AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್​ ಬಾಸ್​ಗೆ ಬಂದ ನಟಿ ಹಂಸಾ

ಖ್ಯಾತ ನಟಿ ಹಂಸಾ ಅವರು ಭರ್ಜರಿಯಾಗಿ ಡ್ಯಾನ್ಸ್​ ಮಾಡುತ್ತಾ ಬಿಗ್​ ಬಾಸ್​ ವೇದಿಕೆಗೆ ಬಂದರು. ಆದರೆ ಅವರು ಹೆಚ್ಚು ದಿನ ದೊಡ್ಮನೆ ಒಳಗೆ ಇರಲ್ಲ ಅಂತ ಮಾನಸಾ ಹೇಳಿದರು. ಮಾನಸಾ ಅವರ ಮಾತನ್ನು ತಪ್ಪೆಂದು ಸಾಬೀತು ಮಾಡುತ್ತಾರಾ ಹಂಸಾ? ಕಾದು ನೋಡಬೇಕಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋಗೆ ಕಿಚ್ಚ ಸುದೀಪ್​ ಅದ್ದೂರಿ ಚಾಲನೆ ನೀಡಿದ್ದಾರೆ.

ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್​ ಬಾಸ್​ಗೆ ಬಂದ ನಟಿ ಹಂಸಾ
ಮಾನಸಾ, ಹಂಸಾ
ಮದನ್​ ಕುಮಾರ್​
|

Updated on: Sep 29, 2024 | 10:14 PM

Share

ಕಳೆದ ಸೀಸನ್​ನಲ್ಲಿ ತುಕಾಲಿ ಸಂತು ಅವರು ಎಲ್ಲರನ್ನೂ ನಗಿಸಿದ್ದರು. ಈ ಸೀಸನ್​ನಲ್ಲಿ ಅವರ ಪತ್ನಿ ಮಾನಸಾ ಕೂಡ ಬಿಗ್​ ಬಾಸ್​ಗೆ ಕಾಲಿಟ್ಟಿದ್ದಾರೆ. ಅವರ ಜೊತೆ ಆರಂಭದಲ್ಲೇ ಪೈಪೋಟಿ ನೀಡುತ್ತಾ ಬಂದವರು ನಟಿ ಹಂಸಾ. ಹೌದು, ಕಿರುತೆರೆಯ ಖ್ಯಾತ ನಟಿ ಹಂಸಾ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಅವರ ಜೊತೆ ವೇದಿಕೆ ಹಂಚಿಕೊಂಡವರು ಮಾನಸಾ. ಇಬ್ಬರಲ್ಲಿ ಯಾರು ಸ್ವರ್ಗಕ್ಕೆ ಹೋಗಬೇಕು, ಯಾರು ನರಕಕ್ಕೆ ಹೋಗಬೇಕು ಎಂಬ ಪ್ರಶ್ನೆ ಬಂತು. ಅಂತಿಮವಾಗಿ ಹಂಸಾ ಅವರು ಸ್ವರ್ಗಕ್ಕೆ ಹೋದರು. ಮಾನಸಾ ಅವರು ನರಕದ ಪಾಲಾದರು.

ಹಲವು ವರ್ಷಗಳಿಂದ ಹಂಸಾ ಅವರು ಬಣ್ಣದ ಲೋಕದಲ್ಲಿ ಇದ್ದಾರೆ. ಕನ್ನಡ ಸೀರಿಯಲ್ ನೋಡುವ ಎಲ್ಲರಿಗೂ ಹಂಸಾ ಅವರು ಚಿರಪರಿಚಿತರು. ಅನೇಕ ಸೀರಿಯಲ್​ಗಳಲ್ಲಿ ಅವರು ನೆಗೆಟಿವ್​ ಶೇಡ್​ನ ಪಾತ್ರವನ್ನು ಮಾಡಿ ಗಮನ ಸೆಳೆದಿದ್ದಾರೆ. ಧಾರಾವಾಹಿಯಲ್ಲಿ ವಿಲನ್​ ಆಗಿ ಕಾಣಿಸಿಕೊಳ್ಳುವ ಹಂಸಾ ಅವರು ರಿಯಲ್ ಲೈಫ್​ನಲ್ಲಿ ಹೇಗಿರುತ್ತಾರೆ ಎಂಬ ಕೌತುಕ ಎಲ್ಲರಿಗೂ ಇದೆ. ಅದಕ್ಕಾಗಿ ಅವರನ್ನು ಬಿಗ್​ ಬಾಸ್​ನಲ್ಲಿ ನೋಡಲು ವೀಕ್ಷಕರು ಕಾದಿದ್ದಾರೆ.

