Bigg Boss: ಅವಾಚ್ಯ ಶಬ್ದ ಬಳಸಿದ ರಜತ್​ಗೆ ಸುದೀಪ್ ಕ್ಲಾಸ್

Bigg Boss Kannada season 11: ಈ ವಾರ ಬಿಗ್​ಬಾಸ್ ಮನೆಯಲ್ಲಿ ಹಲವು ಘಟನೆಗಳು ನಡೆದಿವೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಿರುವ ರಜತ್, ಅವಾಚ್ಯ ಶಬ್ದಗಳನ್ನು ಬಳಸಿರುವ ಕಾರಣ ಅವರಿಗೆ ಕಳಪೆ ನೀಡಲಾಗಿತ್ತು. ಇದೀಗ ಸುದೀಪ್, ರಜತ್​ಗೆ ಮೆದುವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

Bigg Boss: ಅವಾಚ್ಯ ಶಬ್ದ ಬಳಸಿದ ರಜತ್​ಗೆ ಸುದೀಪ್ ಕ್ಲಾಸ್
Follow us
ಮಂಜುನಾಥ ಸಿ.
|

Updated on: Nov 23, 2024 | 10:50 PM

ಕಳೆದ ವಾರ ಮನೆಗೆ ಬಂದ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳು ಬಹಳ ಅಗ್ರೆಸ್ಸಿವ್ ಆಗಿ ಆಟ ಆಡುತ್ತಿದ್ದಾರೆ. ಶೋಭಾ ಹಾಗೂ ರಜತ್ ಅವರುಗಳು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರಜತ್ ಅಂತೂ ತಾನು ಅತ್ಯಂತ ಅಗ್ರೆಸ್ಸಿವ್ ಎಂದು ಬಂದ ದಿನವೇ ತೋರಿಸಿದ್ದಾರೆ. ಅದರಂತೆ ಆಟ ಸಹ ಆಡುತ್ತಿದ್ದಾರೆ. ಆದರೆ ಈ ವಾರ ನಡೆದ ಟಾಸ್ಕ್​ಗಳಲ್ಲಿ ಅವರು ತುಸು ಹೆಚ್ಚಾಗಿಯೇ ಅಗ್ರೆಸ್ಸಿವ್ ಆಗಿದ್ದಾರೆ. ಆದರೆ ಸುದೀಪ್ ಇಂದು ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವಾರ ನಡೆದ ಟಾಸ್ಕ್​ನಲ್ಲಿ ರಜತ್ ತೀರಾ ಅಗ್ರೆಸ್ಸಿವ್ ಆಗಿ ಆಡಿದ್ದು, ಆಟಗಾರ ಸುರೇಶ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಾರೆ. ಈ ಹಿಂದೆ ಲಾಯರ್ ಜಗದೀಶ್ ಅವಾಚ್ಯ ಶಬ್ದಗಳನ್ನು ಬಳಸಿ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ ಈಗ ಮತ್ತೆ ಮನೆಯಲ್ಲಿ ಅವಾಚ್ಯ ಶಬ್ದಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ರಜತ್​ಗೆ ಕಳಪೆ ನೀಡಿ ಜೈಲಿಗೆ ಸಹ ಅಟ್ಟಲಾಗಿತ್ತು.

