AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಗರ್ಭಿಣಿಯರಿಗೆ ಮೆಹೆಂದಿ ಹಾನಿಕಾರಕವೇ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

Mehndi in Pregnancy: ಮಹಿಳೆಯರು ಹಬ್ಬ, ಮದುವೆ ಹೀಗೆ ಯಾವುದೇ ರೀತಿಯ ಆಚರಣೆ ಮೆಹೆಂದಿ ಹಚ್ಚಿಕೊಳ್ಳುತ್ತಾರೆ. ಇದೊಂದು ರೀತಿಯ ಹೆಣ್ಣು ಮಕ್ಕಳ ಅಂದ ಹೆಚ್ಚಿಸುವ ಅಲಂಕಾರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಇದು ಕೇವಲ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅದರ ಹೊರತಾಗಿ, ಇದು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಆದರೆ ಕೆಲವು ಕಡೆಗಳಲ್ಲಿ ಗರ್ಭಿಣಿಯರು ಮೆಹಂದಿಯನ್ನು ಹಚ್ಚಿಕೊಳ್ಳಬಾರದು ಎನ್ನುತ್ತಾರೆ ಇದು ನಿಜವೇ? ಗರ್ಭಿಣಿಯರಿಗೆ ಮೆಹೆಂದಿ ಹಾನಿಕಾರಕವೇ? ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರು ಗೋರಂಟಿ ಹಚ್ಚಲು ಹೆದರಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Women Health: ಗರ್ಭಿಣಿಯರಿಗೆ ಮೆಹೆಂದಿ ಹಾನಿಕಾರಕವೇ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ
Apply Mehndi During PregnancyImage Credit source: i stock
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Jan 19, 2025 | 10:55 AM

Share

ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಕ್ರಮಗಳಲ್ಲಿಯೂ ಮೆಹೆಂದಿ ಅಥವಾ ಗೋರಂಟಿ ಹಾಕಿಕೊಳ್ಳುವುದು ವಾಡಿಕೆ. ಮಹಿಳೆಯರು ಹಬ್ಬ, ಮದುವೆ ಹೀಗೆ ಯಾವುದೇ ರೀತಿಯ ಆಚರಣೆ ಇರಲಿ ಇದನ್ನು ಹಚ್ಚಿಕೊಳ್ಳುತ್ತಾರೆ. ಇದೊಂದು ರೀತಿಯ ಹೆಣ್ಣು ಮಕ್ಕಳ ಅಂದ ಹೆಚ್ಚಿಸುವ ಅಲಂಕಾರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಆದರೆ ಇದು ಕೇವಲ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅದರ ಹೊರತಾಗಿ, ಇದು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಆದರೆ ಕೆಲವು ಕಡೆಗಳಲ್ಲಿ ಗರ್ಭಿಣಿಯರು ಮೆಹಂದಿಯನ್ನು ಹಚ್ಚಿಕೊಳ್ಳಬಾರದು ಎನ್ನುತ್ತಾರೆ ಇದು ನಿಜವೇ? ಗರ್ಭಿಣಿಯರಿಗೆ ಮೆಹೆಂದಿ ಹಾನಿಕಾರಕವೇ? ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರು ಗೋರಂಟಿ ಹಚ್ಚಲು ಹೆದರಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಇತ್ತೀಚೆಗೆ, ಇನ್ಸ್ಟಾ ಗಳಲ್ಲಿ ಬಹಳ ಕಳವಳಕಾರಿ ಹೇಳಿಕೆಗಳು ಬಿತ್ತರಿಸಲಾರಂಭಿಸಿದ್ದವು. ಅದೇನೆಂದರೆ, ಗರ್ಭಾವಸ್ಥೆಯಲ್ಲಿ ಮೆಹೆಂದಿ ಅಥವಾ ಗೋರಂಟಿ ಹಚ್ಚುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಯಿತು. ಕೆಲವರು ಫೋಟೋ ಗಳಿಗಾಗಿ ತಮ್ಮ ಹೊಟ್ಟೆಯ ಮೇಲೆ ಮೆಹೆಂದಿ ಹಾಕಿಕೊಳ್ಳುತ್ತಿದ್ದು ಇದು ಕೂಡ ಈ ರೀತಿಯ ಸುದ್ದಿ ಹಬ್ಬಲು ಕಾರಣವಾಗಿರಬಹುದು. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿತ್ತು. ಇದನ್ನು ನಂಬಿದ ಹಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಗೋರಂಟಿ ಹಚ್ಚುವುದು ನಿಜವಾಗಿಯೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಿದರು. ಹಾಗಾದರೆ ಇದರಲ್ಲಿ ಎಷ್ಟು ಸತ್ಯವಿದೆ? ಈ ಬಗ್ಗೆ ವೈದ್ಯರು ಹೇಳುವುದೇನು?

ಇದನ್ನೂ ಓದಿ: ನಿಮ್ಮ ಸೌಂದರ್ಯ ದುಪ್ಪಟ್ಟಾಗಬೇಕಾದರೆ ಗುಲಾಬಿ ದಳಗಳನ್ನು ಈ ರೀತಿ ಬಳಸಿರಿ

ವೈದ್ಯರು ಹೇಳುವುದೇನು?

ಆರೋಗ್ಯ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಈ ವಿಷಯ ಸತ್ಯವಲ್ಲ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರವಿಲ್ಲ. ಗೋರಂಟಿ ನೈಸರ್ಗಿಕ ಬಣ್ಣ. ಇದು ಚರ್ಮದ ಹೊರ ಪದರವನ್ನು ಮಾತ್ರ ರಂಗೆರಿಸುತ್ತವೆ ಇದು ದೇಹದ ಒಳಗೆ ಹೋಗುವುದಿಲ್ಲ ಆದ್ದರಿಂದ ಮಗುವಿನ ಚರ್ಮದ ಮೇಲೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಅಥವಾ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅದರಲ್ಲಿಯೂ ಮಗುವಿನ ಚರ್ಮದ ಬಣ್ಣವು ಆನುವಂಶಿಕ ಅಂಶ ಮತ್ತು ಮೆಲನಿನ್ ಉತ್ಪಾದನೆಯಿಂದ ನಿರ್ಧರಿಸಲ್ಪಡುತ್ತದೆಯೇ ಹೊರತು ತಾಯಿಯ ಚರ್ಮಕ್ಕೆ ಅನ್ವಯಿಸುವ ಯಾವುದರಿಂದಲೂ ಅಲ್ಲ ಎಂದಿದ್ದಾರೆ. ಆದರೆ ಗರ್ಭಾವಸ್ಥೆಯಲ್ಲಿ, ಮಹಿಳೆಯರು ಪ್ಯಾರಾ- ಫಿನೈಲೆನಾಡಿಯಮೈನ್ (ಪಿಪಿಡಿ) ನಂತಹ ರಾಸಾಯನಿಕ ಅಂಶವಿರುವ ಗೋರಂಟಿಯನ್ನು ಅನ್ವಯಿಸದಂತೆ ಎಚ್ಚರಿಕೆ ವಹಿಸಬೇಕು. ಕೃತಕ ಗೋರಂಟಿ ಹಚ್ಚುವುದನ್ನು ತಪ್ಪಿಸಿ. ಯಾವಾಗಲೂ ನೈಸರ್ಗಿಕ ಗೋರಂಟಿ ಬಳಸುವುದು ಬಹಳ ಒಳ್ಳೆಯದು.

(ಸೂಚನೆ: ಈ ಲೇಖನವು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಿ.)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