ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ನ ಶನಿವಾರದ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಕುರಿತು ಸುದೀಪ್ ಮಾತನಾಡಿದರು. ಇಬ್ಬರೂ ಒಟ್ಟಿಗೆ ಸ್ನಾನ ಮಾಡಿದ ವಿಚಾರ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಹನುಮಂತು-ಧನರಾಜ್ ಒಟ್ಟಿಗೆ ಸ್ನಾನ, ಸಲಹೆ ಕೊಟ್ಟ ಸುದೀಪ್
Follow us
ಮಂಜುನಾಥ ಸಿ.
|

Updated on:Nov 24, 2024 | 7:50 AM

ಬಿಗ್​ಬಾಸ್ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ಸ್ಪರ್ಧಿಗಳು ಒಳ್ಳೆಯ ಗೆಳೆಯರಾಗುತ್ತಾರೆ. ಲವ್​ ಸ್ಟೋರಿ ನಡೆಯಬಹುದು ನಡೆಯದೇ ಇರಬಹುದು ಆದರೆ ಗೆಳೆತನವಂತೂ ಪಕ್ಕಾ. ಕಳೆದ ಬಾರಿ ವರ್ತೂರು ಸಂತೋಷ್-ತುಕಾಲಿ ಸಂತೋಶ್, ವಿನಯ್-ಮೈಖಲ್, ಅದಕ್ಕೆ ಹಿಂದೆ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಹೀಗೆ ಪ್ರತಿ ಸೀಸನ್​ನಲ್ಲೂ ಒಂದು ಜೋಡಿ ಇರುತ್ತದೆ. ಈ ಸೀಸನ್​ನಲ್ಲಿ ಧನರಾಜ್ ಮತ್ತು ಹನುಮಂತು ಬಲು ಆತ್ಮೀಯ ಗೆಳೆಯರಾಗಿದ್ದಾರೆ. ಅದೆಷ್ಟು ಆತ್ಮೀಯರಾಗಿದ್ದಾರೆಂದರೆ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವಷ್ಟು!

ಹನುಮಂತುಗೆ ಕಿಚ್ಚ ಸುದೀಪ್ ಅವರು ಬಟ್ಟೆಗಳನ್ನು ಕಳಿಸಿಕೊಟ್ಟಿದ್ದರು. ಬಟ್ಟೆಯ ಜೊತೆ ಕಳಿಸಿದ್ದ ನೋಟ್​ನಲ್ಲಿ ದಿನವೂ ಸ್ನಾನ ಮಾಡುವಂತೆ ಹೇಳಿದ್ದರು. ಶನಿವಾರದ ಎಪಿಸೋಡ್​ನಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ‘ದಿನವೂ ಒಬ್ಬರೇ ಸ್ನಾನ ಮಾಡಿ’ ಎಂದು ಹೇಳಬೇಕಿತ್ತು ಎಂದು ತಮಾಷೆ ಮಾಡಿದರು ಸುದೀಪ್. ಅಸಲಿಗೆ ನಡೆದ ವಿಷಯವೆಂದರೆ ಗೆಳೆಯರಾದ ಹನುಮಂತು ಹಾಗೂ ಧನರಾಜ್ ಒಟ್ಟಿಗೆ ಬಾತ್​ರೂಂ ನಲ್ಲಿ ಸ್ನಾನ ಮಾಡಿದ್ದಾರೆ.

