‘ಬಿಗ್ ಬಾಸ್ ಬಗ್ಗೆ ಗೌರವ ಇಲ್ಲದ ವ್ಯಕ್ತಿನ ಏಕೆ ಕರೆಸಿದ್ರಿ?’; ಸ್ಪರ್ಧಿ ವಿರುದ್ಧ ವೇದಿಕೆ ಮೆಲೆ ಸಿಟ್ಟಾದ ಸುದೀಪ್
‘ನನಗೆ ನಾನೇ ನಾಯಕ...ನಿಮ್ಮನ್ನ ನಗ್ಸೋದೆ ನನ್ನ ಕಾಯಕ. ಕಾಫಿ ಕುಡಿಯೋ ಅಭ್ಯಾಸ ಇಲ್ಲ. ಕಂಟೆಂಟ್ ಕಾಪಿ ಮಾಡೋ ದುರಭ್ಯಾಸನೂ ಇಲ್ಲ. ಒರಿಜಿನಲ್ ಕಂಟೆಂಟ್ ಮಾತ್ರ’ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ಮಾಹಿತಿ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದ ಧನರಾಜ್ ಆಚಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಹೆಂಡತಿ ಹಾಗೂ ಕುಟುಂಬದ ಜೊತೆ ಅವರು ರೀಲ್ಸ್ ಮಾಡುತ್ತಾರೆ. ಕಾಮಿಡಿ ವಿಡಿಯೋಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಷ್ಟು ನಗಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
‘ನನಗೆ ನಾನೇ ನಾಯಕ…ನಿಮ್ಮನ್ನ ನಗ್ಸೋದೆ ನನ್ನ ಕಾಯಕ. ಕಾಫಿ ಕುಡಿಯೋ ಅಭ್ಯಾಸ ಇಲ್ಲ. ಕಂಟೆಂಟ್ ಕಾಪಿ ಮಾಡೋ ದುರಭ್ಯಾಸನೂ ಇಲ್ಲ. ಒರಿಜಿನಲ್ ಕಂಟೆಂಟ್ ಮಾತ್ರ’ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ಮಾಹಿತಿ ನೀಡಿದ್ದಾರೆ.
‘ಬಿಗ್ ಬಾಸ್’ ಬಗ್ಗೆ ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು. ‘ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು.
‘ನಾನು ಮಾಡಿರೋದು ತಮಾಷೆಗೆ. ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿಕೊಂಡರು. ಆ ಬಳಿಕ ಸುದೀಪ್ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು. ಧನರಾಜ್ಗೆ ಮಗು ಜನಿಸಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಮಗು ಜನಿಸಿದ ಬಳಿಕ ಅವರಿಗೆ ಬಿಗ್ ಬಾಸ್ನಿಂದ ಆಫರ್ ಬಂದಿತ್ತು. ಹೀಗಾಗಿ, ಇದನ್ನು ಅವರು ಒಪ್ಪಿಕೊಂಡರು.
ಇದನ್ನೂ ಓದಿ: ಡ್ಯಾನ್ಸ್ ಮಾಡುತ್ತಾ ಬಿಗ್ ಬಾಸ್ ಮನೆಗೆ ಬಂದ ಭವ್ಯಾ ಗೌಡ; ಟ್ರೋಲರ್ಸ್ಗೆ ಹಬ್ಬ?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಾಮಿಡಿ ಹೆಚ್ಚಿರಲಿ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದರು. ಈಗ ಧನರಾಜ್ ಆಚಾರ್ ಅವರು ದೊಡ್ಮನೆಗೆ ಬಂದಿರೋದ್ರಿಂದ ಹಾಸ್ಯವನ್ನು ನಿರೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:43 pm, Sun, 29 September 24