ಉಕ್ರೇನ್​ ಅಧ್ಯಕ್ಷರೊಂದಿಗೆ 35 ನಿಮಿಷ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ; ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ವೊಲೊಡಿಮಿರ್​ ಝೆಲೆನ್ಸ್ಕಿ

ಫೆ.26ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉಕ್ರೇನಿಯನ್​ ಅಧ್ಯಕ್ಷ ಝೆಲೆನ್ಸ್ಕಿಯವರೊಟ್ಟಿಗೆ ಮಾತನಾಡಿದ್ದರು. ಅದಾದ ಮೇಲೆ ಇಂದು ಮಾತನಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಉಕ್ರೇನ್​​ನ ಪರಿಸ್ಥಿತಿ ಬಗ್ಗೆಯೂ ಕೇಳಿದ್ದಾರೆ.

ಉಕ್ರೇನ್​ ಅಧ್ಯಕ್ಷರೊಂದಿಗೆ 35 ನಿಮಿಷ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ; ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ವೊಲೊಡಿಮಿರ್​ ಝೆಲೆನ್ಸ್ಕಿ
ಪ್ರಧಾನಿ ಮೋದಿ ಮತ್ತು ವೊಲೊಡಿಮಿರ್​ ಝೆಲೆನ್ಸ್ಕಿ
Follow us
| Updated By: Lakshmi Hegde

Updated on:Mar 07, 2022 | 3:16 PM

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿಯವರೊಂದಿಗೆ ದೂರವಾಣಿ ಮೂಲಕ ಸುಮಾರು 35 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಷ್ಯಾ ಉಕ್ರೇನ್​ ಮೇಲೆ ಆಕ್ರಮಣ ಮಾಡಿದ ನಂತರ ಎರಡನೇ ಬಾರಿಗೆ ಪ್ರಧಾನಿ ಮೋದಿಯವರು ಝೆಲೆನ್ಸ್ಕಿ ಜತೆ ಮಾತನಾಡಿದ್ದಾರೆ. ಹಾಗೇ, ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.   ಅತ್ತ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಟ್ವೀಟ್ ಮಾಡಿ, ತಾವು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದನ್ನು ಖಚಿತಪಡಿಸಿದ್ದಾರೆ.  ರಷ್ಯಾದ ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರವನ್ನು ಉಕ್ರೇನ್​ ನೀಡುತ್ತಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದೆ. ನಾವು ಭಾರತೀಯರ ಸ್ಥಳಾಂತರಕ್ಕೆ ಸಹಕಾರ ಕೊಟ್ಟಿದ್ದಕ್ಕೆ ಭಾರತದ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ರಷ್ಯಾದೊಂದಿಗೆ ಉನ್ನತ ಮಟ್ಟದಲ್ಲಿ ಶಾಂತಿ ಮಾತುಕತೆ ನಡೆಸಲು ಸಿದ್ಧ ಇರುವ ಉಕ್ರೇನ್​ ಬದ್ಧತೆಯನ್ನೂ ಶ್ಲಾಘಿಸಿದ್ದಾರೆ. ಉಕ್ರೇನ್​​ಗೆ ಬೆಂಬಲ ನೀಡಿದ್ದಕ್ಕೆ ಭಾರತ ಮತ್ತು ಭಾರತದ ಪ್ರಧಾನಿಯವರಿಗೆ ಕೃತಜ್ಞತೆಗಳು ಎಂದು  ಝೆಲೆನ್ಸ್ಕಿ ತಿಳಿಸಿದ್ದಾರೆ.

ಫೆ.26ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉಕ್ರೇನಿಯನ್​ ಅಧ್ಯಕ್ಷ ಝೆಲೆನ್ಸ್ಕಿಯವರೊಟ್ಟಿಗೆ ಮಾತನಾಡಿದ್ದರು. ಅದಾದ ಮೇಲೆ ಇಂದು ಮಾತನಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಉಕ್ರೇನ್​​ನ ಪರಿಸ್ಥಿತಿ ಬಗ್ಗೆಯೂ ಕೇಳಿದ್ದಾರೆ. ಯುದ್ಧ ಭೀಕರತೆಯ ನಡುವೆ ಭಾರತೀಯರನ್ನು ಸುರಕ್ಷಿತ ಮಾಡಿದ್ದಕ್ಕೆ ಮತ್ತು ಅಲ್ಲಿಂದ ಅವರನ್ನು ಸ್ಥಳಾಂತರ ಮಾಡಲು ಸಹಾಯ ಮಾಡಿದ್ದಕ್ಕೆ ಝೆಲೆನ್ಕ್ಸಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ಸುಮಿ ಯುದ್ಧವಲಯದಲ್ಲಿರುವ ಭಾರತೀಯರ ಸ್ಥಳಾಂತರಕ್ಕೂ ನಿಮ್ಮ ನೆರವು ಬೇಕು ಎಂದು ಕೇಳಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.  ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​​ರೊಟ್ಟಿಗೂ ದೂರವಾಣಿ ಮೂಲಕ ಮಾತನಾಡಲಿದ್ದಾರೆ.

ಇದನ್ನೂ ಓದಿ: Russia-Ukraine Crisis: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್​ ಯುದ್ಧ; ಇಂದು 3ನೇ ಸುತ್ತಿನ ಮಾತುಕತೆ ಫಲಪ್ರದವಾಗಬಹುದೇ?

Published On - 3:08 pm, Mon, 7 March 22