‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಅಖಾಡಕ್ಕೆ ಬಂದ ಮಧ್ಯಮ ವರ್ಗದ ಹುಡುಗ ತ್ರಿವಿಕ್ರಮ್

ಕ್ರಿಕೆಟರ್​ ಹಾಗೂ ನಟನಾಗಿ ಗುರುತಿಸಿಕೊಂಡ ತ್ರಿವಿಕ್ರಮ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಮಧ್ಯಮ ವರ್ಗದಿಂದ ಬಂದಿರುವ ಅವರಿಗೆ ಈ ವೇದಿಕೆ ತುಂಬ ಮುಖ್ಯವಾಗುತ್ತಿದೆ. ಕಿರುತೆರೆ ನಟ ಶಿಶರ್​ ಅವರಿಗೆ ಪೈಪೋಟಿ ನೀಡುತ್ತಾ ತ್ರಿವಿಕ್ರಮ್​ ಅವರು ದೊಡ್ಮನೆ ಪ್ರವೇಶಿಸಿದ್ದಾರೆ. ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ಮಾಹಿತಿ..

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಅಖಾಡಕ್ಕೆ ಬಂದ ಮಧ್ಯಮ ವರ್ಗದ ಹುಡುಗ ತ್ರಿವಿಕ್ರಮ್
ತ್ರಿವಿಕ್ರಮ್
Follow us
ಮದನ್​ ಕುಮಾರ್​
|

Updated on: Sep 29, 2024 | 9:06 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋ ಅದ್ದೂರಿಯಾಗಿ ಆರಂಭ ಆಗಿದೆ. ಸಿನಿಮಾ, ಕಿರುತೆರೆ, ಸೋಶಿಯಲ್​ ಮೀಡಿಯಾ ಮುಂತಾದ ಕ್ಷೇತ್ರದಲ್ಲಿ ಸದ್ದು ಮಾಡಿದ ವ್ಯಕ್ತಿಗಳು ಬಿಗ್ ಬಾಸ್​ ಅಖಾಡಕ್ಕೆ ಬಂದಿದ್ದಾರೆ. ಕ್ರಿಕೆಟರ್ ಆಗಬೇಕು ಅಂತ ಕನಸು ಕಂಡ ತ್ರಿವಿಕ್ರಮ್ ಅವರು ಕೂಡ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಅವರಿಗೆ ಸೀರಿಯಲ್ ನಟ ಶಿಶಿರ್ ಅವರು ಪೈಪೋಟಿ ನೀಡಿದ್ದಾರೆ. ಅನುಷಾ ರೈ, ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್​, ಧನರಾಜ್​, ಗೌತಮಿ ಜಾಧವ್, ಭವ್ಯಾ ಗೌಡ, ಯಮುನಾ ಶ್ರೀನಿಧಿ ಮುಂತಾದವರು ಕೂಡ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ.

ಝಗಮಗಿಸುವ ವೇದಿಕೆಯಲ್ಲಿ ತ್ರಿವಿಕ್ರಮ್​ ಅವರು ಎಂಟ್ರಿ ನೀಡಿದ್ದಾರೆ. ಸಿಸಿಎಲ್​ನಲ್ಲಿ ಅವರು ಆಟ ಆಡಿದ ಅನುಭವ ಹೊಂದಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಅವರು ಬಿಗ್​ ಬಾಸ್​ನಲ್ಲೇ ಇದ್ದರೆ ಜನವರಿಯಲ್ಲಿ ಸಿಸಿಎಲ್​ ಬಂದಾಗ ಏನು ಮಾಡೋದು ಎಂದು ಸುದೀಪ್​ ಅವರು ಕಾಲೆಳೆದರು. ತ್ರಿವಿಕ್ರಮ್​ ಅವರು ಎಷ್ಟು ವಾರಗಳ ಕಾಲ ಬಿಗ್ ಬಾಸ್​ ಮನೆಯಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.

ಕಳೆದ 6 ವರ್ಷಗಳಿಂದ ತ್ರಿವಿಕ್ರಮ್​ ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಮಧ್ಯಮವರ್ಗದಿಂದ ಬಂದಿರುವ ಜನರಿಗೆ ಬಿಗ್​ ಬಾಸ್​ ರೀತಿಯ ಒಂದು ವೇದಿಕೆ ಖಂಡಿತವಾಗಿಯೂ ಬೇಕು. ನಮ್ಮ ಅಪ್ಪ ಡ್ರೈವರ್​, ಅಮ್ಮ ಗೃಹಿಣಿ. ಕ್ರಿಕೆಟರ್​ ಆಗಬೇಕು ಅಂತ ಕನಸು ಇಟ್ಟುಕೊಂಡು ನಾನು ಬೆಂಗಳೂರಿಗೆ ಬಂದವನು’ ಎಂದು ತ್ರಿವಿಕ್ರಮ್​ ಅವರು ಹೇಳಿದ್ದಾರೆ.

‘ನಾನು ಕ್ರಿಕೆಟರ್ ಆಗಬೇಕು ಅಂತ ಬೆಂಗಳೂರಿಗೆ ಬಂದೆ. ಆದರೆ ಕ್ರಿಕೆಟರ್ ಆಗಲು ಒಂದು ಹಿನ್ನೆಲೆ ಬೇಕು ಅಂತ ಗೊತ್ತಾಯಿತು. ಜಿಮ್​ ಟ್ರೇನರ್​ ಆಗಿ ಸೇರಿಕೊಂಡೆ. ಅಲ್ಲಿ ಜನರ ಪರಿಚಯ ಆಯಿತು. ಸಿರಿಯಲ್ ಮತ್ತು ಸಿನಿಮಾದ ಅವಕಾಶಗಳು ಸಿಕ್ಕವು. ಆದರೆ ಅಷ್ಟರಲ್ಲೇ ಲಾಕ್​ಡೌನ್​ ಶುರುವಾಯಿತು. ಲಾಕ್​ಡೌನ್​ ಬಂದಿದ್ದರಿಂದ ನಮಗೆ ದೊಡ್ಡ ಹಿನ್ನಡೆ ಆಯಿತು’ ಎಂದಿದ್ದಾರೆ ತ್ರಿವಿಕ್ರಮ್.

ಇದನ್ನೂ ಓದಿ: ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ

‘ನನಗೆ ಅಡುಗೆ ಬರುತ್ತದೆ. ಯಾವುದೇ ಕೆಲಸವನ್ನೂ ನೀಟಾಗಿ ಮಾಡುತ್ತೇನೆ. ಸ್ಪೋರ್ಟ್ಸ್​, ಜಿಮ್​ ಮತ್ತು ನಟನೆಯ ಅನುಭವವನ್ನು ಬಿಗ್​ ಬಾಸ್​ ಮನೆಯಲ್ಲಿ ಬಳಸಿಕೊಳ್ಳುತ್ತೇನೆ’ ಎಂದು ತ್ರಿವಿಕ್ರಮ್​ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡುವಾಗ ತ್ರಿವಿಕ್ರಮ್​ ಅವರು ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್