ಸುದೀಪ್ ಮಾತಾಡುವ ಮೊದಲೇ ರಜತ್ಗೆ ಪಾಠ ಕಲಿಸಿದ ಬಿಗ್ ಬಾಸ್ ಸದಸ್ಯರು
ಬಾಯಿಗೆ ಬಂದಂತೆ ಮಾತನಾಡಿದ್ದ ರಜತ್ ಅವರಿಗೆ ಬಿಗ್ ಬಾಸ್ ಮನೆಯ ಸದಸ್ಯರು ಕಳಪೆ ಪಟ್ಟ ನೀಡಿದ್ದಾರೆ. ಬಹುತೇಕ ಎಲ್ಲ ಅಭಿಪ್ರಾಯ ಇದೇ ಆಗಿದ್ದರಿಂದ ರಜತ್ ಜೈಲಿಗೆ ಹೋಗಬೇಕಾಯಿತು. ಜೈಲಿಗೆ ಹೋದರೂ ಕೂಡ ರಜತ್ ಸೊಕ್ಕು ಕಡಿಮೆ ಆಗಿಲ್ಲ. ಹಾಗಾಗಿ ವೀಕೆಂಡ್ನಲ್ಲಿ ಅವರು ಸುದೀಪ್ ಕಡೆಯಿಂದ ಬೈಯ್ಯಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ರಜತ್ ಅವರಿಗೆ ಮಾತಿನ ಮೇಲೆ ಹಿಡಿತ ಇಲ್ಲ. ಇನ್ನುಳಿದ ಸ್ಪರ್ಧಿಗಳಿಗೆ ಅವರು ಅವಾಚ್ಯ ಪದಗಳನ್ನು ಬಳಸಿದ್ದಾರೆ. ಗೋಲ್ಡ್ ಸುರೇಶ್ ಅವರಿಗೆ ಅವಮಾನ ಆಗುವಂತಹ ಮಾತುಗಳನ್ನು ರಜತ್ ಹೇಳಿದ್ದಾರೆ. ಆಟದ ಮಧ್ಯೆ ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ಆಗಿದೆ. ಹಾಗಾಗಿ ಅವರಿಗೆ ಎಲ್ಲರೂ ಸೇರೆ ಕಳಪೆ ಪಟ್ಟ ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲನೇ ವಾರವೇ ರಜತ್ ಅವರು ಜೈಲು ಸೇರುವಂತಾಗಿದೆ. ಹಾಗಂತ ಅವರ ಅಹಂಕಾರ ಕಡಿಮೆ ಆಗಿಲ್ಲ.
ಇಡೀ ವಾರದ ಆಟ ಮತ್ತು ವರ್ತನೆಯನ್ನು ಪರಿಗಣಿಸಿ ದೊಡ್ಮನೆಯಲ್ಲಿ ಕಳಪೆ ಯಾರು ಮತ್ತು ಉತ್ತಮ ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ವಾರ ಉತ್ತಮ ಪಟ್ಟ ಮೋಕ್ಷಿತಾ ಅವರಿಗೆ ಸಿಕ್ಕಿತು. ಕಳಪೆ ಪಟ್ಟ ರಜತ್ ಪಾಲಾಯಿತು. ಎಲ್ಲರೂ ನೀಡಿದ್ದು ಒಂದೇ ಕಾರಣ. ರಜತ್ ಆಡುವ ಮಾತುಗಳು ಸರಿ ಇಲ್ಲ ಎಂಬುದೇ ಆ ಕಾರಣ. ಆದರೆ ತಮ್ಮ ತಪ್ಪನ್ನು ರಜತ್ ಅರಿತುಕೊಂಡಿಲ್ಲ.
ಜೈಲಿಗೆ ಹೋದಾಗಲೂ ರಜತ್ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ‘ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ಹುಡುಗಿಯರ ಕೈ ಕೈ ಹಿಡಿದುಕೊಂಡು ಓಡಾಡಿದಂತೆ ಅಲ್ಲ. ಇನ್ಮೇಲೆ ಇದಕ್ಕಿಂತಲೂ ಜಾಸ್ತಿ ಮಾತನಾಡುತ್ತೇನೆ. ನಾನು ಬದಲಾಗಲ್ಲ’ ಎಂದು ರಜತ್ ಹೇಳಿದ್ದಾರೆ. ಅವರ ಮಾತುಗಳಿಂದ ಉಗ್ರಂ ಮಂಜು, ಐಶ್ವರ್ಯಾ, ಶಿಶಿರ್ ಮುಂತಾದವರಿಗೆ ಮತ್ತೆ ಬೇಸರ ಆಗಿದೆ.
ಇದನ್ನೂ ಓದಿ: ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್; ಮುಖಕ್ಕೆ ಬಿತ್ತು ಕೆಸರು
ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅವರು ರಜತ್ಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ಬಹುತೇಕರ ಬಯಕೆ. ಅದಕ್ಕೂ ಮುನ್ನವೇ ರಜತ್ಗೆ ಕಳಪೆ ನೀಡಿ ಜೈಲಿಗೆ ಕಳಿಸುವ ಮೂಲಕ ಬಿಗ್ ಬಾಸ್ ಸ್ಪರ್ಧಿಗಳೇ ಪಾಠ ಕಲಿಸಿದ್ದಾರೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ಗೆ ರಜತ್ ಆಯ್ಕೆ ಆಗಿದ್ದರು. ಆದರೆ ಕೊನೆಯಲ್ಲಿ ಸೋತರು. ಅಂತಿಮವಾಗಿ ಮಂಜು ಟಾಸ್ಕ್ ಗೆದ್ದು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ಆಟದಲ್ಲಿ ಹನುಮಂತ ಕೂಡ ಭರ್ಜರಿ ಪೈಪೋಟಿ ನೀಡಿದರು. ಚೈತ್ರಾ ಕುಂದಾಪುರ ಹಾಗೂ ಶೋಭಾ ಶೆಟ್ಟಿ ಸಹ ಕ್ಯಾಪ್ಟೆನ್ಸಿ ಆಟದಲ್ಲಿ ಸೋತರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.