ಬಿಗ್​ಬಾಸ್​ ಮನೆಯಲ್ಲಿ ನರಕ: ನರಕವಾಸಿಗಳು ಪಾಲಿಸಬೇಕಾದ ನಿಯಮಗಳೇನು?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದೆ. ಕಿಚ್ಚ ಸುದೀಪ್, ಈ ಸೀಸನ್​ನ ಸ್ಪರ್ಧಿಗಳನ್ನು ಪರಿಚಯ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಸ್ಪರ್ಧಿಗಳು ಮನೆ ಒಳಗೆ ಬಂದಿದ್ದಾರೆ. ಕೆಲವರನ್ನು ಸ್ವರ್ಗ ಕೆಲವರನ್ನು ನರಕಕ್ಕೆ ಕಳಿಸಲಾಗಿದೆ. ನರಕದಲ್ಲಿ ಕೆಲವು ಕಠಿಣ ನಿಯಮಗಳನ್ನು ಇರಿಸಲಾಗಿದೆ.

ಬಿಗ್​ಬಾಸ್​ ಮನೆಯಲ್ಲಿ ನರಕ: ನರಕವಾಸಿಗಳು ಪಾಲಿಸಬೇಕಾದ ನಿಯಮಗಳೇನು?
Follow us
ಮಂಜುನಾಥ ಸಿ.
|

Updated on: Sep 29, 2024 | 7:26 PM

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಬಿಗ್​ಬಾಸ್ ಹೊಸ ಸೀಸನ್​ಗೆ ಚಾಲನೆ ನೀಡಿದ್ದು ಈವರೆಗೆ ಮೂರು ಸ್ಪರ್ಧಿಗಳನ್ನು ಮನೆಯ ಒಳಗೆ ಕಳಿಸಿದ್ದಾರೆ. ನಿನ್ನೆ ನಾಲ್ಕು ಜನ ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಿದ್ದಾಗಿದೆ. ಬಿಗ್​ಬಾಸ್ ಮನೆಗೆ ಮೊದಲ ಹೋದ ಸ್ಪರ್ಧಿಗಳೆಂದರೆ ಕಿರುತೆರೆ ತಾರೆಯರಾದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರು ಈಗಾಗಲೇ ಬಿಗ್​ಬಾಸ್ ಮನೆ ಸೇರಿದ್ದಾರೆ. ಪ್ರತಿ ಬಾರಿ ಕಿಚ್ಚ ಸುದೀಪ್ ಬಿಗ್​ಬಾಸ್ ಮನೆ ಒಳಗೆ ಹೋಗಿ ಮನೆಯ ಪರಿಚಯ ಮಾಡಿಕೊಡುತ್ತಿದ್ದರು. ಆದರೆ ಈ ಬಾರಿ ಮನೆಗೆ ಮೊದಲು ಹೋಗಿರುವ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರುಗಳು ಮನೆಗೆ ಹೋಗಿ ಮನೆಯನ್ನು ನೋಡಿ ಖುಷಿ ಪಟ್ಟರು. ಈ ಸಮಯದಲ್ಲಿ ನರಕಕ್ಕೂ ಹೋಗಿ ಅಲ್ಲಿ ಬರೆದಿರುವ ನಿಯಮಗಳನ್ನು ಓದಿ ಹೇಳಿದರು.

ಬಿಗ್​ಬಾಸ್​ ಮನೆಯನ್ನು ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮನೆಗೆ ಬರುವ ಸ್ಪರ್ಧಿಗಳು ಸ್ವರ್ಗ ಅಥವಾ ನರಕ ಎರಡರಲ್ಲಿ ಒಂದಕ್ಕೆ ಹೋಗಬೇಕಿರುತ್ತದೆ. ಆಟ ಮುಂದುವರೆದಂತೆ ಆಟಗಾರರನ್ನು ಸ್ವರ್ಗ ಅಥವಾ ನರಕಕ್ಕೆ ಅದಲು-ಬದಲು ಮಾಡುತ್ತಾ ಬರುವ ಸಾಧ್ಯತೆ ಇದೆ. ಇದೀಗ ಬಿಗ್​ಬಾಸ್ ಮನೆಯನ್ನು ಮೊದಲು ಪ್ರವೇಶ ಮಾಡಿರುವ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರುಗಳು ನೇರವಾಗಿ ಸ್ವರ್ಗಕ್ಕೆ ಹೋಗಿದ್ದಾರೆ. ಮನೆಯನ್ನೆಲ್ಲ ಓಡಾಡಿ ಖುಷಿ ಪಟ್ಟ ಸ್ಪರ್ಧಿಗಳು ನರಕ ಇರುವ ಸ್ಥಳಕ್ಕೆ ಹೋಗಿ ಅಲ್ಲಿ ನಿಯಮಗಳನ್ನು ಓದಿದರು.

ಇದನ್ನೂ ಓದಿ:ಬಿಗ್​ಬಾಸ್ ಹೋಗೋ ಎಲ್ಲ ಸ್ಪರ್ಧಿಗಳ ಹೆಸರು ಲೀಕ್, ಯಾರು ಸ್ವರ್ಗಕ್ಕೆ? ಯಾರು ನರಕಕ್ಕೆ?

ನರಕದವರಿಗೆ ಮೀಸಲಾಗಿರುವ ಜಾಗದಲ್ಲಿ ಮಲಗಲು ಒಂದು ಹಾಸಿಗೆ ಒಂದು ದಿಂಬು ಮಾತ್ರವೇ ಇದೆ. ಆ ಜಾಗದಲ್ಲಿ ಕುಡಿಯುವ ನೀರಿಗೆ ಫಿಲ್ಟರ್ ಆಗಲಿ, ಫ್ರಿಡ್ಜ್ ಆಗಲಿ ಇಲ್ಲ. ಬದಲಿಗೆ ಒಂದು ಮಡಿಕೆ ಮಾತ್ರವೇ ಇದೆ, ಅದರಿಂದಲೇ ನೀರು ಕುಡಿಯಬೇಕು. ಅದರಲ್ಲಿ ನೀರು ಖಾಲಿಯಾದರೆ ಸ್ವರ್ಗದಲ್ಲಿರುವವರನ್ನು ಮನವಿ ಮಾಡಿ ಮತ್ತೆ ನೀರು ತುಂಬಿಸಿಕೊಳ್ಳಬೇಕು. ಬಿಗ್​ಬಾಸ್ ನಿಮಯದ ಪ್ರಕಾರ, ನರಕ ಸೇರುವ ಯಾವುದೇ ಸ್ಪರ್ಧಿಗಳು ತಮ್ಮ ಲಗೇಜನ್ನು ಸಹ ನರಕದಲ್ಲಿಯೇ ಇಡಬೇಕು. ಸ್ನಾನ ಮಾಡಲು ಸಹ ನಿಯಮಗಳಿವೆ. ಬಿಗ್​ಬಾಸ್​ ಮನೆಯ ಆವರಣದಲ್ಲಿರುವ ಮರದ ಬಳಿ ನಲ್ಲಿಯೊಂದನ್ನು ಅಳವಡಿಸಲಾಗಿದೆ. ಆ ನಲ್ಲಿಯಲ್ಲಿ ಬರುವ ನೀರನ್ನು ಹಿಡಿದುಕೊಂಡು ಅದರಲ್ಲಿಯೇ ಸ್ನಾನ ಮಾಡಬೇಕು. ನರಕವಾಸಿಗಳಿಗೆ ಊಟವನ್ನು ಬಿಗ್​ಬಾಸ್​ ನವರೇ ಕಳಿಸಿಕೊಡುತ್ತಾರೆ. ಯಾವುದೇ ಕಾರಣಕ್ಕೂ ಬಿಗ್​ಬಾಸ್ ನಿಯಮ ಮೀರಬಾರದು, ಸ್ವರ್ಗದವರಿಗೆ ಇರುವ ಯಾವುದೇ ಸವಲತ್ತುಗಳನ್ನು ಬಳಸುವಂತಿಲ್ಲ, ಟಾಯ್ಲೆಟ್ ಬಳಕೆಗೆ ಸಹ ಕೆಲವು ನಿಯಮಗಳಿವೆ’ ಬಿಗ್​ಬಾಸ್​ ಹಾಕಿರುವ ನಿಯಮಗಳನ್ನು ಸಹ ಮೀರುವಂತಿಲ್ಲ.

ಇನ್ನು ಸ್ವರ್ಗದಲ್ಲಿ ಸಾಕಷ್ಟು ಸೌಲಭ್ಯಗಳು ಇವೆ. ಮುಖ್ಯವಾಗಿ ಸ್ವರ್ಗ ನೋಡಲು ಬಹಳ ಸುಂದರವಾಗಿದೆ. ಮೆತ್ತನೆಯ ಹಾಸಗೆಗಳು, ಒಳ್ಳೆಯ ಅಡುಗೆ ಮನೆ ವ್ಯವಸ್ಥೆ, ಫ್ರಿಡ್ಜ್, ಕುಡಿಯುವ ನೀರಿನ ಫಿಲ್ಟರ್, ಕೂರಲು ಆರಾಮದಾಯಕ ಕುರ್ಚಿಗಳು, ಮೇಕಪ್ ರೂಂ, ಕನ್ನಡಿಗಳು, ಮೇಕಪ್ ಮಾಡಿಕೊಳ್ಳಲು ಜಾಗ, ಸ್ನಾನಕ್ಕೆ ಬಿಸಿ ನೀರು, ಜಿಮ್ ಮಾಡಲು ಸ್ಥಳ ಇನ್ನೂ ಹಲವು ಸವಲತ್ತುಗಳು ಸ್ವರ್ಗದಲ್ಲಿ ನೆಲೆಸುವವರಿಗೆ ಇದೆ. ಕೆಲ ಮೂಲಗಳ ಪ್ರಕಾರ, ಚೈತ್ರಾ ಕುಂದಾಪುರ ಸೇರಿದಂತೆ ಕೆಲವು ನಟ, ನಟಿಯರು ನರಕವಾಸಿಗಳಾಗಲಿದ್ದಾರೆ. ಕೆಲವರು ವೋಟಿಂಗ್ ಮೂಲಕ ಸ್ವರ್ಗಕ್ಕೆ ಕಳಿಸಲಾಗಿದೆ ಕೆಲವರನ್ನು ನರಕಕ್ಕೆ ಕಳಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು