AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆಯಲ್ಲಿ ಮೋದಿಯವರ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಕಪ್ಪು ಮಾಸ್ಕ್, ಸಾಕ್ಸ್ ಧರಿಸಿದ್ದರೆ ಅದನ್ನೂ ತೆಗೆಯಲು ಹೇಳಿದ್ದರು ಭದ್ರತಾ ಸಿಬ್ಬಂದಿ

ಭಾನುವಾರ ಬೆಳಗ್ಗೆ ಪುಣೆಗೆ ಪ್ರಧಾನಿ ಆಗಮಿಸುವ ಮೊದಲು, ಕಾಂಗ್ರೆಸ್ ಮತ್ತು ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯವು ಇತರ ರಾಜ್ಯಗಳಿಗೆ ಕೊವಿಡ್ ಹರಡುವುದನ್ನು ಉತ್ತೇಜಿಸಿದೆ ಎಂದು ಸೂಚಿಸುವ ಮೂಲಕ ಪ್ರಧಾನಿ ಮೋದಿ ಮಹಾರಾಷ್ಟ್ರವನ್ನು "ಅವಮಾನಿಸಿದ್ದಾರೆ" ಎಂದು ಆರೋಪಿಸಿದರು.

ಪುಣೆಯಲ್ಲಿ ಮೋದಿಯವರ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಕಪ್ಪು ಮಾಸ್ಕ್, ಸಾಕ್ಸ್ ಧರಿಸಿದ್ದರೆ ಅದನ್ನೂ ತೆಗೆಯಲು ಹೇಳಿದ್ದರು ಭದ್ರತಾ ಸಿಬ್ಬಂದಿ
ಪುಣೆ ಪೊಲೀಸ್ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Mar 07, 2022 | 2:39 PM

Share

ಪುಣೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪುಣೆಯ ಎಂಐಟಿ ಕಾಲೇಜು ಸ್ಥಳಕ್ಕೆ ಪ್ರವೇಶಿಸುವ ಜನರು ತಮ್ಮ ಕಪ್ಪು ಬಣ್ಣದ ಮಾಸ್ಕ್, ಸಾಕ್ಸ್ ಧರಿಸಿದ್ದರೆ ಅದನ್ನು ತೆಗೆಯಲು ಹೇಳಲಾಗಿತ್ತು. ಒಂದು ವೇಳೆ ಅಲ್ಲಿಗೆ ಬಂದ ಜನರು ಕಪ್ಪು ಬಣ್ಣದ ಶರ್ಟ್ ಧರಿಸಿದ್ದರೆ ಅದನ್ನೂ ತೆಗೆಯಲು ಹೇಳಲಾಗಿತ್ತು. ಮೋದಿ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆಯನ್ನು ತಡೆಯುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಕುರಿತು ಮಾತನಾಡಿದ ಪುಣೆ ಪೊಲೀಸ್ ಕಮಿಷನರ್ ಅಮಿತಾಭ್ ಗುಪ್ತಾ (Amitabh Gupta), ಕಪ್ಪು ಬಾವುಟಕ್ಕೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. “ಕಪ್ಪು ಬಾವುಟ ಮತ್ತು ಕಪ್ಪು ಬಟ್ಟೆಯ ತುಂಡುಗಳ ಬಗ್ಗೆ ನೀಡಿದ ಸೂಚನೆಯ ಬಗ್ಗೆ ಕೆಲವು ಗೊಂದಲಗಳುಂಟಾಗಿರಬೇಕು, ಬಟ್ಟೆಯ ಬಗ್ಗೆ ಅಲ್ಲ ಎಂದು ಗುಪ್ತಾ ಹೇಳಿದರು. ಈ ಕಾರ್ಯಕ್ರಮವನ್ನು ಅನ್ನು ವರದಿ ಮಾಡಿದ ಪತ್ರಕರ್ತ ಮಂಗೇಶ್ ಫಾಲ್ಲೆ, ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ತಮ್ಮ ಕಪ್ಪು ಬಣ್ಣದ ಮಾಸ್ಕ್ ತೆಗೆದುಹಾಕಲು ಕೇಳಿಕೊಂಡರು ಎಂದು ಹೇಳಿದರು.  ಭಾನುವಾರ ಒಂದು ದಿನದ ಭೇಟಿಗಾಗಿ ನಗರಕ್ಕೆ ಬಂದಿದ್ದ ಪ್ರಧಾನಿ ಅವರು ಮೆಟ್ರೋ ರೈಲಿನ ವಿಸ್ತರಣೆ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರಿಗೆ ಸಮರ್ಪಿತ ಗ್ಯಾಲರಿ ಮತ್ತು ಸಿಂಬಯಾಸಿಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆಗಳನ್ನು ಉದ್ಘಾಟಿಸಿದರು.

