ತ್ರಿವಿಕ್ರಮ್ ಮುಖವಾಡ ಬಯಲು ಮಾಡಿದ ಉಗ್ರಂ ಮಂಜು; ಹೆಚ್ಚಿತು ದ್ವೇಷ

ಮೊದಲಿಗೆ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ತ್ರಿವಿಕ್ರಮ್ ಅವರಿಗೆ ಉಗ್ರಂ ಮಂಜು ಸಹಾಯ ಮಾಡಿದ್ದರು. ಆದರೆ ನಂತರದ ವಾರದಲ್ಲಿ ಉಗ್ರಂ ಮಂಜು ಅವರು ಕ್ಯಾಪ್ಟನ್ ಆಗುವ ಅವಕಾಶಕ್ಕೆ ತ್ರಿವಿಕ್ರಮ್ ಕಲ್ಲು ಹಾಕಿದ್ದರು. ನಾಮಿನೇಷನ್​ ಸಂದರ್ಭದಲ್ಲಿ ಈ ಬಗ್ಗೆ ಮಂಜು ಗರಂ ಆಗಿ ಮಾತನಾಡಿದ್ದಾರೆ. ಅಲ್ಲದೇ, ಬೇರೆ ಸ್ಪರ್ಧಿಗಳನ್ನು ತ್ರಿವಿಕ್ರಮ್ ಹೇಗೆ ತಮ್ಮತ್ತ ಸೆಳೆಯುತ್ತಾರೆ ಎಂಬುದನ್ನು ಕೂಡ ಮಂಜು ತಿಳಿಸಿದ್ದಾರೆ.

ತ್ರಿವಿಕ್ರಮ್ ಮುಖವಾಡ ಬಯಲು ಮಾಡಿದ ಉಗ್ರಂ ಮಂಜು; ಹೆಚ್ಚಿತು ದ್ವೇಷ
ಉಗ್ರಂ ಮಂಜು, ತ್ರಿವಿಕ್ರಮ್
Follow us
ಮದನ್​ ಕುಮಾರ್​
|

Updated on: Nov 19, 2024 | 11:01 PM

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಅವರು ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದಾರೆ. ಅವರಿಗೆ ಉಗ್ರಂ ಮಂಜು ಅವರು ನೇರವಾಗಿ ಪೈಪೋಟಿ ನೀಡುತ್ತಿದ್ದಾರೆ. ಈ ವಾರದ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡುವಾಗ ಉಗ್ರಂ ಮಂಜು ಅವರು ಒಂದಷ್ಟು ಕಾರಣಗಳನ್ನು ನೀಡಿದ್ದಾರೆ. ಆ ಮೂಲಕ ತ್ರಿವಿಕ್ರಮ್ ಅವರ ಮುಖವಾಡ ಕಳಚುವ ಪ್ರಯತ್ನವನ್ನು ಉಗ್ರಂ ಮಂಜು ಮಾಡಿದ್ದಾರೆ. ಈ ವೇಳೆ ಇಬ್ಬರೂ ಏರು ಧ್ವನಿಯಲ್ಲಿ ವಾದ ಮಾಡಿಕೊಂಡಿದ್ದಾರೆ.

ಮೊದಲು ಮೋಕ್ಷಿತಾ ಅವರು ಉಗ್ರಂ ಮಂಜು ಜೊತೆ ಚೆನ್ನಾಗಿ ಇದ್ದರು. ಆದರೆ ಮೋಕ್ಷಿತಾ ಅವರನ್ನು ತಮ್ಮತ್ತ ಸೆಳೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ತ್ರಿವಿಕ್ರಮ್ ಅವರು ಒಂದು ಪ್ಲ್ಯಾನ್ ಮಾಡಿದ್ದರು. ‘ನಿಮ್ಮ ಜೊತೆ ನಾನು ಆಟ ಆಡಬೇಕು’ ಎಂದು ಮೋಕ್ಷಿತಾ ಜೊತೆ ಕೈ ಜೋಡಿಸಲು ತ್ರಿವಿಕ್ರಮ್ ಪ್ರಯತ್ನಿಸಿದ್ದರು. ಅದೇ ಸಮಯಕ್ಕೆ ಮೋಕ್ಷಿತಾ ಅವರು ಉಗ್ರಂ ಮಂಜು ಜೊತೆ ಸ್ನೇಹ ಕೆಡಿಸಿಕೊಂಡರು. ಅವರ ಈ ಬದಲಾವಣೆ ಹಿಂದೆ ತ್ರಿವಿಕ್ರಮ್ ಅವರ ಕುತಂತ್ರ ವರ್ಕ್ ಆಗಿದೆ ಎಂಬುದು ಮಂಜು ವಾದ.