ಶನಿವಾರದ ಎಪಿಸೋಡ್​ನಲ್ಲಿ ವಾರದ ಪಂಚಾಯಿತಿ ನಡೆಸಿಕೊಟ್ಟ ಸುದೀಪ್, ಸುರೇಶ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ರಜತ್​ಗೆ ಸಣ್ಣದಾಗಿ ಕ್ಲಾಸ್ ತೆಗೆದುಕೊಂಡರು. ಕನ್ನಡದಲ್ಲಿ ಹಲವಾರು ಮಾತುಗಳಿವೆ ಆದರೆ ಆ ಮಾತುಗಳನ್ನು ಏಕೆ ಬಳಸಿದಿರಿ ಎಂದು ಪ್ರಶ್ನೆ ಮಾಡಿದ ಸುದೀಪ್, ಅಂದು ಬಳಸಿದ ಮಾತುಗಳನ್ನು ಈಗ ಇಲ್ಲಿ ನನ್ನ ಎದುರು ಬಳಸಿ ನೋಡೋಣ’ ಎಂದು ಸವಾಲು ಹಾಕಿದರು. ‘ಕೋಪದಲ್ಲಿದ್ದಾಗ ಇದೇ ಭಾಷೆ ಬಳಸುವೆ ಅನ್ನುತ್ತೀರಿ, ಈ ಮನೆಯಲ್ಲಿ ಕೋಪ ಬರುವ ಸನ್ನಿವೇಶ ಸಾಕಷ್ಟು ಬರುತ್ತವೆ, ಆಗೆಲ್ಲ ಹೀಗೆಯೇ ಮಾತನಾಡುತ್ತೀರಾ’ ಎಂದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ

‘ಅಂದು ಕೋಪದಲ್ಲಿ ಮಾತನಾಡಿದೆ ಮತ್ತೆ ಮಾತನಾಡುವುದಿಲ್ಲ’ ಎಂದು ರಜತ್ ಕ್ಷಮೆ ಕೇಳಿದರಾದರೂ, ಯಾರೇ ಆಗಲಿ ಸೋಲುತ್ತೀರಿ, ಗೆಲ್ಲುತ್ತೀರಿ, ಬಹಳ ಕಷ್ಟಪಟ್ಟು ಆಡುತ್ತಿದ್ದೀರಿ ಆದರೆ ಅವಾಚ್ಯ ಶಬ್ದ ಬಳಸಿ, ಜಗಳ ಮಾಡಿ, ಕೈ ಮಾಡಿ ಇಂಥಹಾ ಸಿಲ್ಲಿ ಕಾರಣಗಳಿಗೆ, ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡು ಮನೆಯಿಂದ ಹೊರಗೆ ಹೋಗಬೇಡಿ’ ಎಂದು ಎಲ್ಲರಿಗೂ ಬುದ್ಧಿವಾದ ಹೇಳಿದರು ಸುದೀಪ್.

ಹೊರಗಡೆಯಿಂದ ಮನೆಗೆ ಬಂದ ರಜತ್, ‘ಶೋ ಟಿಆರ್​ಪಿ ಚೆನ್ನಾಗಿದೆ. ಜನರಿಗೆ ಇದು ಇಷ್ಟ ಆಗ್ತಿದೆ, ಇದು ಇಷ್ಟ ಆಗ್ತಿಲ್ಲ’ ಎಂದು ಹೇಳಿದ್ದರು. ಇದರ ಬಗ್ಗೆ ಅಸಮಾಧಾನಗೊಂಡು ಮಾತನಾಡಿದ ಸುದೀಪ್, ಹೊರಗಡೆಯದ್ದು ಒಳಗೆ ಹೇಳಲಿ ಎಂದು ಕಳಿಸಿಕೊಟ್ಟಿದ್ದಾ ಎಂದು ಕೇಳಿದರು. ಅದಕ್ಕೆ ರಜತ್ ಮತ್ತೊಮ್ಮೆ ರಿಪೀಟ್ ಮಾಡಲ್ಲ ಎಂದರು. ಅದಕ್ಕೆ ಸುದೀಪ್, ಮತ್ತೆ ಹಾಗೆ ಮಾಡಿದರೆ ಬಾಗಿಲು ತೆಗೆದು ಹೊರಗೆ ಕಳಿಸುತ್ತೇನೆ. ಬಾಗಿಲಿನ ಒಂದು ಕೀ ನನ್ನ ಹತ್ತಿರ ಇದೆ’ ಎಂದು ಎಚ್ಚರಿಕೆ ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು