AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿದೆ ನೈಜ ಘಟನೆ; ಶೀಘ್ರದಲ್ಲೇ ರಿಲೀಸ್​

ಟೀಸರ್​ ಮತ್ತು ಟ್ರೇಲರ್​ ಮೂಲಕ ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾ ಸದ್ದು ಮಾಡುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ಮೂಡಿಬಂದಿದೆ. ಹೀರೋ ಆಗಿ ವಿವಾನ್ ಕೆ.ಕೆ. ನಟಿಸಿದ್ದಾರೆ. ಅವರಿಗೆ ಅನುಷಾ ರೈ ಜೋಡಿಯಾಗಿದ್ದಾರೆ. ನಟ ಧ್ರುವ ಸರ್ಜಾ ಅವರು ಈ ಸಿನಿಮಾದ ಟ್ರೇಲರ್ ನೋಡಿ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಸಿನಿಮಾದ ವಿಶೇಷತೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಂಡ ಮಾಹಿತಿ ನೀಡಿದೆ.

‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿದೆ ನೈಜ ಘಟನೆ; ಶೀಘ್ರದಲ್ಲೇ ರಿಲೀಸ್​
ವಿವಾನ್ ಕೆ.ಕೆ, ಅನುಷಾ ರೈ
ಮದನ್​ ಕುಮಾರ್​
|

Updated on: Feb 11, 2024 | 2:26 PM

Share

ಡಿಫರೆಂಟ್​ ಶೀರ್ಷಿಕೆಯೊಂದಿಗೆ ಗಮನ ಸೆಳೆದಿರುವ ‘ಧೈರ್ಯಂ ಸರ್ವತ್ರ ಸಾಧನಂ’ (ಡಿಎಸ್‌ಎಸ್) ಸಿನಿಮಾ ಟೀಸರ್ ಹಾಗೂ ಟ್ರೇಲರ್​ ರಿಲೀಸ್​ ಕಾರ್ಯಕ್ರಮವು ಕಲಾವಿದರ ಸಂಘದ ಕಟ್ಟಡದಲ್ಲಿ ಅದ್ದೂರಿಯಾಗಿ ನಡೆದಿದೆ. ಎ.ಆರ್. ಸಾಯಿರಾಮ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ‘ಡಿಎಸ್‌ಎಸ್’ (DSS) ಸಿನಿಮಾಗೆ ಉದ್ಯಮಿ ಆನಂದ್ ಬಾಬು ಜಿ. ಅವರು ಬಂಡವಾಳ ಹೂಡಿದ್ದಾರೆ. ‘ಎ.ಪಿ. ಪ್ರೊಡಕ್ಷನ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಫೆಬ್ರವರಿ 23ರಂದು ‘ಧೈರ್ಯಂ ಸರ್ವತ್ರ ಸಾಧನಂ’ (Dhairyam Sarvatra Sadhanam) ಸಿನಿಮಾ ಬಿಡುಗಡೆ ಆಗಲಿದೆ.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಹನುಮಂತನಾಥ ಸ್ವಾಮೀಜಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲರೂ ಈ ತಂಡಕ್ಕೆ ಶುಭ ಕೋರಿದರು. ಇದಕ್ಕೂ ಮೊದಲು ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ಟ್ರೇಲರ್ ಬಿಡುಗಡೆ ಮಾಡಿ, ಆಲ್​ ದಿ ಬೆಸ್ಟ್​ ಹೇಳಿದ ವಿಡಿಯೋ ಬಿತ್ತರ ಆಯಿತು. ಸಿನಿಮಾ ಶುರುವಾಗಿದ್ದು ಹೇಗೆ ಎಂಬುದನ್ನು ಸ್ಕಿಟ್​ ಮೂಲಕ ಕಲಾವಿದರು, ತಂತ್ರಜ್ಞರು ವಿವರಿಸಿದರು.

