ಉಕ್ರೇನ್​ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ

Volodymyr Zelenskyy: ವಿಶ್ವದ ಬಲಾಢ್ಯ ಮಿಲಿಟರಿ ಎನಿಸಿರುವ ರಷ್ಯಾ ಸೇನೆಯ ದಾಳಿಯನ್ನು ದೃಢವಾಗಿ ನಿಂತು ಎದುರಿಸುತ್ತಿರುವ ಉಕ್ರೇನ್​ಗೆ ಆಸರೆಯಾಗಿರುವುದು ಸಹ ಎಂಜಿಆರ್ ಮಾದರಿಯ ವ್ಯಕ್ತಿತ್ವವೇ ಇರುವ ಅಧ್ಯಕ್ಷ.

ಉಕ್ರೇನ್​ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ, ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 08, 2022 | 6:58 AM

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಜಿ.ರಾಮಚಂದ್ರನ್ ಅವರ ರಾಜಕಾರಣದ ವೈಖರಿ ಹೆಚ್ಚುಕಡಿಮೆ ಒಂದೇ ರೀತಿ ಇದೆ. ರಾಜಕಾರಣಕ್ಕೆ ಬರುವ ಮೊದಲು ಎಂಜಿಆರ್ ಸಹ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿನಿಮಾಗಳನ್ನು ವೇದಿಕೆಯಾಗಿಸಿಕೊಂಡರು. ಸಾರ್ವಜನಿಕ ಭಾಷಣಗಳೇ ಅವರ ಸಿನಿಮಾ ಡೈಲಾಗ್​ಗಳಾಗುತ್ತಿದ್ದವು. ತೆರೆಯ ಮೇಲಿನ ನಾಯಕ ನಟ ನಿಜ ಜೀವನದಲ್ಲಿಯೂ ನಾಯಕನೇ ಆಗಿ ಬದಲಾದರು. ತಮ್ಮ ಸಿನಿಮಾಗಳಿಗೆ ಚಿತ್ರಕತೆ, ಸಂಭಾಷಣೆ ಬರೆಯುತ್ತಿದ್ದ ಕರುಣಾನಿಧಿಯನ್ನು ಅಧಿಕಾರದಿಂದ ಕೆಳಗೆ ಇಳಿಸಿ, ತಾವು ಮುಖ್ಯಮಂತ್ರಿಯಾದರು. ತೆರೆಯ ಮೇಲಿದ್ದಾಗ ಆರಾಧಿಸುತ್ತಿದ್ದ ಜನರು ನಿಜಜೀವನದಲ್ಲಿಯೂ ಎಂಜಿಆರ್ ಮೋಡಿಗೆ ಒಳಗಾಗಿ ಆರಾಧನೆಯನ್ನು ಮುಂದುವರಿಸಿದರು. ಅದು ತಮಿಳುನಾಡು ಸ್ಟೈಲ್ ಎಂದೇ ಮುಂದೆ ಜನಜನಿತವಾಗಿದ್ದು ಈಗ ಇತಿಹಾಸ.

ವಿಶ್ವದ ಬಲಾಢ್ಯ ಮಿಲಿಟರಿ ಎನಿಸಿರುವ ರಷ್ಯಾ ಸೇನೆಯ ದಾಳಿಯನ್ನು ದೃಢವಾಗಿ ನಿಂತು ಎದುರಿಸುತ್ತಿರುವ ಉಕ್ರೇನ್​ಗೆ ಆಸರೆಯಾಗಿರುವುದು ಸಹ ಎಂಜಿಆರ್ ಮಾದರಿಯ ವ್ಯಕ್ತಿತ್ವವೇ ಇರುವ ಅಧ್ಯಕ್ಷ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಸಹ ಹಿಂದೆ ಮನರಂಜನಾ ಕ್ಷೇತ್ರದಲ್ಲಿದ್ದವರು. ಕಾಮಿಡಿಯನ್ ಆಗಿ ಹೆಸರು ಮಾಡಿದವರು. ಸಾಮಾಜಿಕ ಮಾಧ್ಯಮಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಸರ್ಕಾರವನ್ನು ವ್ಯಂಗ್ಯವಾಡಿ, ಲೇವಡಿ ಮಾಡಿ ಜನರನ್ನು ನಗಿಸಿದವರು. ಜನರ ಹೊಟ್ಟೆಯ ಸಿಟ್ಟು ಅವರ ಮುಂಗೈ ತೋರುಬೆರಳಿಗೆ ಬರುವಂತೆ ಮಾಡಲು ನಗುವನ್ನೇ ಸಾಧನವಾಗಿಸಿದವರು. ಕೊನೆಗೆ ಅದೇ ಸಿಟ್ಟು-ವ್ಯಂಗ್ಯದ ನಗುವನ್ನೇ ದಾಳವಾಗಿಸಿಕೊಂಡು ಅಧಿಕಾರ ದಕ್ಕಿಸಿಕೊಂಡವರು. ಜನ ಅಂದು ಅವರ ಅಭಿನಯಕ್ಕೆ, ಆಶಯಕ್ಕೆ ತೀವ್ರವಾಗಿ ಸ್ಪಂದಿಸಿದ್ದರು.

