ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಪತ್ರಕರ್ತರಿಂದ ಆತನ ರಕ್ಷಣೆ
ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅಬ್ದುಲ್ ಮತ್ತು ಶೇಖ್ ಆ ವ್ಯಕ್ತಿಯೊಂದಿಗೆ ಮನವಿ ಮಾಡುವುದನ್ನು ಮುಂದುವರಿಸಿದಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಬೇರೆ ಪ್ರಯಾಣಿಕರು ಕೂಡ ಆತನನ್ನು ಕೆಳಗಿಳಿಸಲು ಪ್ರಯತ್ನಿಸಿದರು.
ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಭಾನುವಾರ ಗೋದಾವರಿ ನದಿಗೆ ಹಾರಿ ಪ್ರಾಣ ಬಿಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಇಬ್ಬರು ಪತ್ರಕರ್ತರು ಜೀವ ಉಳಿಸಿದ್ದಾರೆ. ಪತ್ರಕರ್ತರಾದ ಮೊಹಮ್ಮದ್ ಅಬ್ದುಲ್ ಘನಿ ಮತ್ತು ಶೇಖ್ ಜಾಕೀರ್ ಅವರು ಸೇತುವೆಯ ಮೇಲೆ ಪ್ರಯಾಣಿಸುವಾಗ ಸೇತುವೆಯ ಕಟ್ಟೆಯ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಗಮನಿಸಿದರು. ತಕ್ಷಣ ಅವರು ಬೈಕ್ ನಿಲ್ಲಿಸಿ ಆತನನ್ನು ಮಾತನಾಡಿಸಿದರು. ಆ ಕೂಡಲೆ ಆ ವ್ಯಕ್ತಿ ಕೆಳಗೆ ಹಾರಲು ಪ್ರಯತ್ನಿಸಿದನು. ಆಗ ಅವರಿಬ್ಬರೂ ಅವನನ್ನು ಉಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos