Watch: ಸ್ಥಳಾಂತರಿಸುವ ಮುನ್ನ ಉಕ್ರೇನ್ನಲ್ಲಿ ಗಾಯಗೊಂಡ ಭಾರತೀಯ ವಿದ್ಯಾರ್ಥಿಗೆ ಸಚಿವ ವಿಕೆ ಸಿಂಗ್ ಭರವಸೆ
ಸ್ಟ್ರೆಚರ್‌ನಲ್ಲಿದ್ದ 31 ವರ್ಷದ ವಿದ್ಯಾರ್ಥಿಯೊಂದಿಗೆ ಜನರಲ್ ಸಿಂಗ್ ರ್ಜೆಸ್ಜೋವ್‌ನ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿರವ ವಿಡಿಯೊವನ್ನು ಸಚಿವರು ಕೂನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿ: ಉಕ್ರೇನ್ (Ukraine) ರಾಜಧಾನಿ ಕೀವ್ನಲ್ಲಿ ಗುಂಡಿನ ದಾಳಿಗೊಳಗಾದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ (Harjot Singh) ಅವರು ಪೋಲೆಂಡ್‌ನ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ (VK Singh) ಅವರನ್ನು ಭೇಟಿಯಾದರು. ಅಲ್ಲಿಂದ ಅವರನ್ನು ಆಪರೇಷನ್ ಗಂಗಾ ಅಡಿಯಲ್ಲಿ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗುವುದು. ಸ್ಟ್ರೆಚರ್‌ನಲ್ಲಿದ್ದ 31 ವರ್ಷದ ವಿದ್ಯಾರ್ಥಿಯೊಂದಿಗೆ ಜನರಲ್ ಸಿಂಗ್ ರ್ಜೆಸ್ಜೋವ್‌ನ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿರವ ವಿಡಿಯೊವನ್ನು ಸಚಿವರು ಕೂನಲ್ಲಿ ಪೋಸ್ಟ್ ಮಾಡಿದ್ದಾರೆ. “ಅವರು ಉತ್ತಮ ರೀತಿಯಲ್ಲಿ ಇದ್ದಾರೆ ಎಂದು ನಾನು ದೇಶಕ್ಕೆ ಭರವಸೆ ನೀಡುತ್ತೇನೆ. ಅವನು ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ. ಅವರು ಚೆನ್ನಾಗಿ ಮತ್ತು ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ” ಎಂದು ಸಚಿವರು ಕೂನಲ್ಲಿ ಬರೆದಿದ್ದಾರೆ. ಹರ್ಜೋತ್ ಸಿಂಗ್ ಅವರ ವಿಮಾನವು ದೆಹಲಿ ಬಳಿಯ ಹಿಂಡನ್ ಏರ್ ಬೇಸ್‌ನಲ್ಲಿ ಸಂಜೆ 7 ಗಂಟೆಗೆ ಇಳಿಯುವ ನಿರೀಕ್ಷೆಯಿದೆ. ಉಕ್ರೇನ್‌ನೊಂದಿಗೆ ಗಡಿಯನ್ನು ಹಂಚಿಕೊಳ್ಳುವ ದೇಶಗಳಲ್ಲಿ ಒಂದಾದ ಪೋಲೆಂಡ್‌ನಿಂದ ಮರಳಿ ಕರೆತರಲಾಗುತ್ತಿರುವ 200 ಭಾರತೀಯರಲ್ಲಿ ಸಿಂಗ್ ಕೂಡಾ ಸೇರಿದ್ದಾರೆ. “ಹರ್ಜೋತ್ ಸಿಂಗ್ ಅವರು ಗಡಿಯನ್ನು ದಾಟಿ ಪೋಲೆಂಡ್‌ಗೆ ಪ್ರವೇಶಿಸಿದ್ದಾರೆ. ಅವರೊಂದಿಗೆ ಭಾರತೀಯ ರಾಜತಾಂತ್ರಿಕರು ಇದ್ದಾರೆ, ಗಡಿಯಲ್ಲಿ ಪೋಲಿಷ್ ರೆಡ್‌ಕ್ರಾಸ್ ಒದಗಿಸಿದ ಆಂಬ್ಯುಲೆನ್ಸ್‌ಗೆ ಅವರನ್ನು ಸ್ಥಳಾಂತರಿಸಲಾಗಿದೆ” ಎಂದು ಇಂಡಿಯನ್ ವರ್ಲ್ಡ್ ಫೋರಂನ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಹೇಳಿದ್ದಾರೆಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಪೋಲೆಂಡ್‌ನಲ್ಲಿ ತೆರವು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದ ಜನರಲ್ ವಿಕೆ ಸಿಂಗ್ ಕೂಡ ವಿಮಾನದಲ್ಲಿ ಬರುವ ನಿರೀಕ್ಷೆ ಇದೆ.
ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ವಿಶೇಷ ರಾಯಭಾರಿಗಳಾಗಿ ಕಳುಹಿಸಲಾದ ನಾಲ್ವರು ಸಚಿವರಲ್ಲಿ ಒಬ್ಬರಾಗಿದ್ದ ಸಚಿವರು, ಹರ್ಜೋತ್ ಸಿಂಗ್ ಅವರ ಆಗಮನದ ಬಗ್ಗೆ ಭಾನುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. “ಹರ್ಜೋತ್ ಸಿಂಗ್ ಗೆ ಕೀವ್ ಯುದ್ಧದ ಸಂದರ್ಭದಲ್ಲಿ ಗುಂಡು ತಾಕಿತ್ತು. ಅವನ ಪಾಸ್‌ಪೋರ್ಟ್ ಸಹ ಈ ವೇಳೆ ಕಳೆದುಹೋಗಿದೆ. ಹರ್ಜೋತ್ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ. ಮನೆ ಆಹಾರ ಮತ್ತು ಆರೈಕೆಯೊಂದಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬಹುದೆಂದು ಭಾವಿಸುತ್ತೇವೆ,” ಸಚಿವರು ಟ್ವೀಟ್ ಮಾಡಿದ್ದರು.
31ರ ಹರೆಯದ ಹರ್ಜೋತ್ ಸಿಂಗ್, ಕಳೆದ ತಿಂಗಳು ಕೀವ್ ನಿಂದ ಲಿವಿವ್ ಹೋಗಲು ಪ್ರಯತ್ನಿಸುತ್ತಿದ್ದಾಗ ಗುಂಡು ತಾಗಿತ್ತು. ಆತನಿಗೆ ಹಲವು ಬಾರಿ ಪೆಟ್ಟು ಬಿದ್ದು ಕಾಲು ಮುರಿದಿತ್ತು. “ಗುಂಡು ನನ್ನ ಭುಜದಿಂದ ಪ್ರವೇಶಿಸಿತು. ಅವರು ನನ್ನ ಎದೆಯಿಂದ ಗುಂಡನ್ನು ಹೊರತೆಗೆದರು. ನನ್ನ ಕಾಲು ಮುರಿದಿದೆ” ಎಂದು ಹರ್ಜೋತ್ ಸಿಂಗ್ ಕೀವ್ ಸಿಟಿ ಆಸ್ಪತ್ರೆಯಿಂದ ಎನ್ಡಿಟಿವಿಗೆ ತಿಳಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಅವರು ಭಾರತೀಯ ರಾಯಭಾರ ಕಚೇರಿಯಿಂದ ತನಗೆ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದರು. “ಭಾರತೀಯ ರಾಯಭಾರ ಕಚೇರಿಯಿಂದ ಇನ್ನೂ ಯಾವುದೇ ಬೆಂಬಲ ಸಿಕ್ಕಿಲ್ಲ. ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಪ್ರತಿದಿನ ಅವರು ನಾವು ಏನಾದರೂ ಮಾಡುತ್ತೇವೆ ಎಂದು ಹೇಳುತ್ತಾರೆ ಆದರೆ ಇನ್ನೂ ಯಾವುದೇ ಸಹಾಯ ಮಾಡಿಲ್ಲ” ಎಂದು ಸಿಂಗ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿತ್ತು
ಭಾರತವು ತನ್ನ ಸ್ಥಳಾಂತರಿಸುವ ಕಾರ್ಯಾಚರಣೆಯ ಆಪರೇಷನ್ ಗಂಗಾದ ಕೊನೆಯ ಪ್ರಕ್ರಿಯೆಯನ್ನು ಭಾನುವಾರ ಪ್ರಾರಂಭಿಸಿತು ಮತ್ತು ಇನ್ನೂ ಸಿಕ್ಕಿಬಿದ್ದಿರುವ ಮತ್ತು ತಮ್ಮ ಸ್ವಂತ ವಸತಿಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳನ್ನು ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ತಲುಪಲು ಕೇಳಿಕೊಂಡಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