Bhavya Gowda: ಡ್ಯಾನ್ಸ್ ಮಾಡುತ್ತಾ ಬಿಗ್ ಬಾಸ್ ಮನೆಗೆ ಬಂದ ಭವ್ಯಾ ಗೌಡ; ಟ್ರೋಲರ್ಸ್ಗೆ ಹಬ್ಬ?
‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಭವ್ಯಾ ಗೌಡ ಅವರ ಆಗಮನ ಆಗುತ್ತದೆ ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಬರುತ್ತಾ ಇತ್ತು. ಕೊನೆಗೂ ಈ ವಿಚಾರ ನಿಜವಾಗಿದೆ. ಅವರು ದೊಡ್ಮನೆಗೆ ಬಂದಿದ್ದಾರೆ. ಸುದೀಪ್ ಅವರು ಭವ್ಯಾ ಅವರನ್ನು ಸ್ವಾಗತಿಸಿದ್ದಾರೆ.
‘ಗೀತಾ’ ಧಾರಾವಾಹಿ ಮೂಲಕ ಭವ್ಯಾ ಗೌಡ ಸಖತ್ ಫೇಮಸ್ ಆದರು. ಈಗ ಅವರು ಬಿಗ್ ಬಾಸ್ ಮನೆಗೆ *** ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ‘ಗೀತಾ’ ಧಾರಾವಾಹಿಯಲ್ಲಿ ಸಖತ್ ರಗಡ್ ಪಾತ್ರದಲ್ಲಿ ಮಿಂಚಿದ್ದರು. ಅವರು ಧಾರಾವಾಹಿಯಲ್ಲಿ ಫೈಟ್ ಕೂಡ ಮಾಡಿದ್ದರು. ಈಗ ಅವರು ಬಿಗ್ ಬಾಸ್ ಮನೆಯಲ್ಲೂ ಹಾಗೆಯೇ ಕಾಣಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಭವ್ಯಾ ಗೌಡ ಅವರ ಆಗಮನ ಆಗುತ್ತದೆ ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಬರುತ್ತಾ ಇತ್ತು. ಕೊನೆಗೂ ಈ ವಿಚಾರ ನಿಜವಾಗಿದೆ. ಅವರು ದೊಡ್ಮನೆಗೆ ಬಂದಿದ್ದಾರೆ. ಸುದೀಪ್ ಅವರು ಭವ್ಯಾ ಅವರನ್ನು ಸ್ವಾಗತಿಸಿದ್ದಾರೆ. ಬಿಗ್ ಬಾಸ್ಗೆ ಬಂದ ಉದ್ದೇಶ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಭವ್ಯಾ ಅವರು ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. 2009ರಲ್ಲಿ ‘ಮಿಸ್ ಇಂಗ್ಲೆಂಡ್ ಅರ್ತ್’ನ ಫೈನಲಿಸ್ಟ್ ಆಗಿದ್ದರು. ಇದರ ಜೊತೆಗೆ 2002ರಲ್ಲಿ ‘ಮಿಸ್ ಇಂಡಿಯಾ ಪರ್ಸಾನಲಿಟಿ’ ಆಗಿದ್ದರು. ಇದಲ್ಲದೆ ಇನ್ನೂ ಕೆಲವು ಅವಾರ್ಡ್ ಫಂಕ್ಷನ್ಗಳಲ್ಲಿ ಅವರು ಕಾಣಿಸಿಕೊಂಡಿದ್ದರು.
‘ಖುಷಿ ಆಗುತ್ತಿದೆ. ನನ್ನನ್ನು ಅರ್ಥ ಮಾಡಿಕೊಳ್ಳೋಕೆ ಒಂದು ಅವಕಾಶ ಸಿಕ್ಕಿದೆ. ಧಾರಾವಾಹಿಯಲ್ಲಿ ಒಂದು ಪಾತ್ರ ನಿಭಾಯಿಸುತ್ತಿದ್ದೆ. ನನ್ನನ್ನು ತೋರಿಸಿಕೊಳ್ಳೋದಕ್ಕೆ ಒಂದು ಅವಕಾಶ. ಪ್ರೋಮೋ ಬಿಟ್ಟಾಗ ಟೆನ್ಷನ್ ಶುರುವಾಯಿತು. ಗೊಂದಲ ಇದೆ’ ಎಂದರು. ‘ನಿಮ್ಮಿಂದ ಟ್ರೋಲ್ಗಳಿಗೆ ಸಖತ್ ಖುಷಿ ಆಗುತ್ತದೆ’ ಎಂದರು ಸುದೀಪ್.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಎಂಟ್ರಿ ಪಡೆದ ನಾಲ್ಕು ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ-ನರಕ ಕಾನ್ಸೆಪ್ಟ್ ಇದೆ. ಈ ಬಾರಿ ಭವ್ಯಾ ಗೌಡ ಅವರು ಸ್ವರ್ಗಕ್ಕೆ ತೆರಳಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:09 pm, Sun, 29 September 24