ಸುದೀಪ್ ಎದುರು ನಿಂತು ದರ್ಶನ್ ಬಗ್ಗೆ ಮಾತಾಡಿದ ಧರ್ಮ ಕೀರ್ತಿರಾಜ್; ಕಿಚ್ಚನ ಪ್ರತಿಕ್ರಿಯೆ?

ಹಲವು ಸಿನಿಮಾಗಳಲ್ಲಿ ನಟಿಸಿರುವ ಧರ್ಮ ಕೀರ್ತಿರಾಜ್​ ಅವರು ಈಗ ಬಿಗ್​ ಬಾಸ್​ ಸ್ಪರ್ಧಿಯಾಗಿದ್ದಾರೆ. ಕಿಚ್ಚ ಸುದೀಪ್​ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮೊದಲ ಸಂಚಿಕೆಯಲ್ಲಿ ಸುದೀಪ್​ ಎದುರಲ್ಲಿ ಧರ್ಮ ಅವರು ದರ್ಶನ್ ಬಗ್ಗೆ ಮಾತನಾಡಿದರು. ದರ್ಶನ್​ ನೀಡಿದ ಅವಕಾಶವನ್ನು ಧರ್ಮ ಮೆಲುಕು ಹಾಕಿದರು. ಆ ಬಗ್ಗೆ ಇಲ್ಲಿದೆ ವಿವರ..

ಸುದೀಪ್ ಎದುರು ನಿಂತು ದರ್ಶನ್ ಬಗ್ಗೆ ಮಾತಾಡಿದ ಧರ್ಮ ಕೀರ್ತಿರಾಜ್; ಕಿಚ್ಚನ ಪ್ರತಿಕ್ರಿಯೆ?
ದರ್ಶನ್​, ಧರ್ಮ ಕೀರ್ತಿರಾಜ್​, ಕಿಚ್ಚ ಸುದೀಪ್​
Follow us
|

Updated on: Sep 30, 2024 | 5:03 PM

ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ದರ್ಶನ್ ಮತ್ತು ಸುದೀಪ್​ ಅವರು ಕಾರಣಾಂತರಗಳಿಂದ ದೂರಾದರು. ಅವರಿಬ್ಬರ ಸ್ನೇಹಕ್ಕೆ ಪೂರ್ಣವಿರಾಮ ಬಿದ್ದು ಹಲವು ವರ್ಷಗಳು ಕಳೆದಿವೆ. ಮೊದಮೊದಲು ದರ್ಶನ್​ ಬಗೆಗಿನ ಪ್ರಶ್ನೆಗಳಿಗೆ ಸುದೀಪ್​ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಪ್ರತಿಕ್ರಿಯಿಸುವುದು ಕಡಿಮೆ ಮಾಡಿದರು. ಈಗ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋ ನಡೆಸಿಕೊಡುತ್ತಿದ್ದಾರೆ. ಆ ವೇದಿಕೆಯಲ್ಲಿ ಅವರ ಎದುರು ನಿಂತು ಧರ್ಮ ಕೀರ್ತಿರಾಜ್​ ಅವರು ದರ್ಶನ್​ ಬಗ್ಗೆ ಮಾತನಾಡಿದ್ದು ವಿಶೇಷ.

ಧರ್ಮ ಕೀರ್ತಿರಾಜ್​ ಅವರು 6ನೇ ಸ್ಪರ್ಧಿಯಾಗಿ ಬಿಗ್​ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ದೊಡ್ಮನೆಯೊಳಗೆ ಹೋಗುವುದಕ್ಕೂ ಮುನ್ನ ಅವರನ್ನು ಸುದೀಪ್​ ಮಾತನಾಡಿಸಿದರು. ಆಗ ದರ್ಶನ್​ ಬಗ್ಗೆ ಪ್ರಸ್ತಾಪ ಆಯಿತು. ಧರ್ಮ ಕೀರ್ತಿರಾಜ್​ ಮೊದಲು ನಟಿಸಿದ್ದು ‘ನವಗ್ರಹ’ ಸಿನಿಮಾದಲ್ಲಿ. ದರ್ಶನ್​ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾವನ್ನು ಮೀನಾ ತೂಗುದೀಪ ಶ್ರೀನಿವಾಸ್​ ನಿರ್ಮಾಣ ಮಾಡಿದ್ದರು. ಅಂದು ಅವಕಾಶ ನೀಡಿದ್ದನ್ನು ಧರ್ಮ ಕೀರ್ತಿರಾಜ್ ನೆನಪಿಸಿಕೊಂಡರು.

‘ನಮ್ಮ ತಂದೆ 40 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಆಶೀರ್ವಾದ ಮತ್ತು ಜನರ ಆಶೀರ್ವಾದ ಇದೆ. ನನ್ನ ಮೊದಲ ಸಿನಿಮಾ ‘ನವಗ್ರಹ’. ತೂಗುದೀಪ ಸಂಸ್ಥೆಯಿಂದ ನಾನು ಬಂದಿದ್ದು. ದರ್ಶನ್​ ಸರ್ ಮತ್ತು ದಿನಕರ್​ ಸರ್​ ನನಗೆ ಅವಕಾಶ ನೀಡಿದ್ದು. ‘ಕಣ್ ಕಣ್ಣ ಸಲಿಗೆ..’ ಹಾಡು ನನ್ನನ್ನು ಈವರೆಗೂ ಕಾಪಾಡಿಕೊಂಡು ಬಂದಿದೆ’ ಎಂದು ಧರ್ಮ ಕೀರ್ತಿರಾಜ್​ ಹೇಳಿದರು. ಈ ಮಾತಿಗೆ ಕಿಚ್ಚ ಸುದೀಪ್​ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ; ದಾಸನಿಗೆ ಮತ್ತೆ ನಿರಾಸೆ

ಈ ಬಾರಿ ಬಿಗ್​ ಬಾಸ್​ ಮನೆಯನ್ನು ಸ್ವರ್ಗ ಮತ್ತು ನರಕ ಎಂದು ಎರಡು ಭಾಗ ಮಾಡಲಾಗಿದೆ. ಸ್ವರ್ಗದಲ್ಲಿ ಒಂದಷ್ಟು ಅನುಕೂಲಗಳು ಇರಲಿವೆ. ಹಾಗೆಯೇ, ನರಕದಲ್ಲಿ ಎಲ್ಲದಕ್ಕೂ ಕಷ್ಟಪಡಬೇಕಿದೆ. ಧರ್ಮ ಕೀರ್ತಿರಾಜ್​ ಅವರು ಸ್ವರ್ಗಕ್ಕೆ ಎಂಟ್ರಿ ಪಡೆದಿದ್ದಾರೆ. ಅವರ ಜೊತೆ ಬಂದ ನಟಿ ಅನುಷಾ ರೈ ಅವರು ನರಕಕ್ಕೆ ಹೋಗಿದ್ದಾರೆ. ಒಟ್ಟು 17 ಸ್ಪರ್ಧಿಗಳು ಈ ಬಾರಿ ಬಿಗ್​ ಬಾಸ್​ ಮನೆಯನ್ನು ಪ್ರವೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು