AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರಂ ಮಂಜು, ಧರ್ಮ ಇಲ್ಲದಿರುವಾಗಲೇ ರಿಲೀಸ್ ಆಯ್ತು ‘ಟೆನಂಟ್’ ಟ್ರೇಲರ್

ಲಾಕ್​ಡೌನ್​ ಸಮಯದ ಕಥೆಯನ್ನು ‘ಟೆನಂಟ್’ ಸಿನಿಮಾದಲ್ಲಿ ಹೇಳಲಾಗಿದೆ. 5 ಪ್ರಮುಖ ಪಾತ್ರಗಳು ಇರುವ ಈ ಚಿತ್ರಕ್ಕೆ ಹೊಸ ನಿರ್ದೇಶಕ ಶ್ರೀಧರ್ ಅವರು ಆ್ಯಕ್ಷನ್​-ಕಟ್ ಹೇಳಿದ್ದಾರೆ. ಗಿರೀಶ್ ಹೊತೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಜ್ವಲ್ ಅವರ ಸಂಕಲನ, ಮನೋಹರ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ನ.22ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ಉಗ್ರಂ ಮಂಜು, ಧರ್ಮ ಇಲ್ಲದಿರುವಾಗಲೇ ರಿಲೀಸ್ ಆಯ್ತು ‘ಟೆನಂಟ್’ ಟ್ರೇಲರ್
‘ಟೆನಂಟ್​’ ಸಿನಿಮಾ ತಂಡ
ಮದನ್​ ಕುಮಾರ್​
|

Updated on: Nov 06, 2024 | 8:16 PM

Share

ಕೆಲವೇ ದಿನಗಳ ಹಿಂದೆ ಟೀಸರ್​ ಮೂಲಕ ‘ಟೆನಂಟ್’ ಸಿನಿಮಾ ಸದ್ದು ಮಾಡಿತ್ತು. ಈಗ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆ ಆಗಿದೆ. ಶೂಟಿಂಗ್ ಮುಗಿದು, ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾಗೆ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಬಿಗ್ ಬಾಸ್​ನಲ್ಲಿ ಇರುವ ಧರ್ಮ ಕೀರ್ತಿರಾಜ್, ಉಗ್ರಂ ಮಂಜು ಅವರು ‘ಟೆನಂಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ತಿಲಕ್, ಸೋನು ಗೌಡ, ರಾಕೇಶ್ ಮಯ್ಯ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಟೀಸರ್​ನಲ್ಲಿ ಎಲ್ಲರ ಪಾತ್ರಗಳು ಹೈಲೈಟ್ ಆಗಿವೆ. ಅಲ್ಲದೇ ಕಥೆಯ ಬಗ್ಗೆಯೂ ಸುಳಿವು ಬಿಟ್ಟುಕೊಡಲಾಗಿದೆ.

‘ಟೆನಂಟ್’ ಚಿತ್ರಕ್ಕೆ ಶ್ರೀಧರ್ ಶಾಸ್ತ್ರಿ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಆದರೆ ಓರ್ವ ಅನುಭವಿ ನಿರ್ದೇಶಕನ ರೀತಿ ಅವರು ಕೆಲಸ ಮಾಡಿದ್ದಾರೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗುತ್ತಿದೆ. ‘ಮಾಸ್ಟರ್ ಚಾಯ್ಸ್ ಕ್ರಿಯೇಶನ್ಸ್​’ ಮೂಲಕ ನಾಗರಾಜ್ ಟಿ. ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕ್ರೈಂ ಥ್ರಿಲ್ಲರ್​ ಕಹಾನಿ ಇದೆ. ನವೆಂಬರ್​ 22ರಂದು ‘ಟೆನಂಟ್’ ಬಿಡುಗಡೆ ಆಗಲಿದೆ.

ನಟ ಧರ್ಮ ಕೀರ್ತಿರಾಜ್ ಅವರಿಗೆ ‘ಟೆನಂಟ್’ ಸಿನಿಮಾದಲ್ಲಿ ಡಿಫರೆಂಟ್ ಆದಂತಹ ಪಾತ್ರವಿದೆ. ಇದುವರೆಗೂ ಮಾಡಿರದಂತಹ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ, ರಾಕೇಶ್ ಮಯ್ಯ, ತಿಲಕ್ ರಾಜ್, ಸೋನು ಗೌಡ ಕೂಡ ಭಿನ್ನವಾದ ಪಾತ್ರಗಳನ್ನು ಮಾಡಿದ್ದಾರೆ. ಟ್ರೇಲರ್​ನಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಲು ಇದು ಸಹ ಕಾರಣ ಆಗಿದೆ.

ತಿಲಕ್ ಅವರು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ‘ನನ್ನ ಈವರೆಗಿನ ವೃತ್ತಿಬದುಕಿನಲ್ಲೇ ಇಂಥ ಪಾತ್ರ ಮಾಡಿಲ್ಲ. ಇದು ಖಂಡಿತವಾಗಿ ನನ್ನ ಜೀವನದ ಹೈಲೆಟ್ ಸಿನಿಮಾ ಆಗಲಿದೆ’ ಎಂದು ತಿಲಕ್ ಅವರು ಹೇಳಿದ್ದಾರೆ. ‘ಇದು ಒಂದೇ ಮನೆಯಲ್ಲಿ ನಡೆಯುವ ಕಥೆ. ಹಿಡಿದಿಟ್ಟುಕೊಳ್ಳುವಂತಹ ಸಿನಿಮಾ ಇದು’ ಎಂದು ರಾಕೇಶ್ ಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ಎದುರು ನಿಂತು ದರ್ಶನ್ ಬಗ್ಗೆ ಮಾತಾಡಿದ ಧರ್ಮ ಕೀರ್ತಿರಾಜ್; ಕಿಚ್ಚನ ಪ್ರತಿಕ್ರಿಯೆ?

ಸೋನು ಗೌಡ ಅವರು ಆರಂಭದಲ್ಲಿ ಈ ಪಾತ್ರ ಮಾಡಲು ಹಿಂಜರಿಕೆ ಮಾಡಿಕೊಂಡಿದ್ದರಂತೆ. ‘ಕಥೆ ಕೇಳಿದಾಗ ಈ ಪಾತ್ರವನ್ನು ಮಾಡಬೇಕಾ ಅಥವಾ ಬೇಡವಾ ಎಂಬ ಗೊಂದಲದಲ್ಲಿದೆ. ಯಾಕೆಂದರೆ ನಾನು ಯಾವತ್ತು ಈ ರೀತಿಯ ಪಾತ್ರ ಮಾಡಿರಲಿಲ್ಲ. ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಇತ್ತು. ಕಥೆ ಇಷ್ಟವಾದ್ದರಿಂದ ಒಪ್ಪಿಕೊಂಡೆ’ ಎಂದು ಸೋನು ಗೌಡ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.