ಚಿರಂಜೀವಿ ಸಿನಿಮಾ ಪ್ರೇರಣೆಯಿಂದ ಉಕ್ರೇನ್ನಲ್ಲಿ ಪ್ರಾಣಿಗಳ ಸಾಕುತ್ತಿರುವ ಹೈದರಾಬಾದ್ ವೈದ್ಯ ಜಪ್ಪಯ್ಯ ಅಂದರೂ ವಾಪಸ್ ಬರೋಲ್ವಂತೆ!
Indian doctor Girikumar Patil: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸಿನಿಮಾವೊಂದರಲ್ಲಿ ಹೀರೋ ಜಾಗ್ವಾರ್ - ಪ್ಯಾಂಥರ್ ಗಳ ಮಧ್ಯೆ ಜೀವನ ಸಾಗಿಸುತ್ತಾನೆ. ಅದರಿಂದ ಪ್ರೇರಣೆ ಪಡೆದು ತಾನೂ ಅವುಗಳನ್ನು ಸಾಕತೊಡಗಿದೆ ಅನ್ನುತ್ತಾರೆ ವೈದ್ಯ ಗಿರಿಕುಮಾರ್. ಗಿರಿಕುಮಾರ್ ತೆಲುಗು ಧಾರಾವಾಹಿಗಳಲ್ಲೂ ಅಲ್ಲಿ ಇಲ್ಲಿ ನಟಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ ಐದುಹತ್ತು ಉಕ್ರೇನ್ ಸಿನಿಮಾ- ಧಾರಾವಾಹಿಗಳಲ್ಲಿ ’ವಿದೇಶಿಗನಾಗಿ’ ಗಿರಿಕುಮಾರ್ ಅಭಿನಯಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿದೆ (Russia Ukraine War). ಎಲ್ಲೆಲ್ಲೂ ವಾರ್ ವಾರ್ ಮಾತೇ ಕೇಳೀಬರುತ್ತಿದೆ. ಹೀಗೆ ಯುದ್ಧಭೂಮಿಯಿಂದ ಆರ್ತನಾದ ಕೇಳಿಬರುತ್ತಿರುವ ನಡುವೆ ಪ್ರಾಣಿಪ್ರಿಯರು ಪ್ರಾಣಿ ಸಂಕುಲದ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿ, ಅವುಗಳಿಗೂ ತಮ್ಮಂತೆ ಜೀವ, ಬದುಕು ಎಂಬುದಿದೆ ಎಂದು ಬಗೆದಿದ್ದಾರೆ. ಅದರಲ್ಲೂ ಭಾರತೀಯ ಮೂಲದವರು ಒಬ್ಬರು ಬಾಂಬ್ ಸದ್ದಿನ ನಡುವೆ ಜಾಗ್ವಾರ್, ಪ್ಯಾಂಥರ್ ಎಂದು ಜಪಿಸಿದ್ದಾರೆ! ವಿಶೇಷವೆಂದರೆ ಅವರು ಜನರ ಪ್ರಾಣ ಉಳಿಸುವ ವೈದ್ಯರಾಗಿದ್ದು, ಯುದ್ಧ ಕಾಲದಲ್ಲಿ ಪ್ರಾಣಿಗಳ ಜೀವ ಉಳಿಸುವ ಕೈಕಂರ್ಯದಲ್ಲಿ ತೊಡಗಿದ್ದಾರೆ. ಅಂದಹಾಗೆ ಅವರು ಹೈದರಾಬಾದಿನ ವೈದ್ಯ ಗಿರಿಕುಮಾರ್ ಪಾಟೀಲ್ (Indian doctor Girikumar Patil).
ಹೈದರಾಬಾದಿನ ವೈದ್ಯ 40 ವರ್ಷದ ಗಿರಿಕುಮಾರ್ ಪಾಟೀಲ್ ದೂರದ ಉಕ್ರೇನ್ನ ಪೂರ್ವ ಭಾಗವಾದ ಡಾನ್ಬಸ್ ನಲ್ಲಿ ಸೆವೆರೊಡೆನೆಸ್ಕ್ ಪಟ್ಟಣದಲ್ಲಿ (Severodonetsk) ಆರೇಳು ವರ್ಷದಿಂದ ವಾಸವಾಗಿದ್ದಾರೆ. ಯುದ್ಧದಿಂದಾಗಿ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಒಂದು ವಾರದಿಂದ ತಮ್ಮ ಪೆಟ್ black panther ಮತ್ತು jaguar ಸಮೇತ ಸಿಲುಕಿಹಾಕಿಕೊಂಡಿದ್ದರು. ಸುಮಾರು 2 ವರ್ಷದ ಹಿಂದೆ ವೈದ್ಯ ಗಿರಿಕುಮಾರ್ ಇವೆರಡನ್ನೂ ಕೀವ್ ಪ್ರಾಣಿ ಸಂಗ್ರಹಾಲಯದಿಂದ ಅವರು ಖರೀದಿಸಿ, ತಂದಿದ್ದರು. ಅಂದಹಾಗೆ ಉಕ್ರೇನ್ನಲ್ಲಿ ಜನ ವನ್ಯ ಜೀವಿಗಳನ್ನು ಖರೀದಿಸಿ, ಖಾಸಗಿಯಾಗಿ ತಮ್ಮ ಮನೆಗಳಲ್ಲಿ ಸಾಕಿಕೊಳ್ಳಬಹುದು. ಆದರೆ ಅವುಗಳನ್ನು ಸಾಕು ವಿಶಾಲ ಜಾಗ ಇರಬೇಕು.