ಬೆಳಗ್ಗೆ ಪುಣೆಗೆ ಪ್ರಧಾನಿ ಆಗಮಿಸುವ ಮೊದಲು, ಕಾಂಗ್ರೆಸ್ ಮತ್ತು ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯವು ಇತರ ರಾಜ್ಯಗಳಿಗೆ ಕೊವಿಡ್ ಹರಡುವುದನ್ನು ಉತ್ತೇಜಿಸಿದೆ ಎಂದು ಸೂಚಿಸುವ ಮೂಲಕ ಪ್ರಧಾನಿ ಮೋದಿ ಮಹಾರಾಷ್ಟ್ರವನ್ನು “ಅವಮಾನಿಸಿದ್ದಾರೆ” ಎಂದು ಆರೋಪಿಸಿದರು.

ಪ್ರತಿಭಟನಾಕಾರರು ಕಪ್ಪು ಬಾವುಟ ಮತ್ತು ಭಿತ್ತಿಪತ್ರಗಳನ್ನು ಹಿಡಿದು ರಸ್ತೆಗಳಲ್ಲಿ ‘ಗೋ ಬ್ಯಾಕ್ ಮೋದಿ’ ಎಂದು ಬರೆದು, ಅಲ್ಕಾ ಟಾಕೀಸ್ ಚೌಕ್ ಬಳಿ ಮತ್ತು ನಗರದ ಇತರ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಮೆಟ್ರೊ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ  ಅವರು ಭಾನುವಾರ ಮಹಾರಾಷ್ಟ್ರದ ಪುಣೆಯಲ್ಲಿ ಮಹಾನ್ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ 9.5 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ  32.2 ಕಿಮೀ  ಮೆಟ್ರೊ ರೈಲು ಯೋಜನೆಯಲ್ಲಿ 12 ಕಿಮೀ ಹಿರಿದಾಗಿಸಿದ  ಮೆಟ್ರೊ ಮಾರ್ಗಕ್ಕೆ ಚಾಲನೆ ನೀಡಿದರು. ಎಂಐಟಿ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಅವರು ಗಾರ್ವೇರ್ ಕಾಲೇಜಿನಿಂದ ಆನಂದನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೊದಲ್ಲೇ ಪ್ರಯಾಣಿಸಿದರು.  ಶಾಲಾ ಮಕ್ಕಳೊಂದಿಗೆ ಮೆಟ್ರೊ ಸವಾರಿ ಮಾಡುತ್ತಿರುವ ಚಿತ್ರಗಳನ್ನೂ ಮೋದಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.  ಪುಣೆ ನಗರ ಸಂಚಾರಕ್ಕಾಗಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಮೆಟ್ರೊ ಯೋಜನೆಗೆ ಡಿಸೆಂಬರ್ 24, 2016 ರಂದು ಮೋದಿಯವರೇ ಅಡಿಗಲ್ಲು ಹಾಕಿದ್ದರು. ಈ ಯೋಜನೆಯನ್ನು ಒಟ್ಟು ₹11,400 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪುಣೆ ಮೆಟ್ರೊ ಅಲ್ಯೂಮಿನಿಯಂ ಬಾಡಿ ಕೋಚ್‌ಗಳನ್ನು ಹೊಂದಿರುವ ದೇಶದ ಮೊದಲ ಯೋಜನೆಯಾಗಿದೆ. ಇದನ್ನು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: Russia-Ukraine War: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