ಸುದೀಪ್ ಕಾಲೆಳೆದಾಗ ಈ ಬಗ್ಗೆ ಮಾತನಾಡಿದ ಹನುಮಂತು, ‘ಒಟ್ಟಿಗೆ ಜಳಕ ಮಾಡಿದರೆ ನೀರು ಉಳಿತೈತಿ ಅಂತ ಹಾಗೆ ಮಾಡಿದ್ವಿ’ ಎಂದರು. ‘ಈಜುಕೊಳದಲ್ಲಿ ಹುಡುಗ ಹುಡುಗಿ ಎಲ್ಲರೂ ಒಟ್ಟಿಗೆ ಸ್ನಾನ ಮಾಡ್ತಾರಲ್ಲ, ಹಾಗೆ ನಾವು ಬಾತ್​ರೂಂನಲ್ಲಿ ಒಟ್ಟಿಗೆ ಸ್ನಾನ ಮಾಡಿದೆವು’ ಎಂದರು. ಹನುಮಂತನ ಉತ್ತರ ಕೇಳಿ ಮನೆ ಮಂದಿ ಇನ್ನಷ್ಟು ನಕ್ಕರು. ಒಂದೊಮ್ಮೆ ನಿಮ್ಮಿಬ್ಬರಲ್ಲಿ ಒಬ್ಬರು ಇಲ್ಲ ಎಂದರೆ ಏನು ಮಾಡುತ್ತೀರಿ ಎಂಬ ಸುದೀಪ್ ಪ್ರಶ್ನೆಗೆ, ‘ಯಾರಿಗೆ ನಮ್ಮೊಂದಿಗೆ ಸ್ನಾನ ಮಾಡಲು ಇಷ್ಟವಿರುತ್ತೊ ಅವರೊಟ್ಟಿಗೆ ಸ್ನಾನ ಮಾಡುತ್ತೀವಿ’ ಎಂದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ

ಆ ಬಳಿಕ ತುಸು ಗಂಭೀರವಾದ ಸುದೀಪ್, ‘ನೀವು ತಮಾಷೆಯಿಂದ, ಮುಗ್ಧತೆಯಿಂದ ಹೀಗೆ ಮಾಡಿರಬಹುದು ಆದರೆ ಒಂದೇ ಸಮಯದಲ್ಲಿ ಇಬ್ಬರು ಬಾತ್​ರೂಂನಲ್ಲಿ ಇರುವಂತಿಲ್ಲ ಎಂಬುದು ಬಿಗ್​ಬಾಸ್​ನ ನಿಯಮಗಳಲ್ಲಿ ಒಂದು. ನಿಮ್ಮ ಕ್ಯಾಪ್ಟನ್ ಆದರೂ ಅದನ್ನು ತಡೆಯಬೇಕಿತ್ತು. ಆದರೆ ಅವರು ತಡೆಯಲಿಲ್ಲ. ನಿಮಗೆ ಬೇಡ ಎಂದು ಹೇಳಿದರು ಆದರೆ ನಗುತ್ತಾ ನಿಮ್ಮನ್ನು ಒಟ್ಟಿಗೆ ಸ್ನಾನ ಮಾಡಲು ಬಿಟ್ಟರು. ನಿಮ್ಮ ಮುಗ್ಧತೆ ನಮಗೆ ಇಷ್ಟ ಆಗುತ್ತದೆ ಆದರೆ ನಿಯಮಗಳನ್ನು ಮುರಿಯುವುದು ಬೇಡ’ ಎಂದರು ಸುದೀಪ್.

ನಿನ್ನೆಯ ಎಪಿಸೋಡ್​ನಲ್ಲಿ ಹನುಮಂತು ಹಾಗೂ ಧನರಾಜ್ ಅವರ ವಿಡಿಯೋ ಒಂದನ್ನು ಸಹ ಪ್ಲೇ ಮಾಡಲಾಯ್ತು. ಶೋಭಾ ಶೆಟ್ಟಿ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಾಗ ಹನುಮಂತು ಹಾಗೂ ಧನರಾಜ್ ಶೋಭಾ ಬಗ್ಗೆ ಮಾತನಾಡಿದ ವಿಡಿಯೋ ಅದಾಗಿತ್ತು. ಆಕೆಯ ಮಾತು ಕೇಳಿ ಭಯಕ್ಕೆ ಮೂತ್ರವೇ ಬಂತು ಎಂದು ಹನುಮಂತು ಹೇಳಿದರೆ, ಧನರಾಜ್ ನಾನು ಮೂತ್ರ ಮಾಡಿಕೊಂಡು ಬಿಟ್ಟೆ ಎಂದು ಹೇಳಿರುವ ವಿಡಿಯೋ ಅದಾಗಿತ್ತು. ಇಬ್ಬರ ಮಾತು ಕೇಳಿ ಮನೆಯ ಸದಸ್ಯರು ನಕ್ಕು ಸುಸ್ತಾದರು. ಶೋಭಾ ಶೆಟ್ಟಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Sun, 24 November 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್