ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರಕ್ಕೆ ಅನುದಾನ ನೀಡದಿರುವ ಬಗ್ಗೆ ನಾಳೆ ಬಿಜೆಪಿ ಶಾಸಕರ ಸಭೆ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ಎಷ್ಟಾದರೂ ಸಭೆಗಳನ್ನು ಮಾಡಿಕೊಳ್ಳಲಿ, ಬೆಂಗಳೂರು ಎಷ್ಟು ಅಧೋಗತಿ ತಲುಪಿದೆ ಎಂದಿದ್ದಾರೆ. ಎಲ್ಲಿ ಅಧೋಗತಿ ತಲುಪಿದೆ ಅನ್ನೋದನ್ನು ಅವರು ಹೇಳಬೇಕು ಸವಾಲ್ ಹಾಕಿದ್ದಾರೆ.
ಬೆಂಗಳೂರು, (ನವೆಂಬರ್ 18): ಬಿಜೆಪಿಯವರು ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡುತ್ತಿದ್ದಾರೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಆರೋಪ ಬೆನ್ನಲ್ಲೇ ಕಾಂಗ್ರೆಸ್ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಈಗ 100 ಕೋಟಿ ರೂ. ಸ್ಫೋಟಕ ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷ ಬಿಜೆಪಿ ಸಿಡಿದೆದಿದ್ದು, ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ. ಸಾಕ್ಷಿ ಕೊಡಿ ಅಂತ ಸವಾಲು ಹಾಕುತ್ತಿದ್ದಾರೆ.ಇನ್ನು ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಇನ್ನು ಜಯನಗರ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಬಿಜೆಪಿ ಶಾಸಕ ಸಭೆ ಬಗ್ಗೆ ಪ್ರತಿಕ್ರಿಯಿಸಿ , ನೂರು ಸಭೆ ಮಾಡಲಿ. ಮಂತ್ರಿಯಾದ ಮೇಲೆ ಅಧೋಗತಿ ಆಗಿದೆ ಅಂದ್ರಲ್ಲ. ಏನು ಅಧೋಗತಿ ಮೊದಲು ಹೇಳಲಿ. ಬೇರೆ ಕ್ಷೇತ್ರಗಳಿಗೂ ಹಣ ಕೊಟ್ಟಿದ್ದೇವೆ, ಜಯನಗರ ಚಿಕ್ಕ ಕ್ಷೇತ್ರ. ರಾಮಮೂರ್ತಿ ಹೇಳಿದ ಹಾಗೆ ಏನು ಅಧೋಗತಿ ಅಂತಾ ಹೇಳಲಿ ಎಂದು ಸವಾಲು ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Maharashtra Assembly Election: ಮಹಾರಾಷ್ಟ್ರ ಚುನಾವಣಾ ಅಖಾಡಕ್ಕಿಳಿಯಲು ಡಿಸಿಎಂ ಡಿಕೆ ಶಿವಕುಮಾರ್ ಸಜ್ಜು