Ukraine Crisis: ರಷ್ಯಾ- ಉಕ್ರೇನ್ ಕದನ; ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಉಕ್ರೇನ್​ಗೆ ನೆರವು; 10 ಮುಖ್ಯಾಂಶಗಳು ಇಲ್ಲಿವೆ

Ukraine Crisis: ರಷ್ಯಾ- ಉಕ್ರೇನ್ ಕದನ; ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಉಕ್ರೇನ್​ಗೆ ನೆರವು; 10 ಮುಖ್ಯಾಂಶಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ

Russia Ukraine War: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್​ಗೆ ಹಲವು ರಾಷ್ಟ್ರಗಳು ನೆರವು ನೀಡಲು ಮುಂದೆ ಬಂದಿವೆ. ಇದುವರೆಗಿನ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.

TV9kannada Web Team

| Edited By: shivaprasad.hs

Feb 27, 2022 | 12:43 PM

ರಷ್ಯಾ ಹಾಗೂ ಉಕ್ರೇನ್ ಕದನ (Russia Ukraine War) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾವು ತನ್ನ ಸೇನೆಗೆ ಮುನ್ನಡೆಯಲು ಆದೇಶಿಸಿದ್ದು, ಉಕ್ರೇನ್ ರಾಜಧಾನಿ ಕೀವ್ (Kyiv) ಸಮೀಪ ಹಾಗೂ ಇತರ ಪ್ರದೇಶಗಳಲ್ಲಿ ಎರಡೂ ಪಡೆಗಳ ನಡುವೆ ಕದನ ಜೋರಾಗಿದೆ. ಪಾಶ್ಚಾತ್ಯ ರಾಷ್ಟ್ರಗಳು ಶನಿವಾರ ತಡರಾತ್ರಿ ರಷ್ಯಾದ ವಿರುದ್ಧ ಮತ್ತಷ್ಟು ಆರ್ಥಿಕ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಿವೆ. ಇತ್ತ ಉಕ್ರೇನ್​ಗೆ ಹಲವು ರಾಷ್ಟ್ರಗಳು ಶಸ್ತ್ರಾಸ್ತ್ರ ಸೇರಿದಂತೆ ಹಲವು ರೀತಿಯ ಸಹಾಯ ಮಾಡುತ್ತಿವೆ. ರಷ್ಯಾದ ದಾಳಿಯಲ್ಲಿ ನಾಗರಿಕರನ್ನು ಕೂಡ ಗುರಿಯಾಗಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಅದು ತಿಳಿಸಿದಂತೆ ಗುರುವಾರದಿಂದ ಇಲ್ಲಿಯವರೆಗೆ ಸುಮಾರು 198 ಉಕ್ರೇನ್ ನಾಗರಿಕರು ಮರಣವನ್ನಪ್ಪಿದ್ದಾರೆ. ಯುದ್ಧದ ಇತ್ತೀಚಿನ ಬೆಳವಣಿಗೆಗಳ ಹತ್ತು ಮುಖ್ಯಾಂಶಗಳು ಇಲ್ಲಿವೆ.