ಉಕ್ರೇನ್​ ಅಧ್ಯಕ್ಷರ ಸಂವಹನ ವೈಖರಿ ಇಂದಿಗೂ ಬದಲಾಗಿಲ್ಲ. ರಷ್ಯಾ ದಂಡೆತ್ತಿ ಬಂದಿರುವ ಈ ಸಮಯದಲ್ಲಿಯೂ ಉಕ್ರೇನ್ ಅಧ್ಯಕ್ಷರು ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ರಷ್ಯಾ ವಿರುದ್ಧದ ಹೋರಾಟಕ್ಕೆ ಸೇನೆಯನ್ನು ತಕ್ಕಮಟ್ಟಿಗೆ ಸನ್ನದ್ಧಗೊಳಿಸಿದ್ದ ಝೆಲೆನ್​ಸ್ಕಿ ಜನರ ಭಾವನೆಗಳನ್ನು ತಕ್ಕ ರೀತಿಯಲ್ಲಿ ಹದಗೊಳಿಸಿದ್ದರು. ಇದೀಗ ಅದೇ ಭಾವನೆಗಳಿಗೆ ದೇಶಭಕ್ತಿಯ ಲೇಪನ ಕೊಡುತ್ತಾ ರಷ್ಯಾ ವಿರುದ್ಧದ ಹೋರಾಟಕ್ಕೆ ಜನರನ್ನು ಸಂಘಟಿಸುತ್ತಿದ್ದಾರೆ.

‘ಇದು ನಮ್ಮ ದೇಶ, ನಾವು ಇದನ್ನು ಉಳಿಸಿಕೊಳ್ಳಬೇಕು. ರಷ್ಯಾ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ನಿಮ್ಮ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ರಷ್ಯಾ ವಿರುದ್ಧ ಹೋರಾಡಿ. ಅಕಸ್ಮಾತ್ ನಿಮಗೆ ಹೋರಾಡಲು ಸಾಧ್ಯವಿಲ್ಲದಿದ್ದರೆ ದೇಶದಿಂದ ತಾತ್ಕಾಲಿಕವಾಗಿ ಹೊರಗೆ ಹೋಗಿರಿ. ಸುರಕ್ಷಿತ ಸ್ಥಳಗಳಲ್ಲಿ ಇರಿ. ಇದು ನಿಮ್ಮ ದೇಶ, ದೇಶಕ್ಕೆ ನಿಮ್ಮ ಜೀವ ಬಹಳ ಮುಖ್ಯ. ಇಂದಲ್ಲ ನಾಳೆ ರಷ್ಯಾವನ್ನು ಸೋಲಿಸಿ, ನಿಮ್ಮನ್ನೆಲ್ಲಾ ಗೌರವಯುತವಾಗಿ ವಾಪಸ್ ಕರೆಸಿಕೊಳ್ಳುತ್ತೇವೆ’ ಎನ್ನುವ ಝೆಲೆನ್​ಸ್ಕಿ ಮಾತು ವೈರಲ್ ಆಗಿದೆ.

ಜನರು ಈ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ. ಬಿಯರ್ ಬಾಟಲಿಗಳು ಪೆಟ್ರೋಲ್ ಬಾಂಬ್​ಗಳಾಗುತ್ತಿವೆ. ಅಕ್ಕಪಕ್ಕದ ದೇಶಗಳಲ್ಲಿದ್ದ ಉಕ್ರೇನ್​ನ ಯುವಜನರು ರಷ್ಯಾ ವಿರುದ್ಧದ ಹೋರಾಟಕ್ಕೆಂದು ಉಕ್ರೇನ್​ಗೆ ಬರುತ್ತಿದ್ದಾರೆ. ಉಕ್ರೇನ್​ನಿಂದ ಹೊರಹೋಗುತ್ತಿರುವ ನಾಗರಿಕರಿಗೆ ಸೋತ ಭಾವ ಇಲ್ಲ. ಬದಲಿಗೆ ತಾವು ದೇಶದಿಂದ ಹೊರಗೆ ಹೋಗುವುದು ಸಹ ಸಂಕಷ್ಟ ಪರಿಸ್ಥಿತಿಯಲ್ಲಿರುವ ದೇಶಕ್ಕೆ ಮಾಡುತ್ತಿರುವ ಸಹಾಯ ಎನ್ನುವ ಭಾವವೇ ಮನದುಂಬಿದೆ. ತಮಗೆ ಆಶ್ರಯ ಕೊಟ್ಟ ದೇಶದಲ್ಲಿಯೂ ಇವರು ಉಕ್ರೇನ್ ಪರ ಜನಾಭಿಪ್ರಾಯ ಮೂಡಿಸಲು ಪ್ರಯತ್ನ ಮುಂದುವರಿಸುತ್ತಿದ್ದಾರೆ.

