ನಾನು ಸುಂದರವಾಗಿದ್ದೀನಿ ಹಾಗಾಗಿ ಸ್ವರ್ಗ ಬೇಕು ಎಂದ ಸ್ಪರ್ಧಿ; ಸಿಕ್ಕಿದ್ದೇನು?
ಸೋಶಿಯಲ್ ಮೀಡಿಯಾದಲ್ಲಿ ಅನುಷಾ ರೈ ದೊಡ್ಡ ಮಟ್ಟದ ಹಿಂಬಾಲಕರನ್ನು ಪಡೆದಿದ್ದಾರೆ. ಅವರು ಆಗಾಗ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಬಿಗ್ ಬಾಸ್ಗೆ ಕಾಲಿಟ್ಟಿರೋದ್ರಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಪ್ರತಿವರ್ಷದಂತೆ ಈ ಬಾರಿಯೂ ಬಿಗ್ ಬಾಸ್ಗೆ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲಾಗಿದೆ. ಕಿರುತೆರೆ ಕಲಾವಿದರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ. ಇದರ ಜೊತೆಗೆ ಕ್ರಿಕೆಟರ್, ವಕೀಲರು ಕೂಡ ದೊಡ್ಮನೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ದೊಡ್ಮನೆಗೆ ಅನುಷಾ ರೈ ಕೂಡ ಬಂದಿದ್ದಾರೆ. ಅವರು ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
ಅನುಷಾ ರೈ ಅವರು ತುಮಕೂರಿನವರು. ಅವರು ಬೆಳೆದಿದ್ದು ಹಳ್ಳಿಯಲ್ಲಿ. ಅವರು ಆರಂಭದಲ್ಲಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ದೊಡ್ಡ ಪರದೆಗೆ ಕಾಲಿಟ್ಟರು. ‘ಧೈರ್ಯಂ ಸರ್ವತ್ರ ಸಾಧನಂ’, ‘ಬಿಎಂಡಬ್ಲ್ಯೂ’, ‘ಅಬ್ಬಬ್ಬಾ’, ‘ಖಡಕ್’, ‘ರೈಡರ್’, ‘ದಮಯಂತಿ’ ಮೊದಲಾದ ಸಿನಿಮಾಗಳಲ್ಲಿ ಅವರು ಸಣ್ಣ-ಪುಟ್ಟ ಪಾತ್ರ ಮಾಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
‘ಎಗ್ಸೈಟೆಡ್ ಆಗಿದೀನಿ. ಸ್ವರ್ಗ-ನರಕ ಎಕ್ಸ್ಪೀರಿಯನ್ಸ್ ಮಾಡಬೇಕು. ಸ್ವರ್ಗ ಸುಂದರವಾಗಿರುತ್ತದೆ, ನಾನು ಕೂಡ ಸುಂದರವಾಗಿದ್ದೀನಿ. ಹೀಗಾಗಿ, ಸ್ವರ್ಗ ಸೇರಬೇಕು’ ಎಂದರು ಅವರು. ಆದರೆ, ಅವರಿಗೆ ಸಿಕ್ಕಿದ್ದು ಮಾತ್ರ ನರಕ. ‘ನಾನು ಹಳ್ಳಿ ಹುಡುಗಿ. ನನಗೆ ಇದೆಲ್ಲ ತೊಂದರೆಯೇ ಇಲ್ಲ’ ಎಂದರು ಅವರು.
ಇದನ್ನೂ ಓದಿ: ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿದೆ ನೈಜ ಘಟನೆ; ಶೀಘ್ರದಲ್ಲೇ ರಿಲೀಸ್
ಸೋಶಿಯಲ್ ಮೀಡಿಯಾದಲ್ಲಿ ಅನುಷಾ ರೈ ದೊಡ್ಡ ಮಟ್ಟದ ಹಿಂಬಾಲಕರನ್ನು ಪಡೆದಿದ್ದಾರೆ. ಅವರು ಆಗಾಗ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಬಿಗ್ ಬಾಸ್ಗೆ ಕಾಲಿಟ್ಟಿರೋದ್ರಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 pm, Sun, 29 September 24