‘ನಾವು ಬಿಗ್ ಬಾಸ್ ಮನೆಯಲ್ಲಿ ಮಾತ್ರ ಒಟ್ಟಾಗಿ ಮಲಗಿಲ್ಲ’; ತುಕಾಲಿ ಸಂತೋಷ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಎಂದಮೇಲೆ ಎಂಟರ್ಟೇನ್ಮೆಂಟ್ ಬೇಕೆ ಬೇಕು. ಕಳೆದ ಸೀಸನ್ನಲ್ಲಿ ತುಕಾಲಿ ಸಂತೋಷ್ ಅವರನ್ನು ಕಳುಹಿಸಿಕೊಡೋಕೆ ಅವರ ಪತ್ನಿ ಮಾನಸಾ ಬಂದಿದ್ದರು. ಈ ಬಾರಿ ಪತ್ನಿನ ಕಳುಹಿಸಿಕೊಡೋಕೆ ತುಕಾಲಿ ಸಂತೋಷ್ ಬಂದಿದ್ದಾರೆ.
ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಆಗಮಿಸಿದ್ದರು. ಅವರು ಕೊನೆಯವರೆಗೂ ಇದ್ದರು. ಅವರು ದೊಡ್ಮನೆಯಲ್ಲಿ ಇದ್ದಾಗ ಮನೆಯಿಂದ ಒಬ್ಬರಿಗೆ ಬರೋಕೆ ಅವಕಾಶ ಇತ್ತು. ಆಗ ಬಂದಿದ್ದು ಅವರ ಪತ್ನಿ ಮಾನಸ. ಅವರು ಬಿಗ್ ಬಾಸ್ನಲ್ಲಿ ಇದ್ದ ಕೆಲವೇ ನಿಮಿಷಗಳಲ್ಲಿ ಸಖತ್ ಮನರಂಜನೆ ನೀಡಿದ್ದರು. ಈಗ ಅವರು ‘ಬಿಗ್ ಬಾಸ್ ಸೀಸನ್ 11’ರ ಸ್ಪರ್ಧಿ ಆಗಿದ್ದಾರೆ. ಈ ಮೂಲಕ ಅಪರೂದ ದಾಖಲೆ ಬರೆದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಎಂದಮೇಲೆ ಎಂಟರ್ಟೇನ್ಮೆಂಟ್ ಬೇಕೆ ಬೇಕು. ದೊಡ್ಮನೆಗೆ ಬಂದಿರೋ ಮಾನಸಾ ಕಾಮಿಡಿ ಮಾಡೋದು ಪಕ್ಕಾ. ಕಳೆದ ಸೀಸನ್ನಲ್ಲಿ ತುಕಾಲಿ ಸಂತೋಷ್ ಅವರನ್ನು ಕಳುಹಿಸಿಕೊಡೋಕೆ ಮಾನಸಾ ಬಂದಿದ್ದರು. ಈ ಬಾರಿ ಪತ್ನಿನ ಕಳುಹಿಸಿಕೊಡೋಕೆ ತುಕಾಲಿ ಸಂತೋಷ್ ಬಂದಿದ್ದಾರೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು ಎನ್ನಬಹುದು.
ತುಕಾಲಿ ಸಂತೋಷ್ ಅವರು ಅಲ್ಲಿ ಆಗಮಿಸಿದ್ದರು. ಈ ವೇಳೆ, ‘ನಾನು ಹಾಗೂ ನನ್ನ ಪತ್ನಿ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಒಟ್ಟಾಗಿ ಮಲಗಿಲ್ಲ’ ಎಂದರು ಸಂತೋಷ್. ಈ ಮಾತಿಗೆ ಸುದೀಪ್ ನಕ್ಕರು.
ಇದನ್ನೂ ಓದಿ: ‘ಬಿಗ್ ಬಾಸ್ ಬಗ್ಗೆ ಗೌರವ ಇಲ್ಲದ ವ್ಯಕ್ತಿನ ಏಕೆ ಕರೆಸಿದ್ರಿ?’; ಸ್ಪರ್ಧಿ ವಿರುದ್ಧ ವೇದಿಕೆ ಮೆಲೆ ಸಿಟ್ಟಾದ ಸುದೀಪ್
ಪತಿ ಹಾಗೂ ಪತ್ನಿ ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗಿದ್ದು ಈವರೆಗೆ ನಡೆದಿಲ್ಲ. ಆದರೆ, ಒಂದು ವರ್ಷ ಪತಿ ಮತ್ತೊಂದು ವರ್ಷ ಪತ್ನಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಇದೇ ಮೊದಲು. ಈ ಮೂಲಕ ಇವರು ದಾಖಲೆ ಬರೆದಿದ್ದಾರೆ ಎನ್ನಬಹುದು.
ಮಾನಸಾ ಅವರು ‘ಗಿಚ್ಚಿ ಗಿಲಿಗಿಲಿ 3’ನಲ್ಲಿ ಕಾಣಿಸಿಕೊಂಡಿದ್ದರು. ತುಕಾಲಿ ಸಂತೋಷ್ ಕೂಡ ಈ ಶೋನಲ್ಲಿ ಇದ್ದರು. ಈಗ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರಿಗೆ ನರಕ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:22 pm, Sun, 29 September 24