ಅಣ್ವಸ್ತ್ರ ಸಜ್ಜಿತ ದೈತ್ಯ ಮಿಲಿಟರಿ ಶಕ್ತಿ ಹೊಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಕಂಡರೆ ಇಡೀ ರಷ್ಯಾ ಹೆದರಿ ನಡುಗುತ್ತದೆ. ಆದರೆ ರಷ್ಯಾಕ್ಕೆ ಹೋಲಿಸಿದರೆ ಏನೂ ಅಲ್ಲದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿಯನ್ನು ಉಕ್ರೇನ್ ತನ್ನ ಮನೆಮಗನಂತೆ ಪ್ರೀತಿಸುತ್ತಿದೆ. ಅವನ ಮಾತಿಗೆ ಬೆಲೆಕೊಟ್ಟು ರಷ್ಯಾ ವಿರುದ್ಧ ಹೋರಾಟಕ್ಕೆ ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿದ್ದಾರೆ. ಯಾವ ತ್ಯಾಗಕ್ಕೂ ಸಿದ್ಧರಾಗಿದ್ದಾರೆ.

ಸುಲಭದಲ್ಲಿ ಮುಗಿಸಬಹುದು ಎಂದುಕೊಂಡು ಕದನ ಆರಂಭಿಸಿದ ಪುಟಿನ್​ಗೆ ಸ್ವದೇಶದಲ್ಲಿಯೇ ಪ್ರತಿಭಟನೆಯ ಬಿಸಿ ತಟ್ಟಿದೆ. ವಿಶ್ವದ ಹಲವು ದೇಶಗಳು ದಿಗ್ಬಂಧನ ಹೇರಿ ಇಕ್ಕಟ್ಟಿನಲ್ಲಿ ಸಿಲುಕಿಸಿವೆ. ಅವರ ಜನಪ್ರಿಯತೆಯೂ ಇಳಿಯುತ್ತಿದೆ. ಆದರೆ ಯುದ್ಧಕ್ಕೆಂದು ಬಂದವರನ್ನು ಅಡ್ಡಗಟ್ಟಿ ನಿಂತ ಝೆಲೆನ್​ಸ್ಕಿಯ ಜನಪ್ರಿಯತೆ ಸ್ವದೇಶದಲ್ಲಿ ಹೆಚ್ಚಾಗುತ್ತಿದೆ, ವಿದೇಶಗಳಿಂದ ನೆರವು ಹರಿದು ಬರುತ್ತಿದೆ. ಯುದ್ಧ ಬೇಗ ಮುಗಿದಷ್ಟೂ ರಷ್ಯಾಕ್ಕೆ ಲಾಭ, ಎಳೆದಷ್ಟೂ ಉಕ್ರೇನ್​ಗೆ ಲಾಭ. ಸದ್ಯದ ಪರಿಸ್ಥಿತಿಯಲ್ಲಿ ಝೆಲೆನ್​ಸ್ಕಿ ಅನುಸರಿಸುತ್ತಿರುವ ಎಂಜಿಆರ್ ತಂತ್ರ ಫಲ ಕೊಡುತ್ತಿದೆ. ಅದರಲ್ಲೂ ಝೆಲೆನ್​ಸ್ಕಿ ಹತ್ಯೆಗೆ ರಷ್ಯಾದ ಏಜೆಂಟರು ಬಂದಿದ್ದಾರೆ ಎಂಬುದು ಬಹಿರಂಗಗೊಂಡ ನಂತರವಂತು ಉಕ್ರೇನ್​ನಲ್ಲಿ ಆರಾಧನಾ ಭಾವ ಮನೆಮಾಡುತ್ತಿದೆ.

ಇದನ್ನೂ ಓದಿ: ರಷ್ಯಾ ಅಧ್ಯಕ್ಷರ ​​ಜತೆ 50 ನಿಮಿಷ ಚರ್ಚೆ ನಡೆಸಿದ ಪ್ರಧಾನಿ ಮೋದಿ; ಉಕ್ರೇನ್​ ಅಧ್ಯಕ್ಷರೊಟ್ಟಿಗೆ ನೇರವಾಗಿ ಮಾತನಾಡಲು ಪುಟಿನ್​ಗೆ ಒತ್ತಾಯ

ಇದನ್ನೂ ಓದಿ: ಉಕ್ರೇನ್​ ಅಧ್ಯಕ್ಷರೊಂದಿಗೆ 35 ನಿಮಿಷ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ; ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ವೊಲೊಡಿಮಿರ್​ ಝೆಲೆನ್ಸ್ಕಿ

Published On - 4:21 pm, Mon, 7 March 22

ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