  1. ಉಕ್ರೇನ್ ಕದನ ವಿರಾಮದ ಮಾತುಕತೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಆರೋಪಕ್ಕೆ ಉಕ್ರೇನ್ ಪ್ರತಿಕ್ರಿಯಿಸಿದೆ. ಸ್ವೀಕಾರಾರ್ಹವಲ್ಲದ ಷರತ್ತುಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ ಎಂದು ಉಕ್ರೇನ್ ತಿಳಿಸಿದೆ.
  2. ಶನಿವಾರದಂದು ರಷ್ಯನ್ ಪಡೆಗಳು ಫಿರಂಗಿ ಹಾಗೂ ಕ್ಷಿಪಣಿಗಳ ಮೂಲಕ ಉಕ್ರೇನ್ ನಗರಗಳ ಮೇಲೆ ದಾಳಿ ಮಾಡಿದವು. ಇದಕ್ಕೆ ಉಕ್ರೇನ್ ತಕ್ಕ ಪ್ರತಿಕ್ರಿಯೆ ನೀಡಿದೆ. ರಾಜಧಾನಿ ಕೀವ್ ಉಕ್ರೇನ್ ಬಳಿಯಲ್ಲಿಯೇ ಇದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
  3. ಉಕ್ರೇನಿಯನ್ ಪಡೆಗಳಿಂದ ಅನಿರೀಕ್ಷಿತವಾಗಿ ಕಠಿಣ ಪ್ರತಿರೋಧವನ್ನು ರಷ್ಯಾದ ಪಡೆಗಳು ಎದುರಿಸುತ್ತಿವೆ. ಇದರಿಂದ ಆಕ್ರಮಣ ನಿಧಾನವಾಗುತ್ತಿದೆ ಎಂದು ರಷ್ಯಾ ನಿರಾಶೆಗೊಂಡಿದೆ. ಸದ್ಯ ರಷ್ಯಾ ಪಡೆಗಳು ಕೀವ್​ನ ಹೊರಗಿವೆ ಎಂದು ಅಮೇರಿಕಾದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದನ್ನು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ.
  4. ಅಮೇರಿಕಾದ ಪೆಂಟಗನ್ ತಿಳಿಸಿರುವ ಮಾಹಿತಿಯ ಪ್ರಕಾರ ರಷ್ಯಾದ ಶೇ.50ರಷ್ಟು ಸೇನೆ ಇದೀಗ ಉಕ್ರೇನ್​ನಲ್ಲಿದೆ.
  5. ಜರ್ಮನಿ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾವನ್ನು SWIFT ಜಾಗತಿಕ ಪಾವತಿ ವ್ಯವಸ್ಥೆಯಿಂದ ಹೊರಹಾಕಲು ಒಪ್ಪಿಕೊಂಡಿವೆ ಎಂದು ಜರ್ಮನ್ ತಿಳಿಸಿದೆ. ರಷ್ಯಾದ ಆಕ್ರಮಣವನ್ನು ನಿಲ್ಲಿಸಲು ಒತ್ತಡ ಹೇರುವ ಮೂರನೇ ಸುತ್ತಿನ ನಿರ್ಬಂಧ ಇದಾಗಿದೆ.
  6. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ರಷ್ಯಾದ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ರಷ್ಯಾ ವೀಟೋ ಅಧಿಕಾರದಿಂದ ವಿಫಲಗೊಳಿಸಿತು. ಭಾರತ ಮತದಾನದಿಂದ ದೂರ ಉಳಿದಿತ್ತು. ಇದನ್ನು ರಷ್ಯಾ ಸ್ವಾಗತಿಸಿತ್ತು. ಇದರ ಬೆನ್ನಲ್ಲೇ, ಉಕ್ರೇನ್ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಾಜಕೀಯ ಸಹಾಯಹಸ್ತ ಕೋರುವಂತೆ ಮನವಿ ಮಾಡಿದ್ದಾರೆ.
  7. ರಷ್ಯಾ- ಉಕ್ರೇನ್ ಕದನದಲ್ಲಿ ಮೂವರು ಮಕ್ಕಳು ಸೇರಿದಂತೆ 198 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,115 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಶನಿವಾರ ಹೇಳಿದ್ದಾರೆ.
  8. ಇದುವರೆಗೆ ಸುಮಾರು 3,500 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ ಸಲಹೆಗಾರ ಮಾಹಿತಿ ನೀಡಿದ್ದಾರೆ.
  9. ಅಮೇರಿಕಾ ಒಟ್ಟು 600 ಮಿಲಿಯನ್ ಡಾಲರ್ ನೆರವನ್ನು ಉಕ್ರೇನ್​ಗೆ ನೀಡಲಿದೆ. ಇದರಲ್ಲಿ 350 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳಿವೆ. ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಜೆಕ್ ರಿಪಬ್ಲಿಕ್, ಬೆಲ್ಜಿಯಂ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್​ಗೆ ಶಸ್ತ್ರಾಸ್ತ್ರ ಹಾಗೂ ಇತರ ರೂಪದ ಸಹಾಯ ಮಾಡಲು ಮುಂದಾಗಿವೆ.
  10. ರಷ್ಯಾ ಆಕ್ರಮಣದ ನಂತರ ಜನರು ಸುತ್ತಮುತ್ತದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪೋಲೆಂಡ್​ಗೆ ಸುಮಾರು 1,00,000 ನಿರಾಶ್ರಿತರು ತೆರಳಿದ್ದು, ಇಷ್ಟೇ ಸಂಖ್ಯೆಯ ಜನರು ದೇಶದೊಳಗೆ ಸ್ಥಳಾಂತರಗೊಂಡಿದ್ದಾರೆ. ಸುಮಾರು 50,000 ಜನರು ಹಂಗೇರಿ ಮತ್ತು ರೊಮೇನಿಯಾವನ್ನು ಪ್ರವೇಶಿಸಿದ್ದಾರೆ ಮತ್ತು ಸಾವಿರಾರು ಜನರು ಮೊಲ್ಡೊವಾವನ್ನು ದಾಟಿದ್ದಾರೆ.

ಇದನ್ನೂ ಓದಿ:

Russia Ukraine War Live: ಉಕ್ರೇನ್​ನ ಎರಡನೇ ದೊಡ್ಡ ನಗರ ಖಾರ್ಕಿವ್ ಪ್ರವೇಶಿಸಿದ ರಷ್ಯಾ ಸೇನೆ; ಉಕ್ರೇನ್​ನಿಂದ ಪ್ರತಿದಾಳಿ

Russia Ukraine War: ರಷ್ಯಾ- ಉಕ್ರೇನ್ ಯುದ್ಧದ ಭೀಕರತೆ ಕಟ್ಟಿಕೊಡುವ ಫೋಟೋಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada