ಕನ್ನಡದ ಖಡಕ್ ವಿಲನ್ ಉಗ್ರಂ ಮಂಜು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಸ್ಪರ್ಧಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ಆಗಿದೆ. ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಬರಮಾಡಿಕೊಂಡಿದ್ದಾರೆ. ಕನ್ನಡದ ಖ್ಯಾತ ನಟ ಉಗ್ರಂ ಮಂಜು ಅವರು ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಆ ಮೂಲಕ ಅವರು ಪ್ರೇಕ್ಷಕರಿಗೆ ತಮ್ಮ ಇನ್ನೊಂದು ಮುಖ ತೋರಿಸಲು ಬಂದಿದ್ದಾರೆ. ಸ್ವರ್ಗ-ನರಕದ ಕಾನ್ಸೆಪ್ಟ್ನಲ್ಲಿ ಶೋ ಆರಂಭ ಆಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಸಿನಿಮಾದಿಂದ ಅನೇಕರಿಗೆ ಖ್ಯಾತಿ ಸಿಕ್ಕಿತು. ಅಂಥವರ ಪೈಕಿ ಮಂಜು ಕೂಡ ಇದ್ದಾರೆ. ‘ಉಗ್ರಂ’ ಸಿನಿಮಾದಲ್ಲಿ ನೆಗೆಟಿವ್ ಪಾತ್ರವನ್ನು ಮಂಜು ಮಾಡಿದರು. ಆ ಬಳಿಕ ಅವರ ಹೆಸರಿನ ಜೊತೆ ‘ಉಗ್ರಂ’ ಎಂಬುದು ಕೂಡ ಸೇರಿಕೊಂಡಿತು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಬಹುತೇಕ ಎಲ್ಲದರಲ್ಲೂ ವಿಲನ್ ಪಾತ್ರಗಳನ್ನೇ ಮಾಡಿ ಸೈ ಎನಿಸಿಕೊಂಡರು. ಗಮನಾರ್ಹ ಪಾತ್ರಗಳ ಮೂಲಕ ಮಂಜು ಅವರು ಪ್ರೇಕ್ಷಕರಿಗೆ ಹತ್ತಿರ ಆಗಿದ್ದಾರೆ. ಈಗ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಎಂಬುದು ಹೊಸ ಜರ್ನಿ.
‘ಕಿಡಿ’, ‘ಮಂಜರಿ’, ‘ರುಸ್ತುಂ’, ‘ಭರಾಟೆ’, ‘ಹೀರೋ’, ‘ಎಲ್ಲೋ ಬೋರ್ಡ್’, ‘ತೂತು ಮಡಿಕೆ’, ‘ಬೈಪಾಸ್ ರೋಡ್’, ‘ಕಬ್ಜಾ’, ‘ಅಗ್ರಸೇನಾ’, ‘ಮಾರಕಾಸ್ತ್ರ’, ‘ಕೈವ’, ‘ಮೂರನೇ ಕೃಷ್ಣಪ್ಪ’ ಮುಂತಾದ ಸಿನಿಮಾಗಳಲ್ಲಿ ಉಗ್ರಂ ಮಂಜು ಅವರು ನಟಿಸಿದ್ದಾರೆ. ತಮ್ಮದ ಆದ ಮ್ಯಾನರಿಸಂ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಉಗ್ರಂ ಮಂಜು ಅವರು ಸಿನಿಮಾದಲ್ಲಿ ಹೇಗೆ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ರಿಯಲ್ ಲೈಫ್ನಲ್ಲಿ ಅವರು ಯಾವ ರೀತಿ ಇದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅವರ ನಿಜವಾದ ವ್ಯಕ್ತಿತ್ವ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಿಂದ ಗೊತ್ತಾಗಲಿದೆ. ಸಿನಿಮಾಗಳ ಕೆಲಸಗಳನ್ನು ಸದ್ಯಕ್ಕೆ ಬದಿಗಿಟ್ಟು ಮಂಜು ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್ ಬಾಸ್ಗೆ ಬಂದ ನಟಿ ಹಂಸಾ
ಚೈತ್ರಾ ಕುಂದಾಪುರ, ಧನರಾಜ್, ಭವ್ಯಾ ಗೌಡ, ಗೌತಮಿ ಜಾಧವ್, ಲಾಯರ್ ಜಗದೀಶ್, ಗೋಲ್ಡ್ ಸುರೇಶ್, ಯಮುನಾ ಶ್ರೀನಿಧಿ, ಅನುಷಾ ರೈ, ಧರ್ಮ ಕೀರ್ತಿರಾಜ್ ಮುಂತಾದ ಸ್ಪರ್ಧಿಗಳು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬಂದಿದ್ದಾರೆ. ಈ ಬಾರಿ ಮನೆಯನ್ನು ಸ್ಪರ್ಗ ಮತ್ತು ನರಕ ಎಂದು ಎರಡು ಭಾಗ ಮಾಡಲಾಗಿದೆ. ಹೊಸ ರೀತಿಯಲ್ಲಿ ಈ ಸೀಸನ್ನ ಆಟವನ್ನು ವಿನ್ಯಾಸ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.