ ಎಂದು ಅಮೆರಿಕಕ್ಕೆ ಅನ್ನಿಸಲಿಲ್ಲ. ಇದೇ ಹೊತ್ತಿಗೆ ಚೀನಾ ದೇಶವು ಪಾಕಿಸ್ತಾನಕ್ಕೆ ಹೆಚ್ಚು ಹತ್ತಿರವಾಗತೊಡಗಿತು. ‘ಪಾಕಿಸ್ತಾನ ಮತ್ತು ಚೀನಾದ ಬಾಂಧವ್ಯ ಗಿರಿಶಿಖರಗಳಿಗಿಂತಲೂ ಎತ್ತರ ಮತ್ತು ಸಾಗರಕ್ಕಿಂತಲೂ ಆಳ’ ಎಂದು ಎರಡೂ ದೇಶಗಳು ಹೇಳಿಕೊಂಡಿವೆ. ಅರ್ಥಿಕ ದಿದ್ಬಂಧನ ಅಥವಾ ಬೇರೆ ಯಾವುದೇ ರೀತಿಯಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎಂದು ಅಮೆರಿಕ ಯತ್ನಿಸಿದಾಗಲೆಲ್ಲ ಪಾಕ್ ನೆರವಿಗೆ ಚೀನಾ ಸರ್ಕಾರವು ನಿಲ್ಲುತ್ತಿತ್ತು. ಅಮೆರಿಕ ದೂರವಾಗುವ ಹೊತ್ತಿಗೆ ಚೀನಾದೊಂದಿಗೆ ಪಾಕಿಸ್ತಾನವು ಬಾಂಧವ್ಯ ವೃದ್ಧಿಸಿಕೊಂಡಿತ್ತು.

ಚೀನಾವನ್ನು ಅಮೆರಿಕ ತನ್ನ ಎದುರಾಳಿಯಾಗಿ ನೋಡುವುದು ಇದಕ್ಕೆ ಮುಖ್ಯ ಕಾರಣ. ಭಯೋತ್ಪಾದನೆಗೆ ನೆರವಾಗುತ್ತಿರುವ ಪಾಕಿಸ್ತಾನದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವ (ಎಫ್​ಎಟಿಎಸ್​ ಗ್ರೇ ಲಿಸ್ಟಿಂಗ್) ಪ್ರಸ್ತಾಪದ ಸಂದರ್ಭದಲ್ಲಿಯೂ ಚೀನಾ ಸರ್ಕಾರವು ಪಾಕಿಸ್ತಾನದ ಪರ ದೃಢವಾಗಿ ನಿಂತಿತ್ತು. ಪಾಕಿಸ್ತಾನವನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕೆಂದು ಅಮೆರಿಕ ಯತ್ನಿಸಿದಾಗಲೆಲ್ಲಾ ಚೀನಾ ಅಡ್ಡ ಬರುವುದೇ ದೊಡ್ಡ ರಾಜಕಾರಣವಾಗುತ್ತಿದೆ. ಅಮೆರಿಕ ದೂರವಾಗುತ್ತಿರುವುದು ಖಾತ್ರಿಯಾದ ಪಾಕಿಸ್ತಾನವು ಅನಿವಾರ್ಯವಾಗಿ ಹೊಸ ಮಿತ್ರರನ್ನು ಹುಡುಕಿಕೊಳ್ಳಲು ಯತ್ನಿಸುತ್ತಿದೆ. ಆರ್ಥಿಕ ನೆರವು ಮತ್ತು ಭದ್ರತಾ ಖಾತ್ರಿಯ ಒಪ್ಪಂದಕ್ಕೆ ಸಹಿ ಹಾಕಬಲ್ಲ ಸಾಮರ್ಥ್ಯವಿರುವ ದೇಶಗಳೊಂದಿಗೆ ನಂಟು ಬೆಳೆಸಲು ಇದೇ ಕಾರಣಕ್ಕೆ ಪಾಕಿಸ್ತಾನವು ಸತತ ಪ್ರಯತ್ನ ಮಾಡುತ್ತಿದೆ.

