ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ

ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮಕ್ಕೆ 2ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಜೊತೆ ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ನೇರವಾಗಿ ಸ್ಪರ್ಗಕ್ಕೆ ಎಂಟ್ರಿ ಸಿಕ್ಕಿದೆ. ಯಮುನಾ ಶ್ರೀನಿಧಿ ಅವರ ಬಗ್ಗೆ ಇಲ್ಲಿದೆ ಮಾಹಿತಿ...

ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ
ಯಮುನಾ ಶ್ರೀನಿಧಿ
Follow us
|

Updated on: Sep 29, 2024 | 6:42 PM

ಬಣ್ಣದ ಲೋಕದಲ್ಲಿ ಯಮುನಾ ಶ್ರೀನಿಧಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ, ಕಿರುತೆರೆ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಅವರು ಭರತನಾಟ್ಯ ಡ್ಯಾನ್ಸರ್​ ಕೂಡ ಹೌದು. ಭರತನಾಟ್ಯದಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಅನೇಕರಿಗೆ ಭರತನಾಟ್ಯವನ್ನು ಕಲಿಸಿದ್ದಾರೆ. ‘ಅಶ್ವಿನಿ ನಕ್ಷತ್ರ’, ‘ಅಮೃತ ವರ್ಷಿಣಿ’, ‘ತ್ರಿವೇಣಿ ಸಂಗಮ’, ‘ಕಮಲಿ’, ‘ಮನಸಾರೆ’ ಮುಂತಾದ ಸೀರಿಯಲ್​ಗಳಲ್ಲಿ ಯಮುನಾ ಶ್ರೀನಿಧಿ ಅವರು ನಟಿಸಿದ್ದಾರೆ. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಅವರು 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.

‘ಕಳೆದ 10 ವರ್ಷಗಳಿಂದ ಜೀವನದಲ್ಲಿ ಒಂದು ಜಡತ್ವ ಹಿಡಿದಿದೆ. ಏನೂ ಚಾಲೆಂಜಿಂಗ್​ ಆಗಿ ಮಾಡಿಲ್ಲ. ಅದಕ್ಕಾಗಿ ಬಿಗ್​ ಬಾಸ್​ಗೆ ಬಂದಿದ್ದೇನೆ. ಮಗಳು ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಯಮುನಾ ಶ್ರೀನಿಧಿ ಅವರು ಹೇಳಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಅವರ ಜೊತೆ ಬಿಗ್​ ಬಾಸ್​ ವೇದಿಕೆಗೆ ಬಂದರು. ‘ನನ್ನ ವಯಸ್ಸನ್ನು ನೋಡಿದರೆ, ಇಷ್ಟು ವರ್ಷಗಳ ಅನುಭವ ಇದೆ. ನನಗೆ ತಾಳ್ಮೆ ಕೂಡ ಇರುತ್ತದೆ. ಮೊದಲು ನಾನು ಶಾರ್ಟ್​ಪೆಂಟರ್​ ವ್ಯಕ್ತಿ ಆಗಿದ್ದೆ. ನನಗೆ ಒಸಿಡಿ ಇದೆ’ ಎಂದು ತಮ್ಮನ್ನು ತಾವು ಯಮುನಾ ಪರಿಚಯಿಸಿಕೊಂಡರು.

ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ಅವರು ಪರಸ್ಪರ ಸ್ಪರ್ಧಿಗಳಾಗಿ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದರು. ಯಾರು ಸ್ಪರ್ಗಕ್ಕೆ ಹೋಗುತ್ತಾರೆ? ಯಾರು ನರಕಕ್ಕೆ ಹೋಗುತ್ತಾರೆ ಎಂಬ ಪ್ರಶ್ನೆ ಕೇಳಲಾಯಿತು. ‘ನನಗೆ ನರಕಕ್ಕೆ ಹೋಗೋಕೆ ಇಷ್ಟ. ಯಾಕೆಂದರೆ, ನಾನು ಕಂಫರ್ಟ್​ ಝೋನ್​ನಿಂದ ಹೊರಗೆ ಬರಬೇಕು’ ಎಂದರು ಯಮುನಾ ಶ್ರೀನಿಧಿ. ವೇದಿಕೆಯಲ್ಲಿ ಸುದೀಪ್​ ಅವರು ಭವ್ಯಾ ಮತ್ತು ಯಮುನಾಗೆ ಒಂದು ವಿಶೇಷ ಅವಕಾಶ ನೀಡಿದರು. ಮೊದಲು ದೊಡ್ಮನೆಗೆ ಕಾಲಿಡುತ್ತಿರುವ ಈ ಇಬ್ಬರು ಸ್ಪರ್ಧಿಗಳಿಗೆ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ನೀಡಲಾಯಿತು.

ಇದನ್ನೂ ಓದಿ: BBK 11: ಮೊದಲ ಎಪಿಸೋಡ್​ಗೆ ಸುದೀಪ್​ ಲುಕ್ ಜತೆ ಸ್ವರ್ಗ-ನರಕದ ಝಲಕ್​ ಇಲ್ಲಿದೆ..

ಮುಂಬರುವ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಕಳಿಸಬೇಕಾ ಅಥವಾ ನರಕಕ್ಕೆ ಕಳಿಸಬೇಕ ಎಂಬ ಅಧಿಕಾರವನ್ನು ಕೂಡ ಯಮುನಾ ಮತ್ತು ಭವ್ಯಾ ಗೌಡ ಅವರಿಗೆ ಬಿಗ್ ಬಾಸ್​ ನೀಡಿದರು. ಹಾಗಾಗಿ ನೇರವಾಗಿ ಅವರನ್ನು ಕನ್​ಫೆಷನ್​ ರೂಮ್​ಗೆ ಕಳಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.