ಪುಣೆ: ಒಲೆಕ್ಟ್ರಾ ಗ್ರೀನ್‌ಟೆಕ್‌ನ 150 ಇ-ಬಸ್‌ಗಳಿಗೆ ಪ್ರಧಾನಿ ಮೋದಿ ಚಾಲನೆ; ಮಾಹಿತಿ ಹಂಚಿಕೊಂಡ MEIL

ಪುಣೆ: ಒಲೆಕ್ಟ್ರಾ ಗ್ರೀನ್‌ಟೆಕ್‌ನ 150 ಇ-ಬಸ್‌ಗಳಿಗೆ ಪ್ರಧಾನಿ ಮೋದಿ ಚಾಲನೆ; ಮಾಹಿತಿ ಹಂಚಿಕೊಂಡ MEIL
ಒಲೆಕ್ಟ್ರಾ ಗ್ರೀನ್‌ಟೆಕ್‌ನ ಇ-ಬಸ್‌ (ಸಂಗ್ರಹ ಚಿತ್ರ)

ವರ್ಚುವಲ್ ಸಮಾರಂಭದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲೆಕ್ಟ್ರಿಕ್ ಬಸ್ ಡಿಪೋ ಮತ್ತು ಚಾರ್ಜಿಂಗ್ ಸ್ಟೇಷನ್ ಅನ್ನು ಸಹ ಉದ್ಘಾಟಿಸಿದರು ಎಂದು ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

TV9kannada Web Team

| Edited By: ganapathi bhat

Mar 06, 2022 | 3:50 PM

ದೆಹಲಿ: ಪುಣೆಯಲ್ಲಿ ಒಲೆಕ್ಟ್ರಾ ಗ್ರೀನ್‌ಟೆಕ್‌ನ 150 ಇ-ಬಸ್‌ಗಳಿಗೆ ಪ್ರಧಾನಿ ಮೋದಿ ಇಂದು (ಮಾರ್ಚ್ 6) ಚಾಲನೆ ನೀಡಿದರು. ತನ್ನ ಅಂಗಸಂಸ್ಥೆ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ 150 ಇ-ಬಸ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ಬಗ್ಗೆ ಮೂಲಸೌಕರ್ಯ ಕಂಪನಿ ಎಂಇಐಎಲ್ ಭಾನುವಾರ ಹೇಳಿಕೆ ನೀಡಿದೆ. ವರ್ಚುವಲ್ ಸಮಾರಂಭದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲೆಕ್ಟ್ರಿಕ್ ಬಸ್ ಡಿಪೋ ಮತ್ತು ಚಾರ್ಜಿಂಗ್ ಸ್ಟೇಷನ್ ಅನ್ನು ಸಹ ಉದ್ಘಾಟಿಸಿದರು ಎಂದು ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ನರೇಂದ್ರ ಮೋದಿ ಸಾರ್ವಜನಿಕ ಸಾರಿಗೆಗಾಗಿ ಪುಣೆಯಲ್ಲಿ ಒಲೆಕ್ಟ್ರಾ ತಯಾರಿಸಿದ 150 ಎಲೆಕ್ಟ್ರಿಕ್ ಬಸ್‌ಗಳ ಸಮೂಹವನ್ನು ಉದ್ಘಾಟಿಸಿದ್ದಾರೆ. ಮತ್ತು ಅತ್ಯಾಧುನಿಕ ಇ-ಬಸ್ ಡಿಪೋ ಮತ್ತು ಬ್ಯಾನರ್‌ನಲ್ಲಿ ಚಾರ್ಜಿಂಗ್ ಸ್ಟೇಷನ್ ಅನ್ನು ಉದ್ಘಾಟಿಸಿದ್ದಾರೆ ಎಂದು ಎಂಇಐಎಲ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹೇಳಲಾಗಿದೆ. ಕಂಪನಿಯ ಪ್ರಕಾರ, ಡೀಸೆಲ್ ಹೆಚ್ಚಳವನ್ನು ತಪ್ಪಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸಲು ಪ್ರಧಾನಿ ತಮ್ಮ ಭಾಷಣದಲ್ಲಿ ರಾಷ್ಟ್ರಕ್ಕೆ ಮನವಿ ಮಾಡಿದ್ದಾರೆ.

ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ಕೆವಿ ಪ್ರದೀಪ್ ಮಾತನಾಡಿದ್ದಾರೆ. ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಒಲೆಕ್ಟ್ರಾ ತನ್ನ ಪ್ರಯತ್ನಗಳಿಗೆ ಬದ್ಧವಾಗಿದೆ. ಸಮರ್ಥ ವಿದ್ಯುತ್ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೂಲಕ ಧ್ವನಿ ಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಒಲೆಕ್ಟ್ರಾ ತನ್ನ ಪ್ರಯತ್ನ ಮಾಡಲಿದೆ ಎಂದು ಹೇಳಿದ್ದಾರೆ.

ಬಸ್‌ಗಳು 12 ಮೀಟರ್ ಉದ್ದವಿದ್ದು, ಹವಾನಿಯಂತ್ರಿತ ವಾಹನಗಳು 33 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಬಸ್‌ನಲ್ಲಿ ಅಳವಡಿಸಲಾಗಿರುವ ಲಿಥಿಯಂ-ಐಯಾನ್ (ಲಿ-ಐಯಾನ್) ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಸುಮಾರು 200 ಕಿಮೀ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚಿನ ಶಕ್ತಿಯ AC ಮತ್ತು DC ಚಾರ್ಜಿಂಗ್ ವ್ಯವಸ್ಥೆಯು ಬ್ಯಾಟರಿಯನ್ನು 3-4 ಗಂಟೆಗಳಲ್ಲಿ ರೀಚಾರ್ಜ್ ಮಾಡಲು ಶಕ್ತಗೊಳಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್, ಸಿಸಿಟಿವಿ ಕ್ಯಾಮೆರಾಗಳು, ತುರ್ತು ಬಟನ್‌ಗಳು ಸೇರಿವೆ. ಎಂಇಐಎಲ್ ಎಂಬುದು ಸುಮಾರು 10 ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ, ಹೈದರಾಬಾದ್ ಮೂಲದ ಭಾರತದ ಪ್ರಮುಖ ಮೂಲಸೌಕರ್ಯ ಕಂಪೆನಿ ಆಗಿದೆ.

ಇದನ್ನೂ ಓದಿ: Zojila Tunnel Project: ಜೋಜಿಲಾ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಎಂಇಐಎಲ್: 5 ಕಿಮೀ ಉದ್ದದ ಸುರಂಗ ಕಾಮಗಾರಿ ಮುಕ್ತಾಯ

ಇದನ್ನೂ ಓದಿ: ‘ಮೇಕ್ ಇನ್ ಇಂಡಿಯಾ’ಗೆ ಮೆಘಾ ಇಂಜಿನಿಯರಿಂಗ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ ಸಹಕಾರ

Follow us on

Related Stories

Most Read Stories

Click on your DTH Provider to Add TV9 Kannada