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸಿನಿಮಾವೊಂದರಲ್ಲಿ ಹೀರೋ ಜಾಗ್ವಾರ್ – ಪ್ಯಾಂಥರ್ ಗಳ ಮಧ್ಯೆ ಜೀವನ ಸಾಗಿಸುತ್ತಾನೆ. ಅದರಿಂದ ಪ್ರೇರಣೆ ಪಡೆದು ತಾನೂ ಅವುಗಳನ್ನು ಸಾಕತೊಡಗಿದೆ ಅನ್ನುತ್ತಾರೆ ವೈದ್ಯ ಗಿರಿಕುಮಾರ್. ಗಿರಿಕುಮಾರ್ ತೆಲುಗು ಧಾರಾವಾಹಿಗಳಲ್ಲೂ ಅಲ್ಲಿ ಇಲ್ಲಿ ನಟಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ ಐದುಹತ್ತು ಉಕ್ರೇನ್ ಸಿನಿಮಾ- ಧಾರಾವಾಹಿಗಳಲ್ಲಿ ’ವಿದೇಶಿಗನಾಗಿ’ ಗಿರಿಕುಮಾರ್ ಅಭಿನಯಿಸಿದ್ದಾರೆ. ಇವರ ತಂದೆ ಬ್ಯಾಂಕ್ ಮ್ಯಾನೇಜರ್ ಆಗಿದ್ದರೆ ತಾಯಿ ಶಾಲಾ ಶಿಕ್ಷಕಿಯಾಗಿದ್ದಾರೆ. ಊರಲ್ಲಿದ್ದಾಗಲೂ ಅಷ್ಟೇ ಗಿರಿಕುಮಾರ್ ಪ್ರಾಣಿ ಪ್ರಿಯರಾಗಿದ್ದು, ಅನೇಕ ಪ್ರಾಣಿಗಳನ್ನು ತಮ್ಮಮನೆಯಲ್ಲಿ ಸಾಕುತ್ತಿದ್ದರು.
ಉಕ್ರೇನ್ನಲ್ಲಿ ಎಲ್ಲ ಕಡೆ ವಾರ್ ವಾರ್ ಅಂತಿದ್ದರೂ ಈ ಭಾರತೀಯ ಜಾಗ್ವಾರ್, ಪ್ಯಾಂಥರ್ ಎಂದು ಜಪಿಸುತ್ತಿದ್ದಾರೆ! ಏಕಾಂಗಿಯಾಗಿ ವಾಸವಿರುವ ವೈದ್ಯ ಗಿರಿಕುಮಾರ್ ಯುದ್ಧ ಆರಂಭವಾದ ಮೇಲೆ ಬೆಳಗಿನ ವೇಳೆ ಕರ್ಫ್ಯೂ ಸಡಿಲವಾದಾಗ ತಮ್ಮ ಮುದ್ದಿನ ಸಾಕು ಪ್ರಾಣಿಗಳಿಗೆ ಆಹಾರ ತರಲಷ್ಟೇ ಹೊರಗೆ ಹೋಗುತ್ತಿದ್ದಾರೆ. ಈ ಜಾಗ್ವಾರ್ ಅಪರೂಪದ ತಳಿಯಾಗಿದ್ದುಗಂಡು ಚಿರತೆ ಮತ್ತು ಹೆಣ್ಣು ಜಾಗ್ವಾರ್ಗೆ ಹುಟ್ಟಿದ ಸಂಗತಿಯಾಗಿದೆ. ಅಂದಹಾಗೆ ಯುದ್ಧವಿರುವುದರಿಂದ ವೈದ್ಯ ಗಿರಿಕುಮಾರ್ ನಾಲ್ಕು ಪಟ್ಟು ಹೆಚ್ಚು ಬೆಲೆ ತೆತ್ತು ಸುತ್ತಮುತ್ತಲ ಊರುಗಳಿಂದ 23 ಕೆಜಿ ಕುರಿ, ಟರ್ಕಿ ಚಿಕನ್ ಖರೀದಿಸಿ ತಂದಿದ್ದಾರೆ.