ಉಕ್ರೇನ್ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಹಲವು ಏರುಪೇರುಗಳಿಗೆ ಕಾರಣವಾಗಿರುವ ರಷ್ಯಾಕ್ಕೂ ಈಗ ಹೊಸ ಗೆಳೆಯರು ಬೇಕು. ಪಾಕಿಸ್ತಾನದೊಂದಿಗೆ ಮೈತ್ರಿಮಾಡಿಕೊಳ್ಳಬಹುದು ಎಂಬ ಮನಸ್ಥಿತಿಗೆ ರಷ್ಯಾ ಸಹ ಬಂದಂತೆ ಇದೆ. ಇಮ್ರಾನ್ ಖಾನ್ ಅವರ ರಷ್ಯಾ ಭೇಟಿ ಹಠಾತ್ ನಿರ್ಧಾರವಾದದ್ದೇನೂ ಅಲ್ಲ. ಎರಡು ತಿಂಗಳ ಹಿಂದೆಯೇ ಇಮ್ರಾನ್ ಖಾನ್ ಅವರ ಮಾಸ್ಕೊ ಪ್ರವಾಸದ ರೂಪುರೇಷೆ ಸಿದ್ಧವಾಗಿತ್ತು. ಆದರೆ ಉಕ್ರೇನ್ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಮ್ರಾನ್​ ಖಾನ್​ರ ರಷ್ಯಾ ಭೇಟಿ ಮುಂದೂಡಿಕೆಯಾಗಬಹುದು ಎಂಬ ಲೆಕ್ಕಾಚಾರ ಇತ್ತು. ನಿಗದಿಯಂತೆ ರಷ್ಯಾ ತಲುಪಿದ ಇಮ್ರಾನ್ ಖಾನ್ ರಷ್ಯಾದ ಉಪಪ್ರಧಾನಿಯನ್ನು ಭೇಟಿಯಾಗಿ ಚರ್ಚಿಸಿದರು. ಇದೀಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹ ಇಮ್ರಾನ್​ ಖಾನ್ ಅವರನ್ನು ಭೇಟಿಯಾಗಿ, ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಸ್ವತಃ ಆರ್ಥಿಕ ದಿಗ್ಬಂಧನಗಳನ್ನು ಅನುಭವಿಸುತ್ತಿರುವ ರಷ್ಯಾದಿಂದ ಪಾಕಿಸ್ತಾನಕ್ಕೆ ನಿರೀಕ್ಷಿತ ನೆರವಿನ ಭರವಸೆ ಸಿಗುವುದು ಸಂದೇಹಾಸ್ಪದ. ಪುಟಿನ್ ಭೇಟಿ ವೇಳೆ ಆರ್ಥಿಕತೆ ಮತ್ತು ಇಂಧನ ಸಹಕಾರದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಇದು ಯಾವ ಮಟ್ಟದ ಆರ್ಥಿಕ ವಿದ್ಯಮಾನ ಮತ್ತು ಇಂಧನ ವಿಚಾರದಲ್ಲಿ ಪಾಕಿಸ್ತಾನಕ್ಕೆ ರಷ್ಯಾ ಹೇಗೆ ನೆರವಾಗಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಹೊಸ ಸಾಲ ಅಥವಾ ಇಂಧನ ಪೂರೈಕೆ ಒಪ್ಪಂದದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

Kishore-Narayan

ಲೇಖಕ ಕಿಶೋರ್ ನಾರಾಯಣ್

ಇದನ್ನೂ ಓದಿ: Russia Ukraine War Live: ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ ಗೌರವ ಅಧ್ಯಕ್ಷ ಸ್ಥಾನದಿಂದ ಪುಟಿನ್ ಅಮಾನತು

ಇದನ್ನೂ ಓದಿ: Ukraine Crisis: ಪುಟಿನ್ ನಡೆಯ ವಿರುದ್ಧ ತಿರುಗಿಬಿದ್ದ ಜಗತ್ತಿನ ಜನರು; ವಿಶ್ವದೆಲ್ಲೆಡೆ ಪ್ರತಿಭಟನೆ- ಫೋಟೋಗಳು ಇಲ್ಲಿವೆ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್