ಈ ಮೊದಲು ಕ್ಯಾಪ್ಟೆನ್ಸಿ ಆಟದಲ್ಲಿ ತ್ರಿವಿಕ್ರಮ್ ಅವರಿಗೆ ಉಗ್ರಂ ಮಂಜು ಸಹಾಯ ಮಾಡಿದ್ದರು. ಮುಂದಿನ ಬಾರಿ ಉಗ್ರಂ ಮಂಜುಗೆ ತಾವು ಸಪೋರ್ಟ್ ಮಾಡುವುದಾಗಿ ತ್ರಿವಿಕ್ರಮ್ ಮಾತು ನೀಡಿದ್ದರು. ಆದರೆ ಆ ಮಾತಿಗೆ ತಕ್ಕಂತೆ ತ್ರಿವಿಕ್ರಮ್ ನಡೆದುಕೊಂಡಿಲ್ಲ ಎಂದು ಮಂಜು ವಾದ ಮಾಡಿದ್ದಾರೆ. ಅಲ್ಲದೇ, ತ್ರಿವಿಕ್ರಮ್ ಅವರದ್ದು ಬೇರೆಯವರನ್ನು ತುಳಿದು ಮುಂದೆ ಸಾಗುವ ವ್ಯಕ್ತಿತ್ವ ಎಂದು ಮಂಜು ಖಂಡಿಸಿದ್ದಾರೆ.

ಇದನ್ನೂ ಓದಿ: ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ಉಗ್ರಂ ನಟನ ವಿರುದ್ಧ ತೊಡೆ ತಟ್ಟಿದ ತ್ರಿವಿಕ್ರಮ್

ಎಲ್ಲ ಟಾಸ್ಕ್​ನಲ್ಲಿಯೂ ತ್ರಿವಿಕ್ರಮ್ ಅವರು ಅಗ್ರೆಸಿವ್ ಆಗಿ ಆಡುತ್ತಾರೆ. ಹಾಗಾಗಿ ಅವರನ್ನು ಸ್ಟ್ರಾಂಗ್ ಸ್ಪರ್ಧಿ ಎಂದು ಎಲ್ಲರೂ ಪರಿಗಣಿಸಿದ್ದಾರೆ. ಅವರ ಜೊತೆ ಕೈ ಜೋಡಿಸಬೇಕು ಎಂಬ ಕಾರಣದಿಂದ ಚೈತ್ರಾ ಅವರು ಕಳೆದ ವಾರ ಶಿಶಿರ್ ಜೊತೆ ಜೋಡಿ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದರಿಂದಾಗಿ ಚೈತ್ರಾ ಅವರಿಗೆ ಮುಳುವಾಯಿತು. ತ್ರಿವಿಕ್ರಮ್ ಅವರು ಚೈತ್ರಾ ಬದಲು ಭವ್ಯಾ ಅವರನ್ನು ಆಯ್ಕೆ ಮಾಡಿಕೊಂಡರು. ಭವ್ಯಾ ಕ್ಯಾಪ್ಟನ್ ಆದರು. ಚೈತ್ರಾಗೆ ಸಿಕ್ಕಿದ್ದು ಕಪ್ಪು ಚುಕ್ಕಿ ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