‘ಬಿಡಿ ಭಾಗಗಳು ಕೂಡಿ ಒಂದು ಗನ್ ಆಗಿದೆ. ಅದೇ ರೀತಿ ಒಬ್ಬೊಬ್ಬರೇ ಸೇರಿಕೊಂಡು ಈ ಸಿನಿಮಾ ಸಿದ್ದವಾಗಿದೆ. ಇದು ಸತ್ಯ ಘಟನೆಯ ಅಂಶಗಳಿರುವ ಸಿನಿಮಾ. ಯಾರ ಕಥೆ? ಎಲ್ಲಿ ನಡೆದಿದ್ದು ಎಂಬುದನ್ನು ಸಿನಿಮಾದ ಕೊನೆಯಲ್ಲಿ ತೋರಿಸುತ್ತೇವೆ. ಆ ವ್ಯಕ್ತಿಗಳ ಭಾವಚಿತ್ರ ಮತ್ತು ಪೂರ್ಣ ವಿವರಗಳು ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. ಅವರ ಬಳಿ ತೆರಳಿ ಈಗಾಗಲೇ ಅನುಮತಿ ಪಡೆದಿದ್ದೇವೆ. ಘಟನೆ ನಡೆದ ಸ್ಥಳಗಳಲ್ಲಿ ಶೂಟಿಂಗ್​ ಮಾಡಲಾಗಿದೆ. ನಾಯಕನ ಪಾತ್ರ ಬದುಕಿದ್ದು, ಸಿನಿಮಾ ನೋಡಲು ಅವರು ಬರುತ್ತಾರೆ’ ಎಂದು ನಿರ್ದೇಶಕ ಸಾಯಿರಾಮ್​ ಮಾಹಿತಿ ಹಂಚಿಕೊಂಡರು.

‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದ ಸುದ್ದಿಗೋಷ್ಠಿ

‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾಗೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೃದಯಶಿವ, ಅರಸು ಅಂತಾರೆ, ಕಿನ್ನಾಳ್‌ ರಾಜ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವಿಕುಮಾರ್ ಸನಾ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಕುಂಗ್​ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಯಾಪ್ಟನ್ ಕಿಶೋರ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗೆ ಇದೆ. ತುಮಕೂರು, ದೇವರಾಯನದುರ್ಗ, ಕೊರಟಗೆರೆ ಮುಂತಾದ ಕಡೆಗಳಲ್ಲಿ ಶೂಟಿಂಗ್​ ಮಾಡಲಾಗಿದೆ.

ಇದನ್ನೂ ಓದಿ: ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರಕ್ಕೆ ಸಿಕ್ತು ವಸಿಷ್ಠ ಸಿಂಹ, ಪಾ. ರಂಜಿತ್​ ಬೆಂಬಲ

ಈ ಸಿನಿಮಾದಲ್ಲಿ ಹೀರೋ ಆಗಿ ವಿವಾನ್ ಕೆ.ಕೆ. ನಟಿಸಿದ್ದಾರೆ. ಅವರಿಗೆ ಅನುಷಾ ರೈ ನಾಯಕಿಯಾಗಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಯಶ್‌ ಶೆಟ್ಟಿ, ಬಲರಾಜ ವಾಡಿ, ವರ್ಧನ್, ಚಕ್ರವರ್ತಿ ಚಂದ್ರಚೂಡ್, ಪ್ರದೀಪ್‌ ಪೂಜಾರಿ, ಮೀನಾ, ಪದ್ಮಿನಿ ಶೆಟ್ಟಿ, ರಾಮ್‌ ಪವನ್, ಅರ್ಜುನ್‌ ಪಾಳೆಗಾರ, ಹೊಂಗಿರಣ ಚಂದ್ರು, ರಾಮ್‌ ನಾಯಕ್ ಮುಂತಾದವರು ನಟಿಸಿದ್ದಾರೆ. ರಂಗಭೂಮಿ ಕಲಾವಿದರಿಗೆ ಚಾನ್ಸ್​ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