Fact Check ರಷ್ಯಾ ದಾಳಿ ನಂತರ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇನಾ ಸಮವಸ್ತ್ರ ಧರಿಸಿ ಹೋರಾಡುತ್ತಿರುವ ವೈರಲ್ ಚಿತ್ರ ಈಗಿನದ್ದು ಅಲ್ಲ
Volodymyr Zelenskiy ಮಿಲಿಟರಿ ಸಮವಸ್ತ್ರ ಧರಿಸಿ ಝೆಲೆನ್ಸ್ಕಿ ಯುದ್ಧ ಸನ್ನದ್ಧರಾಗಿರುವ ಈ ಚಿತ್ರ ಹಳೇದು ಎಂಬುದು ಫ್ಯಾಕ್ಟ್ ಚೆಕ್ ಮಾಡಿದಾಗ ತಿಳಿದುಬಂದಿದೆ.
ಫೆಬ್ರವರಿ 24, 2022 ರಂದು ರಷ್ಯಾ ಉಕ್ರೇನ್ (Ukraine) ಮೇಲೆ ಆಕ್ರಮಣ ಮಾಡಿದ ನಂತರ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskiy) ಹೋರಾಡುತ್ತಿರುವುದು ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಚಿತ್ರಗಳು ವೈರಲ್ ಆಗಿವೆ. ಮಿಲಿಟರಿ ಸಮವಸ್ತ್ರ ಧರಿಸಿ ಝೆಲೆನ್ಸ್ಕಿ ಯುದ್ಧ ಸನ್ನದ್ಧರಾಗಿರುವ ಈ ಚಿತ್ರ ಹಳೇದು ಎಂಬುದು ಫ್ಯಾಕ್ಟ್ ಚೆಕ್ (Fact Check) ಮಾಡಿದಾಗ ತಿಳಿದುಬಂದಿದೆ. ರಷ್ಯಾದ ಕ್ಷಿಪಣಿಗಳು ಕೈವ್‌ಗೆ ಅಪ್ಪಳಿಸಿದಾಗ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಮಿಲಿಟರಿಯನ್ನು ಅಧಿಕಾರಕ್ಕೆ ತೆಗೆದುಕೊಂಡು ಶಾಂತಿ ಸ್ಥಾಪಿಸಲು ಒತ್ತಾಯಿಸಿದ ಹೊತ್ತಲ್ಲೇ ತಪ್ಪಾದ ಶೀರ್ಷಿಕೆಯೊಂದಿಗೆ ಝೆಲೆನ್ಸ್ಕಿ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡಿದೆ.ಮಿಲಿಟರಿ ಸಮವಸ್ತ್ರವನ್ನು ಧರಿಸಿರುವ ಝೆಲೆನ್ಸ್ಕಿಯ ಎರಡು ಚಿತ್ರಗಳನ್ನು ಒಳಗೊಂಡಿರುವ ಫೇಸ್‌ಬುಕ್ ಪೋಸ್ಟ್ 71,000 ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಉಕ್ರೇನ್ ಅಧ್ಯಕ್ಷರು ತಮ್ಮ ಜನರಿಗಾಗಿ ಹೋರಾಡವು ಮುಂಚೂಣಿಯಲ್ಲಿದ್ದಾರೆ. ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಶಸ್ತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ಸೈನ್ಯವನ್ನು ಸೇರಿಕೊಂಡಿದ್ದಾರೆ ಎಂದು ಫೋಟೊಗಳಿಗೆ ಶೀರ್ಷಿಕೆ ನೀಡಲಾಗಿದೆ. “ಇದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. ಉಕ್ರೇನಿಯನ್ ತಾಯ್ನಾಡನ್ನು ರಕ್ಷಿಸುವ ಹೋರಾಟದಲ್ಲಿ ಸೈನ್ಯವನ್ನು ಸೇರಲು ಅವನು ತನ್ನ ಬಟ್ಟೆಗಳನ್ನು ತೆಗೆದು ಮಿಲಿಟರಿ ಸಮವಸ್ತ್ರವನ್ನು ಹಾಕಿದನು. ಅವರು ನಿಜವಾದ ನಾಯಕ” ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಆದಾಗ್ಯೂ, ಈ ಚಿತ್ರಗಳು ಹಲವಾರು ತಿಂಗಳ ಹಳೆಯವು. ರಾಯಿಟರ್ಸ್ ವರದಿ ಪ್ರಕಾರ ಈ ಚಿತ್ರಗಳನ್ನು ಡಿಸೆಂಬರ್ 6, 2021 ರಂದು ತೆಗೆದುಕೊಳ್ಳಲಾಗಿದೆ ಮತ್ತು ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿ ಯೋಧರೊಂದಿಗೆ ಅಧ್ಯಕ್ಷರು ಸಭೆ ನಡೆಸುತ್ತಿರುವುದಾಗಿದೆ. “ನಂಬರ್ ಒನ್ ಟಾರ್ಗೆಟ್” ಆಗಿದ್ದರೂ, ರಷ್ಯಾದ ದಾಳಿಯ ಮುಖಾಂತರ ಕೈವ್‌ನಲ್ಲಿ ಉಳಿಯಲು ಯೋಜಿಸುತ್ತಿದ್ದೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ ಎಂದು ಬಳಕೆದಾರರೊಬ್ಬರು ಫೋಟೊಗೆ ಶೀರ್ಷಿಕೆ ನೀಡಿದ್ದಾರೆ. ಅಂದ ಹಾಗೆ ಈ ಫೇಸ್‌ಬುಕ್ ಪೋಸ್ಟ್ನಲ್ಲಿರುವ ಫೋಟೊ ಕೂಡಾ ಹಳೇದು.
ಇದನ್ನೂ ಓದಿ: Video: ಯುದ್ಧದ ಮಧ್ಯೆ ವೈರಲ್ ಆಯ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ ಡ್ಯಾನ್ಸ್ ವಿಡಿಯೋ
Published On - 1:53 pm, Sun, 27 February 22