ಮೊದಲು ಹಂಸಾ ಅವರು ವೇದಿಕೆಗೆ ಬಂದಾಗ ಅವರ ಬಗ್ಗೆ ಮಾನಸಾ ಬಳಿ ಅಭಿಪ್ರಾಯ ಕೇಳಲಾಯಿತು. ‘ಇವರು ಹೆಚ್ಚು ದಿನ ಪೈಪೋಟಿ ನೀಡಲ್ಲ. ಟಫ್​ ಸ್ಪರ್ಧಿ ಅಂತ ಅನಿಸುತ್ತಿಲ್ಲ. ಕೆಲವೇ ವಾರಗಳಲ್ಲಿ ಹೊರಗೆ ಬರುತ್ತಾರೆ’ ಎಂದು ಮಾನಸಾ ಹೇಳಿದರು. ಅದರಿಂದ ಹಂಸಾ ಅವರಿಗೆ ಬೇಸರವಾದಂತೆ ಕಾಣಿಸಿತು. ಬಳಿಕ ಮಾನಸಾ ಬಗ್ಗೆ ಹಂಸಾ ಅವರ ಅಭಿಪ್ರಾಯವನ್ನು ಕೇಳಲಾಯಿತು. ‘ಮಾನಸಾ ಮನರಂಜನೆ ನೀಡುತ್ತಾರೆ. ಆದರೆ ಹೆಚ್ಚು ದಿನ ಶೋನಲ್ಲಿ ಇರಲ್ಲ’ ಎಂದರು ಹಂಸಾ.

ಇದನ್ನೂ ಓದಿ: ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಅಖಾಡಕ್ಕೆ ಬಂದ ಮಧ್ಯಮ ವರ್ಗದ ಹುಡುಗ ತ್ರಿವಿಕ್ರಮ್

ಮಾನಸಾ ಪ್ರಕಾರ ಹಂಸಾ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಇರುವುದು ಕೆಲವೇ ವಾರಗಳು ಮಾತ್ರ. ಆದರೆ ಮಾನಸಾ ಅವರ ಅಭಿಪ್ರಾಯವನ್ನು ತಪ್ಪು ಎಂದು ಸಾಬೀತು ಮಾಡುವುದಾಗಿ ಸವಾಲು ಸ್ವೀಕರಿಸಿ ಹಂಸಾ ಅವರು ಬಿಗ್​ ಬಾಸ್​ ಮನೆಯ ಒಳಗೆ ಕಾಲಿಟ್ಟಿದ್ದಾರೆ. ಅವರು ಎಷ್ಟು ವಾರ ದೊಡ್ಮನೆಯೊಳಗೆ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.

‘20 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಯಾವುತ್ತೂ ಸೆಲೆಬ್ರಿಟಿ ಫೀಲ್​ ಬಂದಿರಲಿಲ್ಲ. ಆದರೆ ಬಿಗ್​ ಬಾಸ್​ಗೆ ಸೆಲೆಕ್ಟ್​ ಆದ ದಿನದಿಂದ ಆ ರೀತಿ ಫೀಲ್​ ಆಗುತ್ತಿದೆ. ನೆಗೆಟಿವ್​ ಪಾತ್ರ ಹೆಚ್ಚಾಗಿ ಮಾಡಿದ್ದೇನೆ. ಆದರೆ ರಿಯಲ್ ಲೈಫ್​ನಲ್ಲಿ ಆ ರೀತಿ ಹಿಂದಿನಿಂದ ಕುತಂತ್ರ ಮಾಡಲ್ಲ. ನೇರರಾದ ಬೋಲ್ಡ್​ ವ್ಯಕ್ತಿತ್ವ ನನ್ನದು’ ಎಂದು ಹಂಸಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.