ಯುದ್ಧದ ಕಾರ್ಮೋಡಗಳು ನಮ್ಮ ಮನೆಯ ಸುತ್ತಮುತ್ತಲೂ ಸಹ ಗಾಢವಾಗಿ ಆವರಿಸಿದೆ. ಬಾಂಬುಗಳು ಸಿಡಿಯುವ ಸದ್ದು ನಮ್ಮ ನಿದ್ದೆ ಕೆಡಿಸಿವೆ. ನನ್ನ ಜಾಗ್ವಾರ್ – ಪ್ಯಾಂಥರ್ ಜೋಡಿಯೂ ಜಾಗೃತವಾಗಿವೆ. ಬಾಂಬ್ ಸದ್ದು ಕೇಳಿ ಆಗಾಗ ಬೆಚ್ಚಿಬೀಳುತ್ತವೆ. ನನ್ನ ಅಪ್ಪ-ಅಮ್ಮ ಫೋನ್ ಮಾಡಿ,ಬಂದುಬಿಡು ಅನ್ನುತ್ತಿದ್ದಾರೆ. ಆದರೆ ಅವೆರಡನ್ನೂ ಬಿಟ್ಟು ನಾನು ಬರಲಾರೆ ಎಂದು ಶಪಥ ಮಾಡಿದವರಂತೆ ವೈದ್ಯ ಗಿರಿಕುಮಾರ್ ತಮ್ಮ ನೆಲಮಾಳಿಗೆಯಲ್ಲಿ ಉಳಿದುಬಿಟ್ಟಿದ್ದಾರೆ. ನೆರೆಹೊರೆಯವರು ಯುದ್ಧ ಆರಂಭವಾಗುತ್ತಿದ್ದಂತೆ ತಮ್ಮ ಮನೆಗಳನ್ನು ತೊರೆದು, ಹಳ್ಳಿಗಳತ್ತ ಗುಳೆಹೋಗಿದ್ದಾರೆ. ಅಂದಹಾಗೆ ವೈದ್ಯ ಗಿರಿಕುಮಾರ್ ಗೆ ಇದು ಎರಡನೆಯ ಯುದ್ಧವಂತೆ. ಆದರೆ ಇದು ಹಿಂದಿನದಕ್ಕಿಂತ ಭೀಕರವಾಗಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
2007ರಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿದ ಗಿರಿಕುಮಾರ್ ವೈದ್ಯ ಪದವಿ ಪಡೆದ ಬಳಿಕ ಮೂಳೆತಜ್ಞರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗ ಪಡೆದು, ಅಲ್ಲಿಯೇ ವಾಸಿಸತೊಡಗಿದರು. ಖಾಸಗಿಯಾಗಿಯೂ ಅವರು ವೈದ್ಯ ವೃತ್ತಿ ನಡೆಸುತ್ತಾರೆ. ದುರ್ದೈವವೆಂದರೆ ಯುದ್ಧ ಆರಂಭವಾಗುತ್ತಿದ್ದಂತೆ ಗಿರಿಕುಮಾರ್ ಕೆಲಸ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆ ಬಂದ್ ಮಾಡಲಾಗಿದೆ!
ಹೈದರಾಬಾದಿನ ವೈದ್ಯ ಗಿರಿಕುಮಾರ್ ಅಲ್ಲಿ 6 ಕೊಠಡಿಗಳ ಎರಡು ಅಂತಸ್ತಿನ ಮನೆಯಲ್ಲಿ ಏಕಾಂಗಿಯಾಗಿ ಆದರೆ ಪ್ರಾಣಿಗಳ ಜೊತೆ ವಾಸವಾಗಿದ್ದಾರೆ. ತಮ್ಮ ಗಳಿಕೆಯ ಬಹುಭಾಗವನ್ನು ಈ ಪ್ರಾಣಿಗಳ ಆರೈಕೆಗೆ ಖರ್ಚು ಮಾಡುತ್ತಾರೆ. ಜಾಗ್ವಾರ್ – ಪ್ಯಾಂಥರ್ ಜೋಡಿಯ ಜೊತೆಗೆ 3 ನಾಯಿಗಳು ಇವರ ಮಧ್ಯೆ ಇವೆ. ವೈದ್ಯ ಗಿರಿಕುಮಾರ್ ಯೂಟ್ಯೂಬ್ ಚಾನೆಲ್ ತೆರೆದಿದ್ದು, ಸುಮಾರು 1 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅದರಿಂದ ಬರುವ ಕಾಸನ್ನೂ ಈ ಪ್ರಾಣಿಗಳ ದೇಖರೇಖಿಗೆ ಬಳಸುತ್ತಾರೆ.