ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ವಿವಿಧ ಜಿಲ್ಲೆಗಳಿಂದ ರಜೆ ಮುಗಿಸಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇದರಿಂದ ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್‌ಜಾಮ್ ಉಂಟಾಗಿದೆ.
ಬೆಂಗಳೂರು, (ನವೆಂಬರ್ 18): ಶನಿವಾರ, ಭಾನುವಾರ ಹಾಗೂ ಇಂದು ಸೋಮವಾರ ಕನಕದಾಸ ಜಯಂತಿ ರಜೆ ಮುಗಿಸಿಕೊಂಡು ಜನ ಇದೀಗ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ನಾಳೆಯಿಂದ (ನವೆಂಬರ್ 19) ಸರ್ಕಾರಿ ಕಚೇರಿ, ಐಟಿ ಬಿಟಿ ಕಂಪನಿಗಳು ವರ್ಕಿಂಗ್ ಇರುವುದರಿಂದ ಊರಿಗೆ ಹೋಗಿದ್ದವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
Latest Videos