ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ಉಗ್ರಂ ನಟನ ವಿರುದ್ಧ ತೊಡೆ ತಟ್ಟಿದ ತ್ರಿವಿಕ್ರಮ್

ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ಉಗ್ರಂ ನಟನ ವಿರುದ್ಧ ತೊಡೆ ತಟ್ಟಿದ ತ್ರಿವಿಕ್ರಮ್

ಮದನ್​ ಕುಮಾರ್​
|

Updated on: Nov 18, 2024 | 4:11 PM

ಬಿಗ್ ಬಾಸ್ ಮನೆಯಲ್ಲಿ 50 ದಿನಗಳು ಕಳೆದಿವೆ. ಈಗ ವಾತಾವರಣ ಬದಲಾಗಿದೆ. ಉಗ್ರಂ ಮಂಜು ಜೊತೆ ಇಷ್ಟು ದಿನ ಆಪ್ತವಾಗಿದ್ದ ಮೋಕ್ಷಿತಾ ಅವರು ಈಗ ತಿರುಗಿ ಬಿದ್ದಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಅವರು ಮಂಜು ಬಗ್ಗೆ ಖಾರದ ಮಾತುಗಳನ್ನು ಆಡಿದ್ದಾರೆ. ಅದೇ ರೀತಿ, ತ್ರಿವಿಕ್ರಮ್ ಹಾಗೂ ಮಂಜು ನಡುವೆ ಕೂಡ ಮಾತಿನ ಚಕಮಕಿ ನಡೆದಿದೆ. ಅದರ ಪ್ರೋಮೋ ಇಲ್ಲಿದೆ..

50 ದಿನಗಳು ಕಳೆದ ಬಳಿಕ ಬಿಗ್ ಬಾಸ್ ಮನೆಯ ವಾತಾವರಣ ಬದಲಾಗಿದೆ. ಇಷ್ಟು ದಿನ ಉಗ್ರಂ ಮಂಜು ಜೊತೆ ಆಪ್ತವಾಗಿದ್ದ ಮೋಕ್ಷಿತಾ ಪೈ ಅವರು ಈಗ ತಿರುಗಿ ಬಿದ್ದಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಂಜು ಬಗ್ಗೆ ಮೋಕ್ಷಿತಾ ಅವರು ಖಾರದ ಮಾತುಗಳನ್ನು ಆಡಿದ್ದಾರೆ. ‘ಇನ್ಮುಂದೆ ಅಣ್ಣ ಎಂಬ ಪದವನ್ನು ನನಗೆ ಉಪಯೋಗಿಸಬೇಡಿ’ ಎಂದು ಮಂಜು ಹೇಳಿದ್ದಾರೆ. ಹಾಗೆಯೇ ತ್ರಿವಿಕ್ರಮ್ ಮತ್ತು ಮಂಜು ನಡುವೆಯೂ ಮಾತಿನ ಚಕಮಕಿ ನಡೆದಿದೆ. ಮಂಜು ವಿರುದ್ಧ ತ್ರಿವಿಕ್ರಮ್ ತೊಡೆ ತಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.